ಸಂಸತ್ತಿನ ಶೇಕಡಾ 28 ಉದ್ಯೋಗಿಗಳಿಗೆ ಕೊರೋನಾ ಸೋಂಕು ದೃಢ, ತೂಗುಯ್ಯಾಲೆಯಲ್ಲಿ ಬಜೆಟ್ ಅಧಿವೇಶನ

ಸೋಂಕಿತರ ಪೈಕಿ ಕೆಲವರು ಮಂತ್ರಿಗಳು ಮತ್ತು ಸಂಸದರ ನಿಕಟವರ್ತಿಗಳಾಗಿ ಕೆಲಸ ಮಾಡುವುದರಿಂದ ಕೆಲವು ಖಾದಿ ವಸ್ತ್ರಧಾರಿಗಳಿಗೂ ಸೋಂಕು ತಗುಲಿರುವ ಸಾಧ್ಯತೆಯಿದೆ.

ಪಾರ್ಲಿಮೆಂಟ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಪೈಕಿ 400 ಕ್ಕೂ ಹೆಚ್ಚು ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಈ ತಿಂಗಳು ಅಂತ್ಯದಿಂದ ಆರಂಭವಾಗಬೇಕಿರುವ ಬಜೆಟ್ ಅಧಿವೇಶನ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಸೃಷ್ಟಿಯಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಪ್ರತಿ ತಿಂಗಳು ಪಾರ್ಲಿಮೆಂಟ್​ನಲ್ಲಿ ಸೇವೆ ಸಲ್ಲಿಸುವ ಉದ್ಯೋಗಿಗಳಿಗೆ ನಡೆಸುವ ಱಂಡೋಮ್ ಕೋವಿಡ್ ಟೆಸ್ಟ್​ಗಳಲ್ಲಿ ಶೇಕಡಾ 28 ಉದ್ಯೋಗಿಗಳಿಗೆ ಸೋಂಕು ದೃಢಪಟ್ಟಿದೆ. ಟೆಸ್ಟ್ಗಳನ್ನು ಜನೆವರಿ 6 ಮತ್ತು 7 ರಂದು ಮಾಡಲಾಗಿತ್ತು. ಲೋಕಸಭೆಯ ಸಿಬ್ಬಂದಿ ವರ್ಗದಲ್ಲಿ 200 ಉದ್ಯೋಗಿಗಳು, 69 ರಾಜ್ಯ ಸಭಾ ಮತ್ತು ಇತರೆ 133 ನೌಕರರಿ ಕೋವಿಡ್ ಟೆಸ್ಟ್ ರಿಸಲ್ಟ್ ಪಾಸಿಟಿವ್ ಬಂದಿದ್ದು ಇದರಲ್ಲಿ ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ.

ಸೋಂಕಿತರ ಪೈಕಿ ಕೆಲವರು ಮಂತ್ರಿಗಳು ಮತ್ತು ಸಂಸದರ ನಿಕಟವರ್ತಿಗಳಾಗಿ ಕೆಲಸ ಮಾಡುವುದರಿಂದ ಕೆಲವು ಖಾದಿ ವಸ್ತ್ರಧಾರಿಗಳಿಗೂ ಸೋಂಕು ತಗುಲಿರುವ ಸಾಧ್ಯತೆಯಿದೆ.

ದೆಹಲಿಯಲ್ಲಿ ಈಗ ಪ್ರತಿದಿನ 20,000 ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಪಾಸಿಟಿವಿಟಿ ದರ ಶೇಕಡಾ 19.6 ತಲುಪಿದೆ. ರಾಷ್ಟ್ರದ ರಾಜಧಾನಿಯಲ್ಲಿ ಪ್ರಸ್ತುತ 50,000 ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

ಸೋಂಕು ಹರಡುವುದನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ವಾರಾಂತ್ಯದ ಕರ್ಫ್ಯೂ ಹೇರುವ ಜೊತೆಗೆ ವಾರದ ಇತರ ದಿನಗಳಲ್ಲಿ ಅಂಗಡಿ-ಮುಂಗಟ್ಟುಗಳು ಸಮ-ಬೆಸ ಸಂಖ್ಯೆ ಆಧಾರದಲ್ಲಿ ತೆರೆಯಲು ಆದೇಶಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡುವಾಗ ಕೇಜ್ರಿವಾಲ್ ಅವರು, ಈ ಬಾರಿ ಸೋಂಕಿನ ತೀವ್ರತೆ ಪ್ರಮಾಣ ಕಡಿಮೆಯಿರುವುದರಿಂದ ಆಸ್ಪತ್ರೆಗಳಲ್ಲಿ ದಾಖಲಾತಿಯೂ ಕಡಿಮೆಯಿದೆ ಅಂತ ಹೇಳಿದರು.

ಮೂರನೇ ಅಲೆಯ ಕೋವಿಡ್-19 ಪಿಡುಗನ್ನು ಎದುರಿಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಮತ್ತು ಸೋಂಕಿನ ಪ್ರಕರಣಗಳು ಹೆಚ್ಚಲಿರುವುದರಿಂದ ಮೂಲಭೂತ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಇದನ್ನೂ ಓದಿ:  ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ; ಶಬರಿಮಲೆಯಲ್ಲಿ ಅಯ್ಯಪ್ಪ ಮಾಲಾಧಾರಿ ಕೋರಿಕೆ- ವಿಡಿಯೋ ನೋಡಿ

Click on your DTH Provider to Add TV9 Kannada