AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GDP: 2022ರ ಹಣಕಾಸು ವರ್ಷದಲ್ಲಿ ಶೇ 9.2ರ ಜಿಡಿಪಿ ಬೆಳವಣಿಗೆ ಅಂದಾಜಿಸಿದ ಸರ್ಕಾರ

ಹಣಕಾಸು ವರ್ಷ 2022ಕ್ಕೆ ಜಿಡಿಪಿ ಬೆಳವಣಿಗೆ ದರ ಶೇ 9.2ರಷ್ಟು ಸರ್ಕಾರದಿಂದ ನಿರೀಕ್ಷೆ ಮಾಡಲಾಗಿದೆ ಎಂದು ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.

GDP: 2022ರ ಹಣಕಾಸು ವರ್ಷದಲ್ಲಿ ಶೇ 9.2ರ ಜಿಡಿಪಿ ಬೆಳವಣಿಗೆ ಅಂದಾಜಿಸಿದ ಸರ್ಕಾರ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jan 07, 2022 | 11:53 PM

Share

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಪ್ರಕಾರ, FY22ರಲ್ಲಿ ಭಾರತದ ಜಿಡಿಪಿ (GDP) ಶೇಕಡಾ 9.2ರಷ್ಟು ಬೆಳವಣಿಗೆ ಆಗಲಿದೆ. ಭಾರತೀಯ ಆರ್ಥಿಕತೆಯ ವಿಸ್ತರಣೆಯು ಜನವರಿ 7ರಂದು ಬಿಡುಗಡೆಯಾದ 2021-22ರ ಅಂಕಿ- ಅಂಶಗಳ ಸಚಿವಾಲಯದ ಜಿಡಿಪಿಯ ಮೊದಲ ಮುಂಗಡ ಅಂದಾಜಿನ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಮುನ್ಸೂಚನೆಗಿಂತ ಕಡಿಮೆ ಆಗಿದೆ. ಕೇಂದ್ರೀಯ ಬ್ಯಾಂಕ್ ಕಳೆದ ತಿಂಗಳು FY22ಕ್ಕಾಗಿ ತನ್ನ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ 9.5 ಎಂದು ಮತ್ತೊಮ್ಮೆ ಹೇಳಿತು. FY22ಕ್ಕಾಗಿ ಅಂದಾಜು ಶೇ 9.2 ಜಿಡಿಪಿ ಬೆಳವಣಿಗೆ ದರವು ಕನಿಷ್ಠ 17 ವರ್ಷಗಳಲ್ಲಿ ಅತ್ಯಧಿಕವಾಗಿದೆ. ಅತ್ಯಂತ ಅನುಕೂಲಕರವಾದ ಮೂಲ ಪರಿಣಾಮದ ನೆರವಿನಿಂದ ಇದು ಆಗಿದೆ. ಕೊವಿಡ್-19 ಕಾರಣದಿಂದಾಗಿ FY21ರಲ್ಲಿ ಜಿಡಿಪಿ ಶೇ 7.3ರಷ್ಟು ಕುಗ್ಗಿದೆ.

