Budget 2022: ಬಜೆಟ್​ನಲ್ಲಿ ಕ್ರಿಪ್ಟೋ ವಹಿವಾಟಿನ ಮೇಲೆ ಟಿಡಿಎಸ್/ಟಿಸಿಎಸ್ ವಿಧಿಸಲು ಸರ್ಕಾರ ಚಿಂತನೆ

ಕ್ರಿಪ್ಟೋಕರೆನ್ಸಿ ವಹಿವಾಟಿನ ಮೇಲೆ ಟಿಡಿಎಸ್/ಟಿಸಿಎಸ್ ಹಾಕುವ ಬಗ್ಗೆ ಕೇಂದ್ರ ಸರ್ಕಾರವು 2022ರ ಬಜೆಟ್​ನಲ್ಲಿ ಪರಿಗಣಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

Budget 2022: ಬಜೆಟ್​ನಲ್ಲಿ ಕ್ರಿಪ್ಟೋ ವಹಿವಾಟಿನ ಮೇಲೆ ಟಿಡಿಎಸ್/ಟಿಸಿಎಸ್ ವಿಧಿಸಲು ಸರ್ಕಾರ ಚಿಂತನೆ
ಸಾಂದರ್ಭಿಕ ಚಿತ್ರ
Follow us
| Updated By: Digi Tech Desk

Updated on:Jan 21, 2022 | 11:59 AM

ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಕ್ರಿಪ್ಟೋಕರೆನ್ಸಿಗಳ ಮಾರಾಟ ಮತ್ತು ಖರೀದಿಗೆ TDS/TCS ವಿಧಿಸುವುದನ್ನು ಸರ್ಕಾರವು ಮುಂಬರುವ ಬಜೆಟ್‌ನಲ್ಲಿ (Union Budget 2022-23) ಪರಿಗಣನೆಗೆ ತೆಗೆದುಕೊಳ್ಳಬಹುದು ಮತ್ತು ಅಂತಹ ವಹಿವಾಟುಗಳನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ವರದಿ ಮಾಡುವ ಉದ್ದೇಶಕ್ಕಾಗಿ ನಿರ್ದಿಷ್ಟ ವಹಿವಾಟಿನ ವ್ಯಾಪ್ತಿಯೊಳಗೆ ತರಬೇಕು ಎಂದು ನಂಗಿಯಾ ಆಂಡರ್ಸನ್ LLP ತೆರಿಗೆ ಲೀಡರ್​ ಅರವಿಂದ್ ಶ್ರೀವತ್ಸನ್ ಹೇಳಿದ್ದಾರೆ ಎಂದು ಬಿಜಿನೆಸ್ ಸ್ಟ್ಯಾಂಡರ್ಡ್ ವೆಬ್​ಸೈಟ್​ನಲ್ಲಿ ವರದಿ ಆಗಿದೆ. ಅಲ್ಲದೆ, ಲಾಟರಿ, ಗೇಮ್ ಶೋ, ಪಜಲ್ ಮುಂತಾದವುಗಳಿಂದ ಬರುವ ಗೆಲುವಿನಂತೆಯೇ ಕ್ರಿಪ್ಟೋಕರೆನ್ಸಿ ಮಾರಾಟದಿಂದ ಬರುವ ಆದಾಯದ ಮೇಲೆ ಶೇಕಡಾ 30ರಷ್ಟು ಹೆಚ್ಚಿನ ತೆರಿಗೆಯನ್ನು ವಿಧಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಫೆಬ್ರವರಿ 1ರಂದು ಸರ್ಕಾರವು ಮಂಡಿಸಲಿರುವ 2022-23ರ ಬಜೆಟ್ ಅನ್ನು ಭಾರತದಲ್ಲಿ ಕ್ರಿಪ್ಟೋ ಉದ್ಯಮಕ್ಕಾಗಿ ಏನು ನಿಯಮ ತರಬಹುದು ಎಂಬುದರ ಕುರಿತು ಪಿಟಿಐ ಸುದ್ದಿ ಸಂಸ್ಥೆಗೆ ಮಾತನಾಡಿದ ಶ್ರೀವತ್ಸನ್ ಹೇಳಿದ್ದಾರೆ. ಸದ್ಯಕ್ಕೆ ಭಾರತವು ಜಾಗತಿಕವಾಗಿ ಅತಿ ಹೆಚ್ಚು ಕ್ರಿಪ್ಟೋ ಮಾಲೀಕರನ್ನು ಹೊಂದಿದ್ದು, ಅಂದರೆ 10.07 ಕೋಟಿ ಮಾಲೀಕರಿದ್ದಾರೆ. ವರದಿಯ ಪ್ರಕಾರ, ಕ್ರಿಪ್ಟೋಕರೆನ್ಸಿಯಲ್ಲಿ ಭಾರತೀಯರ ಹೂಡಿಕೆಯು 2030ರ ವೇಳೆಗೆ 241 ಮಿಲಿಯನ್ USD ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.

“ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸಲು ಸಂಸತ್​ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದನ್ನು ಮಂಡಿಸಿಲ್ಲ ಮತ್ತು ಈಗ ಸರ್ಕಾರವು ಈ ಮಸೂದೆಯನ್ನು ಬಜೆಟ್ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರವು ಭಾರತೀಯರನ್ನು ನಿಷೇಧಿಸದಿದ್ದರೆ ಕ್ರಿಪ್ಟೋಕರೆನ್ಸಿಗಳಲ್ಲಿ ವ್ಯವಹರಿಸುವಾಗ ಸರ್ಕಾರವು ಕ್ರಿಪ್ಟೋಕರೆನ್ಸಿಗಳಿಗೆ ಆಕ್ರಮಣಕಾರಿ ತೆರಿಗೆ ಪರಿಚಯಿಸಬಹುದು ಎಂದು ನಾವು ನಿರೀಕ್ಷಿಸುತ್ತೇವೆ,” ಎಂದು ಅವರು ಹೇಳಿದ್ದಾರೆ. ಮಾರುಕಟ್ಟೆಯ ಗಾತ್ರ, ಒಳಗೊಂಡಿರುವ ಮೊತ್ತ ಮತ್ತು ಕ್ರಿಪ್ಟೋಕರೆನ್ಸಿಗಳ ಜೊತೆಗಿನ ಅಪಾಯವನ್ನು ಪರಿಗಣಿಸಿ, ಕ್ರಿಪ್ಟೋಕರೆನ್ಸಿಗಳ ತೆರಿಗೆಯಲ್ಲಿ ಕೆಲವು ಬದಲಾವಣೆಗಳನ್ನು ತರಬಹುದು. ಉದಾಹರಣೆಗೆ ಮೂಲದಲ್ಲಿ ಕಡಿತಗೊಳಿಸಿದ ತೆರಿಗೆ (ಟಿಡಿಎಸ್) ಮತ್ತು ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ (ಟಿಸಿಎಸ್​) ಮಿತಿಯನ್ನು ಮೀರಿದ್ದು, ಅದು ಸರ್ಕಾರಕ್ಕೆ “ಹೂಡಿಕೆದಾರರ ಹೆಜ್ಜೆಗುರುತುಗಳನ್ನು” ಪಡೆಯಲು ಸಹಾಯ ಮಾಡುತ್ತದೆ.

ಕ್ರಿಪ್ಟೋಕರೆನ್ಸಿಗಳ ಮಾರಾಟ ಮತ್ತು ಖರೀದಿ ಎರಡನ್ನೂ ಹಣಕಾಸು ವಹಿವಾಟುಗಳ ಹೇಳಿಕೆಯಲ್ಲಿ (SFT) ವರದಿ ಮಾಡುವ ವ್ಯಾಪ್ತಿಯ ಅಡಿಯಲ್ಲಿ ತರಬೇಕು. ವ್ಯಾಪಾರ ಕಂಪೆನಿಗಳು ಈಗಾಗಲೇ ಮ್ಯೂಚುವಲ್ ಫಂಡ್‌ಗಳ ಷೇರುಗಳು ಮತ್ತು ಘಟಕಗಳ ಮಾರಾಟ ಹಾಗೂ ಖರೀದಿಯ ಇದೇ ರೀತಿ ವರದಿಯನ್ನು ಮಾಡುತ್ತವೆ ಎಂದು ಅವರು ಹೇಳಿದ್ದಾರೆ. ತೆರಿಗೆದಾರರು ಕೈಗೊಳ್ಳುವ ಹೆಚ್ಚಿನ ಮೌಲ್ಯದ ವಹಿವಾಟುಗಳ ಮೇಲೆ ನಿಗಾ ಇಡಲು ಆದಾಯ ತೆರಿಗೆ ಕಾನೂನು SFT ಅಥವಾ ವರದಿ ಮಾಡಬಹುದಾದ ಖಾತೆಯ ಆಲೋಚನೆಯನ್ನು ಹೊಂದಿದೆ. ವರ್ಷದಲ್ಲಿ ಯಾವುದೇ ವ್ಯಕ್ತಿ ಕೈಗೊಂಡ ಕೆಲವು ನಿಗದಿತ ಹೆಚ್ಚಿನ ಮೌಲ್ಯದ ವಹಿವಾಟುಗಳ ಮಾಹಿತಿಯನ್ನು ಸಂಗ್ರಹಿಸಲು ಇದು ತೆರಿಗೆ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

