ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ; ಶಬರಿಮಲೆಯಲ್ಲಿ ಅಯ್ಯಪ್ಪ ಮಾಲಾಧಾರಿ ಕೋರಿಕೆ- ವಿಡಿಯೋ ನೋಡಿ

Siddaramaiah: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಅವರು ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರ ವಹಿಸಲಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದೆ.


ಬಾಗಲಕೋಟೆ: ಶಬರಿಮಲೆಯಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬ ಕೂಗು ಪ್ರತಿಧ್ವನಿಸಿದೆ. ಅಯ್ಯಪ್ಪ ಮಾಲಾಧಾರಿ ಬಾದಾಮಿ ಪಟ್ಟಣದ ಹನಮಂತ ಖಾನಗೌಡ್ರಿಂದ ಅಯ್ಯಪ್ಪ ಸ್ವಾಮಿಗೆ ಹೀಗೊಂದು ಕೋರಿಕೆ ಮಾಡಲಾಗಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಕೋರುತ್ತಾ ಮಾಲಾಧಾರಿ ಹನಮಂತ ಹೆಜ್ಜೆ ಹಾಕಿದ್ದಾರೆ.

ಇತ್ತ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತವಾಗಿ ಗೆಲುವು ಸಾಧಿಸಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಅವರು ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರ ವಹಿಸಲಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದೆ.

ರಾಮನಗರದಲ್ಲಷ್ಟೇ ಅಲ್ಲ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್​ಗೆ ಅಧಿಕಾರ ಸಿಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅಧಿಕಾರ ಖಚಿತ ಎಂದು ಟಿವಿ9ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಯುವಕರ ಹುಮ್ಮಸ್ಸಿನಿಂದ ನನಗೂ ಹುಮ್ಮಸ್ಸು ಬಂದಿದೆ. ಹೋರಾಟ ಅಂದರೆ ನಾನು ಯಾವತ್ತೂ ಯುವಕನೇ. ರೇಣುಕಾಚಾರ್ಯ ಕ್ಷಮೆ ಕೇಳಿದ್ರೆ ಮುಗಿದುಹೋಗಿಬಿಡುತ್ತಾ. ನಮ್ಮ ಹೋರಾಟ ತಡೆಗಟ್ಟೋಕೆ ಏನೇ ಷಡ್ಯಂತ್ರ ಮಾಡಲಿ, ಬೆಂಗಳೂರಿನವರೆಗೂ ಪಾದಯಾತ್ರೆ ಯಶಸ್ವಿಯಾಗಿ ತಲುಪುತ್ತೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: Mekedatu Padayatra Live: ಮೂರನೇ ದಿನ ತೆರೆದ ವಾಹನದಲ್ಲಿ ಸಾಗಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ; ಪಾದಯಾತ್ರೆಯ ಕ್ಷಣ ಕ್ಷಣದ ಅಪ್​ಡೇಟ್ ಇಲ್ಲಿದೆ

ಇದನ್ನೂ ಓದಿ: ಪಾದಯಾತ್ರೆಯಲ್ಲಿ ಇಂದಿನಿಂದ ಡಿಕೆ ಶಿವಕುಮಾರ್ 3 ದಿನ‌ ಮೌನ! ಸುಪ್ರೀಂಕೋರ್ಟ್​ನಲ್ಲಿಂದು ತಮಿಳುನಾಡು ಮೇಲ್ಮನವಿ ವಿಚಾರಣೆ

Click on your DTH Provider to Add TV9 Kannada