ಮೊದಲ ಮುಂಗಡ ಅಂದಾಜಿನ ಪ್ರಕಾರ, ಹಣಕಾಸು ವರ್ಷದ ಮೊದಲ ಎರಡರಿಂದ ಮೂರು ತ್ರೈಮಾಸಿಕಗಳಿಗೆ ಲಭ್ಯವಿರುವ ಡೇಟಾವನ್ನು ಆಧರಿಸಿ, FY22ಕ್ಕಾಗಿ ಒಟ್ಟು ಮೌಲ್ಯದ ಬೆಳವಣಿಗೆಯನ್ನು ಶೇ 8.6ಕ್ಕೆ ನಿಗದಿಪಡಿಸಲಾಗಿದೆ. ನಾಮಿನಲ್ ಪರಿಭಾಷೆಯಲ್ಲಿ FY22ರಲ್ಲಿ ಜಿಡಿಪಿ ಶೇ 17.6ರ ಬೆಳವಣಿಗೆಯನ್ನು ಕಾಣಬಹುದು. 2021ರ ಏಪ್ರಿಲ್​ನಿಂದ ಸೆಪ್ಟೆಂಬರ್‌ನಲ್ಲಿ ಭಾರತದ ಜಿಡಿಪಿ ಶೇ 13.7ರ ಬೆಳವಣಿಗೆಯೊಂದಿಗೆ ಮೊದಲ ಮುಂಗಡ ಅಂದಾಜಿನ ಪ್ರಕಾರ, FY22ರ ದ್ವಿತೀಯಾರ್ಧದಲ್ಲಿ ಜಿಡಿಪಿ ಶೇ 5.6ರಷ್ಟು ಬೆಳೆಯಲಿದೆ. ಕಳೆದ ತಿಂಗಳು ಆರ್​ಬಿಐ ಮುನ್ಸೂಚನೆಯು ಭಾರತದ ಜಿಡಿಪಿ 2021ರ ಅಕ್ಟೋಬರ್-ಡಿಸೆಂಬರ್​ನಲ್ಲಿ ಶೇ 6.6 ಮತ್ತು 2022 ಜನವರಿ-ಮಾರ್ಚ್​ನಲ್ಲಿ ಶೇಕಡಾ 6ರಷ್ಟು ಬೆಳವಣಿಗೆಯನ್ನು ಕಾಣಲಿದೆ ಎಂದು ಹೇಳಿದೆ.

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಹಿರಂಗಪಡಿಸಿದ ಜಿಡಿಪಿ ಮುಂಗಡ ಅಂದಾಜಿನ ಕುರಿತು ಪ್ರತಿಕ್ರಿಯಿಸಿದ ICRA ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಮಾತನಾಡಿ, “ನೈಜ ಜಿಡಿಪಿ ಮತ್ತು ಜಿವಿಎ ಬೆಳವಣಿಗೆಯ ಮುಂಗಡ ಅಂದಾಜುಗಳು (ಕ್ರಮವಾಗಿ 9.0 ಶೇಕಡಾ, 8.8 ಶೇಕಡಾ ಮತ್ತು 17.5 ಶೇಕಡಾ) ಮತ್ತು ನಾಮಿನಲ್ ಜಿಡಿಪಿ ವಿಸ್ತರಣೆಯು ವಿಶಾಲವಾಗಿ ನಮ್ಮ ಸ್ವಂತ ನಿರೀಕ್ಷೆಗಳಿಗೆ ಅನುಗುಣವಾಗಿದೆ.” “NSO ನಿರ್ಮಿಸಿದ H2 FY2022ಗಾಗಿ ಶೇ 5.6ರ ಸೂಚ್ಯ ಜಿಡಿಪಿ ಬೆಳವಣಿಗೆಯು ಒಮಿಕ್ರಾನ್​ನ ಒಪ್ಪಿಕೊಳ್ಳಬಹುದಾದ ಬದಲಾವಣೆ ಪ್ರಭಾವಕ್ಕೆ ಸಂಪೂರ್ಣವಾಗಿ ಕಾರಣ ಆಗುವುದಿಲ್ಲ. FY2022 Q3ರಲ್ಲಿ ಶೇ 6.0ರಿಂದ ಶೇ 6.5ರಷ್ಟು ಏರಿಕೆಯಾದ ನಂತರ ಜಿಡಿಪಿ ವಿಸ್ತರಣೆಯು ನಡೆಯುತ್ತಿರುವ ತ್ರೈಮಾಸಿಕದಲ್ಲಿ ಶೇ ಐದಕ್ಕಿಂತ ಕೆಳಗೆ ಇಳಿಯುತ್ತದೆ ಎಂಬುದು ನಮ್ಮ ಅರ್ಥವಾಗಿದೆ,” ಎಂದಿದ್ದಾರೆ.