ಹಣಕಾಸು ಸಂಸ್ಥೆಗಳು, ಕಂಪೆನಿಗಳು ಮತ್ತು ಷೇರು ಮಾರುಕಟ್ಟೆ ಮಧ್ಯವರ್ತಿಗಳು SFT ವರದಿಯ ವ್ಯಾಪ್ತಿಯಲ್ಲಿ ಬರುತ್ತವೆ. ಶ್ರೀವತ್ಸನ್ ಅವರು ಲಾಟರಿ, ಗೇಮ್ ಶೋಗಳು, ಒಗಟುಗಳು ಇತ್ಯಾದಿಗಳಿಂದ ಗೆಲ್ಲುವಂತೆಯೇ ಕ್ರಿಪ್ಟೋಕರೆನ್ಸಿ ಮಾರಾಟದಿಂದ ಬರುವ ಆದಾಯದ ಮೇಲೆ ಶೇಕಡಾ 30 ರಷ್ಟು ಹೆಚ್ಚಿನ ತೆರಿಗೆ ದರವನ್ನು ವಿಧಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಡಿಸೆಂಬರ್ 23ಕ್ಕೆ ಕೊನೆಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಸರ್ಕಾರವು ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸುವ ಮಸೂದೆಯನ್ನು ಪರಿಚಯಿಸಲು ಲಿಸ್ಟಿಂಗ್ ಮಾಡಿತ್ತು. ಹೂಡಿಕೆದಾರರನ್ನು ತಪ್ಪುದಾರಿಗೆ ಎಳೆಯುವುದಕ್ಕೆ ಇಂತಹ ಕರೆನ್ಸಿಗಳನ್ನು ಬಳಸಲಾಗುತ್ತಿದೆ ಎಂಬ ಕಳವಳದ ಮಧ್ಯೆ ಈ ಮಸೂದೆ ತರಲು ನಿರ್ಧರಿಸಿತ್ತು.

ಸದ್ಯಕ್ಕೆ ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳ ಬಳಕೆಯ ಮೇಲೆ ಯಾವುದೇ ನಿಯಂತ್ರಣ ಅಥವಾ ನಿಷೇಧವಿಲ್ಲ. ಜನವರಿ 31ರಿಂದ ಪ್ರಾರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ‘ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ’ ಅನ್ನು ಈಗ ಪರಿಚಯಿಸುವ ನಿರೀಕ್ಷೆಯಿದೆ. ಪ್ರತ್ಯೇಕವಾಗಿ, ಸರ್ಕಾರವು ಕ್ರಿಪ್ಟೋಕರೆನ್ಸಿಗಳನ್ನು ತೆರಿಗೆ ನಿವ್ವಳ ಅಡಿಯಲ್ಲಿ ತರಲು ಆದಾಯ ತೆರಿಗೆ ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ ಮತ್ತು 2022-23ರ ಬಜೆಟ್‌ನ ಭಾಗ ಆಗಬಹುದಾದ ಕೆಲವು ಬದಲಾವಣೆಗಳನ್ನು ಮಾಡುತ್ತಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರವು. ಆಯಾ ವಲಯದಲ್ಲಿ ಅವರಿಗೆ ಇರುವ ಅನುಭವದ ಹಿನ್ನೆಲೆಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಇದು)

ಇದನ್ನೂ ಓದಿ: ಸಂಸತ್ತಿನ ಶೇಕಡಾ 28 ಉದ್ಯೋಗಿಗಳಿಗೆ ಕೊರೋನಾ ಸೋಂಕು ದೃಢ, ತೂಗುಯ್ಯಾಲೆಯಲ್ಲಿ ಬಜೆಟ್ ಅಧಿವೇಶನ

Published On - 2:01 pm, Mon, 17 January 22