Union Budget 2022: ಆದಾಯ ತೆರಿಗೆ ಸ್ಲ್ಯಾಬ್ ಲೆಕ್ಕಾಚಾರ ಅರ್ಥ ಮಾಡಿಕೊಳ್ಳುವುದು ಹೇಗೆ? ನೀವೆಷ್ಟು ತೆರಿಗೆ ಪಾವತಿಸಬೇಕು?

ಕೇಂದ್ರ ಬಜೆಟ್ 2022ರ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್​ಗಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ನಿಮ್ಮ ಆದಾಯ ತೆರಿಗೆ ಪಾವತಿ ದರವನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Union Budget 2022: ಆದಾಯ ತೆರಿಗೆ ಸ್ಲ್ಯಾಬ್ ಲೆಕ್ಕಾಚಾರ ಅರ್ಥ ಮಾಡಿಕೊಳ್ಳುವುದು ಹೇಗೆ? ನೀವೆಷ್ಟು ತೆರಿಗೆ ಪಾವತಿಸಬೇಕು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jan 24, 2022 | 1:27 PM

ಇದೇ ಫೆಬ್ರವರಿ 1ನೇ ತಾರೀಕಿನಂದು ಕೇಂದ್ರ ಬಜೆಟ್ 2022-23 (Union Budget 2022-23) ಸಂಸತ್​ನಲ್ಲಿ ಮಂಡನೆ ಮಾಡಲಿದ್ದಾರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಪ್ರತಿ ವರ್ಷದಂತೆ ಈ ಬಾರಿಯೂ ಆದಾಯ ತೆರಿಗೆ ಸ್ಲ್ಯಾಬ್​ಗೆ ಸಂಬಂಧಿಸಿದಂತೆ ಘೋಷಣೆ ಮಾಡುವ ನಿರೀಕ್ಷೆಯಲ್ಲಿ ಇದ್ದಾರೆ. ಸದ್ಯಕ್ಕೆ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರನ್ನು ಮೂರು ವಿಭಾಗದಲ್ಲಿ ವರ್ಗೀಕರಿಸಲಾಗಿದೆ. 1) 60 ವರ್ಷದೊಳಗಿನ ವೈಯಕ್ತಿಕ ತೆರಿಗೆದಾರರು. ಇದರಲ್ಲಿ ನಿವಾಸಿಗಳು ಮತ್ತು ಅನಿವಾಸಿಗಳು ಒಳಗೊಂಡಿರುತ್ತಾರೆ. 2) ನಿವಾಸಿ ಹಿರಿಯ ನಾಗರಿಕರು, 60 ವರ್ಷ ವಯಸ್ಸಾದವರು ಆದರೆ 80 ವರ್ಷ ವಯಸ್ಸಿನ ಒಳಗಿನವರು. 3) ನಿವಾಸಿಗಳು ಅತಿ ಹಿರಿಯ ನಾಗರಿಕರು 80 ವರ್ಷ ಮೇಲ್ಪಟ್ಟವರು.

ನೀವೂ ಈ ಬಾರಿಯ ಬಜೆಟ್​ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ಘೋಷಣೆಗೆ ಕಾಯುತ್ತಿದ್ದಲ್ಲಿ ಸದ್ಯಕ್ಕೆ ಇರುವ ತೆರಿಗೆ ಸ್ಲ್ಯಾಬ್​ಗಳ ಬಗ್ಗೆ ಮಾಹಿತಿ ಇಲ್ಲಿದೆ. ವೈಯಕ್ತಿಕ ತೆರಿಗೆದಾರರ ಮೇಲೆ ಆದಾಯ ತೆರಿಗೆದಾರರಿಗೆ ಸ್ಲ್ಯಾಬ್​ ಆಧಾರದಲ್ಲಿ ಹಾಕಲಾಗುತ್ತದೆ. ತೆರಿಗೆದಾರರ ಆದಾಯ ಹೆಚ್ಚುತ್ತಾ ಹೋದಂತೆ ತೆರಿಗೆ ದರ ಕೂಡ ಹೆಚ್ಚುತ್ತಾ ಹೋಗುತ್ತದೆ. ಈ ರೀತಿಯ ತೆರಿಗೆ ಪದ್ಧತಿಯು ಪ್ರಗತಿಪರ ಮತ್ತು ನ್ಯಾಯಸಮ್ಮತವಾದ ತೆರಿಗೆ ವ್ಯವಸ್ಥೆ ದೇಶದಲ್ಲಿ ಇರುವಂತೆ ಮಾಡುತ್ತದೆ. ಕೊನೆ ಬಜೆಟ್​ನಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಆದರೂ ಅದಕ್ಕೂ ಹಿಂದಿನ ವರ್ಷದ ಬಜೆಟ್​ನಲ್ಲಿ ಹಣಕಾಸು ಸಚಿವರು ಹೊಸ ತೆರಿಗೆ ರಚನೆಯನ್ನು ಪರಿಚಯಿಸಿದರು.

