ಪಾದಯಾತ್ರೆಯಲ್ಲಿ ಇಂದಿನಿಂದ ಡಿಕೆ ಶಿವಕುಮಾರ್ 3 ದಿನ‌ ಮೌನ! ಸುಪ್ರೀಂಕೋರ್ಟ್​ನಲ್ಲಿಂದು ತಮಿಳುನಾಡು ಮೇಲ್ಮನವಿ ವಿಚಾರಣೆ

ಗಮನಾರ್ಹ ಸಂಗತಿಯೆಂದರೆ ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿ ವಿವಾದ ಸಂಬಂಧ ಸುಪ್ರೀಂಕೋರ್ಟ್​ನಲ್ಲಿ ಇಂದು ಮಹತ್ವದ ಮೇಲ್ಮನವಿ ವಿಚಾರಣೆ ನಡೆಯಲಿದೆ. ಯೋಜನೆ ವಿರೋಧಿಸಿ, ಎನ್​ಜಿಟಿ ಆದೇಶ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬರಲಿದೆ. ಯೋಜನೆ ಸಂಬಂಧ ಚೆನ್ನೈ ಮೂಲದ ಪತ್ರಿಕೆಗಳ ವರದಿ ಆಧರಿಸಿ ಟ್ರಿಬ್ಯುನಲ್ ಸ್ವಯಂ ದೂರು ದಾಖಲಿಸಿಕೊಂಡಿದೆ.

ಪಾದಯಾತ್ರೆಯಲ್ಲಿ ಇಂದಿನಿಂದ ಡಿಕೆ ಶಿವಕುಮಾರ್ 3 ದಿನ‌ ಮೌನ! ಸುಪ್ರೀಂಕೋರ್ಟ್​ನಲ್ಲಿಂದು ತಮಿಳುನಾಡು ಮೇಲ್ಮನವಿ ವಿಚಾರಣೆ
ಮೇಕೆದಾಟು ಪಾದಯಾತ್ರೆಯಲ್ಲಿ ಇಂದಿನಿಂದ ಡಿಕೆ ಶಿವಕುಮಾರ್ ಮೂರು ದಿನ‌ ಮೌನ! ಸುಪ್ರೀಂಕೋರ್ಟ್​ನಲ್ಲಿಂದು ತಮಿಳುನಾಡು ಮೇಲ್ಮನವಿ ವಿಚಾರಣೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 11, 2022 | 8:04 AM

ರಾಮನಗರ: ಕಾಂಗ್ರೆಸ್​ ಹಮ್ಮಿಕೊಂಡಿರುವ ಮೇಕೆದಾಟು ಸಂಘರ್ಷ ಇಂದು 3ನೇ ದಿನಕ್ಕೆ ಕಾಲಿಟ್ಟಿದೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಇಂದು ಕನಕಪುರದಿಂದ ಬೆಳಗ್ಗೆ 9.30ಕ್ಕೆ ಮುಂದುವರಿಯಲಿದೆ. ಪಾದಯಾತ್ರೆಯು ಮಧ್ಯಾಹ್ನ 1 ಗಂಟೆಗೆ ವೀರಭದ್ರಸ್ವಾಮಿ ದೇಗುಲ ಬಳಿ ಆಗಮನವಾಗಲಿದ್ದು, ಗಾಣಾಳು ವೀರಭದ್ರಸ್ವಾಮಿ ದೇಗುಲದ ಬಳಿಗೆ ತಲುಪಲಿದೆ. ಕಾಂಗ್ರೆಸ್ ಕಾರ್ಯಕರ್ತರು ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಊಟ ಮಾಡಿ ನಂತರ ವಿಶ್ರಾಂತಿ ಪಡೆದು ಪಾದಯಾತ್ರೆ ಮೂಲಕ ಸಂಜೆ ವೇಳೆಗೆ ಚಿಕ್ಕೇನಹಳ್ಳಿ ತಲುಪಲಿದ್ದಾರೆ. ಇಂದು ರಾತ್ರಿ ಚಿಕ್ಕೇನಹಳ್ಳಿಯಲ್ಲಿ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಲಿದ್ದಾರೆ. ಈ ಮಧ್ಯೆ ಜ್ವರದಿಂದ ಬಳಲಿದ ಸಿದ್ದರಾಮಯ್ಯ ಅವರು ಪಾದಯಾತ್ರೆಗೆ ಮರಳಿ ಬರ್ತಾರಾ..? ಕನಕಪುರದಿಂದ ಕಾಲ್ನಡಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರಿಗೆ ಸಾಥ್ ಕೊಡ್ತಾರಾ ಎಂಬುದು ಕುತೂಹಲಕಾರಿಯಾಗಿದೆ. ಗಮನಾರ್ಹವೆಂದರೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ರಾಜ್ಯದಲ್ಲಿ ಬಿಜೆಪಿ ಆಡಳಿತಾರೂಢ ಸರ್ಕಾರ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಅವರು ಇಂದು ರಾಮನಗರ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಬೆಳಗ್ಗೆ 11 ಗಂಟೆಗೆ ಮೇಕೆದಾಟು ವಿಚಾರವಾಗಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ.

ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿ ವಿವಾದ ಸಂಬಂಧ ಸುಪ್ರೀಂಕೋರ್ಟ್​ನಲ್ಲಿ ಇಂದು ಮಹತ್ವದ ಮೇಲ್ಮನವಿ ವಿಚಾರಣೆ ನಡೆಯಲಿದೆ. ಯೋಜನೆ ವಿರೋಧಿಸಿ, ಎನ್​ಜಿಟಿ ಆದೇಶ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬರಲಿದೆ. ಯೋಜನೆ ಸಂಬಂಧ ಚೆನ್ನೈ ಮೂಲದ ಪತ್ರಿಕೆಗಳ ವರದಿ ಆಧರಿಸಿ ಟ್ರಿಬ್ಯುನಲ್ ಸ್ವಯಂ ದೂರು ದಾಖಲಿಸಿಕೊಂಡಿದೆ. ತಮಿಳು ಪತ್ರಿಕೆಯೊಂದು ಯೋಜನೆಯಿಂದ ಅರಣ್ಯ ನಾಶದ ಬಗ್ಗೆ ವರದಿ ಮಾಡಿತ್ತು. ನಂತರ ಯೋಜನೆಯಿಂದ ಪರಿಸರಕ್ಕೆ ಹಾನಿಯಿಲ್ಲ ಎಂದು ಎನ್​ಜಿಟಿಯಲ್ಲಿ ಯೋಜನೆ ಪರ ಕರ್ನಾಟಕ ತನ್ನ ವಾದ ಮಂಡಿಸಿದೆ. ವಾದ ಪುರಸ್ಕರಿಸಿ ಕರ್ನಾಟಕದ ವಿರುದ್ಧ ಕೇಸ್​ ಅನ್ನು NGT ರದ್ದುಪಡಿಸಿತ್ತು. ಸ್ವಯಂಪ್ರೇರಿತ ಕೇಸ್​ ರದ್ದುಗೊಳಿಸಿದ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದೆ. ಹಾಗಾಗಿ ಸುಪ್ರೀಂಕೋರ್ಟ್​ನಲ್ಲಿಂದು ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ನ್ಯಾ. ಖಾನ್ವಿಲ್ಕರ್​​ ನೇತೃತ್ವದ ಪೀಠದಲ್ಲಿ ತಮಿಳುನಾಡು ಮೇಲ್ಮನವಿ ವಿಚಾರಣೆ ನಡೆಯಲಿದೆ.

ಮೇಕೆದಾಟು ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದಿನಿಂದ ಮೂರು ದಿನ‌ ಮೌನ ವ್ರತಾಚರಣೆ ನಡೆಸು ತೀರ್ಮಾನತೆಗೆದುಕೊಂಡಿದ್ದು, ಅಚ್ಚರಿ ಮೂಡಿಸಿದ್ದಾರೆ. ರಾಜಕೀಯ ಸಲಹಾ ತಂಡ ನೀಡಿರುವ ಸಲಹೆ ಮೇರೆಗೆ ಡಿ ಕೆ ಶಿವಕುಮಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಮೂರು ದಿನಗಳ ಮೌನ ಬೇಡ ಎಂದೂ ಇತರ ನಾಯಕರು ಸಲಹೆ ನೀಡಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಮಾತನಾಡಿದರೆ ಜನಗಳಿಗೆ ಸಂದೇಶ ರವಾನೆಯಾಗಲಿದೆ, ಹೀಗಾಗಿ ಮಾತನಾಡಿ ಎಂದಿರುವ ಹಿರಿಯ ನಾಯಕರು ಸಲಹೆ ನೀಡಿದ್ದಾರೆ. ರಾಜಕೀಯ ಬೆಳವಣಿಗೆ ಗಮನಿಸಿದ ಬಳಿಕ ಪ್ರತಿಕ್ರಿಯೆ ನೀಡೋಣ ಎಂಬುದು ಡಿ ಕೆ ಶಿವಕುಮಾರ್ ಅವರ ತಕ್ಷಣ ನಿಲುವಾಗಿದೆ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?