ಮೂರನೇ ಅಲೆಯಲ್ಲಿ ಸಾಂಕ್ರಾಮಿಕದ ಕಾರಣಕ್ಕೆ ಪೂರೈಕೆ ಅಡಚಣೆಗಳು, ಕಲ್ಲಿದ್ದಲು, ವಿದ್ಯುತ್ ಮತ್ತು ಸೆಮಿಕಂಡಕ್ಟರ್ ಕೊರತೆಗಳನ್ನು ಪರಿಗಣಿಸಿ ಬ್ರಿಕ್‌ವರ್ಕ್ ರೇಟಿಂಗ್‌ಗಳು ಸಹ ಹೇಳಿರುವಂತೆ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MOSPI) ಬಿಡುಗಡೆ ಮಾಡಿದ FY22ಗಾಗಿ ಜಿಡಿಪಿಯ ಮುಂಗಡ ಅಂದಾಜು ಶೇ 9.2ರಷ್ಟು ಹೆಚ್ಚು ಆಶಾದಾಯಕವಾಗಿದೆ.

“ಅಂದಾಜುಗಳಂತೆ ಮುಂದಿನ ಹಣಕಾಸು ವರ್ಷದಲ್ಲಿ ಮುಂಬರುವ ಬಜೆಟ್​ಗೆ ಅತ್ಯಗತ್ಯವಾದ ಇನ್​ಪುಟ್ ಆಗಿ ಕಾರ್ಯನಿರ್ವಹಿಸುತ್ತವೆ. ಶೇ 17.6ರಷ್ಟು ನಾಮಿನಲ್ ಜಿಡಿಪಿ ಹೆಚ್ಚಳವು ಸರ್ಕಾರಕ್ಕೆ ಹೆಚ್ಚುವರಿ ವೆಚ್ಚದ ಜಾಗವನ್ನು ಒದಗಿಸುತ್ತದೆ. ನಾಮಿನಲ್ ಜಿಡಿಪಿ ಅಂದಾಜಿನ ಪ್ರಕಾರ, FY22ಗಾಗಿ ಬಜೆಟ್ ವಿತ್ತೀಯ ಕೊರತೆಯು ಜಿಡಿಪಿಯ ಶೇ 6.5ರಷ್ಟು ಆಗುತ್ತದೆ. ಬಂಡವಾಳ ಹಿಂತೆಗೆದುಕೊಳ್ಳುವಿಕೆಯಲ್ಲಿನ ಕೊರತೆ ಮತ್ತು ಪೂರಕ ಅನುದಾನಗಳಿಗೆ ಹೆಚ್ಚುವರಿ ಬೇಡಿಕೆಯ ಹೊರತಾಗಿಯೂ FY22ರಲ್ಲಿ ಜಿಡಿಪಿ ಯ ಶೇ 6.8 ವಿತ್ತೀಯ ಕೊರತೆ ಗುರಿಯನ್ನು ಸಾಧಿಸುವ ಸಾಧ್ಯತೆಯಿದೆ. ನಾಮಿನಲ್ ಜಿಡಿಪಿಯಲ್ಲಿನ ಶೇ 17.6 ಹೆಚ್ಚಳವು ಜಿಡಿಪಿ ಅನುಪಾತಕ್ಕೆ ಸಾಲದಲ್ಲಿ ಗಣನೀಯ ಇಳಿಕೆಗೆ ಕಾರಣವಾಗುತ್ತದೆ, ಇದು FRBMನ ಕೇಂದ್ರಬಿಂದುವಾಗಿದೆ.”

ಇದನ್ನೂ ಓದಿ: GDP: ಭಾರತದ ಜಿಡಿಪಿ FY22ಕ್ಕೆ ಶೇ 9.5ರಷ್ಟಾಗುವ ಅಂದಾಜು ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