ಹೊಸ ತೆರಿಗೆ ಪದ್ಧತಿ ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ಕಡಿಮೆ ದರದಲ್ಲಿ ತೆರಿಗೆ ಪಾವತಿಸಬಹುದು. ಆದರೆ ಕಡಿತಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಹಳೇ ತೆರಿಗೆ ಪದ್ಧತಿ ಅಡಿಯಲ್ಲಿ ಜನರು ತಮ್ಮ ಈಗಿನ ತೆರಿಗೆ ಕಾನೂನಿನ ಅಡಿಯಲ್ಲಿ ಪಾವತಿಸುವುದಕ್ಕೆ ಮುಂದುವರಿಸಬಹುದು. ಯಾವುದೇ ಅನ್ವಯಿಸುವ ವಿನಾಯಿತಿಯನ್ನು ಪಡೆಯಬಹುದು. ಹೊಸ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಏಳು ಆದಾಯ ಸ್ಲ್ಯಾಬ್​ಗಳು ಲಭ್ಯ ಇವೆ.

– ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಯೊಳಗೆ ಇರುವ ವ್ಯಕ್ತಿಗಳಿಗೆ ತೆರಿಗೆಯಿಂದ ವಿನಾಯಿತಿ ಇದೆ.

– 2.5 ಲಕ್ಷದಿಂದ ಐದು ಲಕ್ಷ ವಾರ್ಷಿಕ ಆದಾಯಕ್ಕೆ ಶೇ 5ರಷ್ಟು ತೆರಿಗೆ

– 5 ಲಕ್ಷದಿಂದ 7.5 ಲಕ್ಷ ರೂಪಾಯಿ ಗಳಿಸುವವರು ಶೇ 10ರಷ್ಟು ತೆರಿಗೆ ಕಟ್ಟಬೇಕು.

– 7.5 ಲಕ್ಷದಿಂದ 10 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರು ಆದಾಯದ ಶೇ 15ರಷ್ಟು ಪಾವತಿಸಬೇಕು.

– 10 ಲಕ್ಷದಿಂದ 12.5 ಲಕ್ಷದ ಮಧ್ಯೆ ಆದಾಯ ಗಳಿಸುವವರು ತಮ್ಮ ಗಳಿಕೆಯ ಶೇ 20ರಷ್ಟು ಪಾವತಿಸಬೇಕು.

– 12.5 ಲಕ್ಷದಿಂದ 15 ಲಕ್ಷ ವಾರ್ಷಿಕ ಆದಾಯಕ್ಕೆ ಶೇ 15ರಷ್ಟು ಕಟ್ಟಬೇಕು.

– 15 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು ಗಳಿಕೆ ಮೇಲೆ ಶೇ 30ರಷ್ಟು ಪಾವತಿ ಮಾಡಬೇಕಾಗುತ್ತದೆ.

ಇದರ ಅಡಿಯಲ್ಲಿ ಸೆಕ್ಷನ್ 80ಸಿ ವಿನಾಯಿತಿ ಸಾಧ್ಯವಿಲ್ಲ. ಅಷ್ಟೇ ಅಲ್ಲ, ಗೃಹ ಸಾಲದ ವಿನಾಯಿತಿ, ಇನ್ಷೂರೆನ್ಸ್ ವಿನಾಯಿತಿ ಹಾಗೂ ಸ್ಟ್ಯಾಂಡರ್ಡ್ ಡಿಡಕ್ಷನ್ಸ್ ಒಳಗೊಳ್ಳುವುದಿಲ್ಲ.

ಹಳೆ ತೆರಿಗೆ ಪದ್ಧತಿ – 2.25 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ.

– 2.5 ಲಕ್ಷದಿಂದ 5 ಲಕ್ಷದ ಮಧ್ಯೆ ಆದಾಯ ಇರುವವರು ಶೇ 5ರಷ್ಟು ತೆರಿಗೆ ಪಾವತಿಸಬೇಕು.

– ವೈಯಕ್ತಿಕ ಗಳಿಕೆ 5 ಲಕ್ಷದಿಂದ 10 ಲಕ್ಷದೊಳಗೆ ಇದ್ದಲ್ಲಿ ಆದಾಯದ ಶೇ 20ರಷ್ಟು ಕಟ್ಟಬೇಕು.

– 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು ಶೇ 30ರಷ್ಟು ತೆರಿಗೆ ಪಾವತಿ ಮಾಡಬೇಕು.

ಇದನ್ನೂ ಓದಿ: Healthcare Budget 2022: ಕೇಂದ್ರ ಬಜೆಟ್ 2022ರಿಂದ ಆರೋಗ್ಯ ಕ್ಷೇತ್ರದ ನಿರೀಕ್ಷೆಗಳೇನು?

Published On - 2:35 pm, Wed, 19 January 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್