Budget 2022: ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಜಾಗತಿಕ ಹೂಡಿಕೆದಾರರಿಗೆ ಬಜೆಟ್​ನಲ್ಲಿ ತೆರಿಗೆ ಅನುಕೂಲ ಸಾಧ್ಯತೆ

ಬಾಂಡ್​ ಮೇಲೆ ಹೂಡಿಕೆ ಮಾಡುವುದರಿಂದ ಬರುವ ಲಾಭದ ಮೇಲೆ ತೆರಿಗೆಯಾದ ಕ್ಯಾಪಿಟಲ್ ಗೇಯ್ನ್ಸ್ ತೆಗೆಯುವ ಬಗ್ಗೆ ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2022ರಲ್ಲಿ ಪ್ರಸ್ತಾವ ಮಾಡು ಸಾಧ್ಯತೆ ಇದೆ.

Budget 2022: ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಜಾಗತಿಕ ಹೂಡಿಕೆದಾರರಿಗೆ ಬಜೆಟ್​ನಲ್ಲಿ ತೆರಿಗೆ ಅನುಕೂಲ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jan 24, 2022 | 1:27 PM

ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ವಿದೇಶೀ ಹೂಡಿಕೆದಾರರಿಗೆ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆಯಿಂದ ಮನ್ನಾ ಮಾಡುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ (Union Budget 2022- 23) ಆಲೋಚಿಸುವ ಸಾಧ್ಯತೆ ಇದೆ. ಈ ನಡೆಯಿಂದ ಬ್ಲೂಮ್​ಬರ್ಗ್- ಬಾರ್​ಕ್ಲೇಸ್ ಮತ್ತು ಜೆಪಿ ಮೋರ್ಗನ್ ಜಾಗತಿಕ ಬಾಂಡ್ ಸೂಚ್ಯಂಕ ಟ್ರ್ಯಾಕ್​ಗೆ ಒಳಗೊಳ್ಳುವುದಕ್ಕೆ ವೇದಿಕೆ ಸಿದ್ಧ ಮಾಡಲು ನೆರವು ನೀಡಲಿದೆ, ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಮನ್ನಾ ಹಾಗೂ ಭಾರತೀಯ ಸಾಲಪತ್ರ ಇನ್​ಸ್ಟ್ರುಮೆಂಟ್​ಗಳನ್ನು ಜಾಗತಿಕ ಬಾಂಡ್ ಸೂಚ್ಯಂಕದಲ್ಲಿ ಸೇರ್ಪಡೆ ಮಾಡುವುದರಿಂದ ಸ್ಥಳೀಯ ಸಾಲಪತ್ರಗಳಿಗೆ ಮಹತ್ತರವಾದ ಬಂಡವಾಳ ಹರಿವಾಗುತ್ತದೆ. ಇದರ ಜತೆಗೆ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತದಿಂದ ಉತ್ತಮ ಯೀಲ್ಡ್​​ ದೊರೆಯುವಂತಾಗುತ್ತದೆ.

ಜಾಗತಿಕ ಬಾಂಡ್​ ಸೂಚ್ಯಂಕದಲ್ಲಿ ಸೇರ್ಪಡೆ ಮಾಡಿದ ನಂತರ ವಿದೇಶೀ ಹೂಡಿಕೆದಾರರು ಸವರನ್ ಸೆಕ್ಯೂರಿಟಿಗಳಲ್ಲಿ ವಹಿವಾಟು ಮಾಡುವುದನ್ನು ನಿರೀಕ್ಷಿಸಲಾಗುತ್ತದೆ. ಇದರಿಂದಾಗಿ ಮುಂದಿನ ದಶಕದಲ್ಲಿ 25 ಸಾವಿರ ಕೋಟಿ ಅಮೆರಿಕನ್ ಡಾಲರ್​ ಒಳಹರಿವು ತರಲಿದೆ ಮತ್ತು ಭಾರತದ ಸಾಲ ಪಡೆಯುವ ವೆಚ್ಚವನ್ನು 50 ಬೇಸಿಸ್ ಪಾಯಿಂಟ್ಸ್ ತನಕ ಕಡಿಮೆ ಮಾಡುತ್ತದೆ ಎಂದು ಮೋರ್ಗನ್ ಸ್ಟ್ಯಾನ್ಲಿ ಅಂದಾಜು ತೋರಿಸಿದೆ.

ಲಿಕ್ವಿಡಿಟಿಗೆ ಪೆಟ್ಟು ನೀಡಲಿದೆ ತೆರಿಗೆ ಒಂದು ವೇಳೆ ಪ್ರತಿ ಬಾಂಡ್ ವಹಿವಾಟಿನ ಮೇಲೆ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಹಾಕಿದಲ್ಲಿ ಲಿಕ್ವಿಡಿಟಿ ಬಹಳ ಮುಖ್ಯವಾಗಿ ಹೊಡೆತ ನೀಡುತ್ತದೆ. ಇದು ಜಾಗತಿಕ ಸೂಚ್ಯಂಕದ ವಿರುದ್ಧ ಹೋಗುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಇದರ್ಥ ಏನೆಂದರೆ ನಮ್ಮ ಬೇಸಿಕ್ ಮಾಡೆಲ್​ನಿಂದ ಬದಲಾಗಬೇಕು ಮತ್ತು ಓಮ್ನಿಬಸ್ ಮಾದರಿಯನ್ನು ಪ್ರತ್ಯೇಕಗೊಳಿಸಿದ ವಿಧಾನಕ್ಕೆ ಬೇರೆಗೊಳಿಸಬೇಕು ಎಂದಿದ್ದಾರೆ. ವಿದೇಶೀ ಹೂಡಿಕೆದಾರರು ಲಿಸ್ಟೆಡ್​ ಬಾಂಡ್​ಗಳನ್ನು 12 ತಿಂಗಳೊಳಗೆ ಮಾರಾಟ ಮಾಡಿದರೆ ಅಲ್ಪಾವಧಿ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಪಾವತಿಸಬೇಕಾಗುತ್ತದೆ. ಹೂಡಿಕೆದಾರ ಯಾರು ಎಂಬುದರ ಮೇಲೆ ಶೇ 30ರಿಂದ 40ರಷ್ಟು ತೆರಿಗೆ ಬೀಳುತ್ತದೆ.

ಕ್ಯಾಪಿಟಲ್ ಗೇಯ್ನ್ ಜವಾಬ್ದಾರಿ ತೆಗೆಯುವುದರಿಂದ ಭಾರತೀಯ ಸಾಲಪತ್ರವನ್ನು ಯುರೋಕ್ಲಿಯರ್​ನಲ್ಲಿ ಲಿಸ್ಟ್​ ಆಗುವುದಕ್ಕೆ ದಾರಿ ಸುಲಭ ಆಗುತ್ತದೆ ಎಂದು ಕಳೆದ ವರ್ಷದ ಜುಲೈನಲ್ಲಿ ಮಾಜಿ ಮುಖ್ಯ ಆರ್ಥಿಕ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಆರ್ಥಿಕ ಸಚಿವಾಲಯಕ್ಕೆ ಹೇಳಿದ್ದರು. ಆದರೆ ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಹಣಕಾಸು ಸಚಿವಾಲಯ ತಕ್ಷಣಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಸವರನ್ ಸಂಸ್ಥೆಗಳು ತಮ್ಮ ಸಾಲಪತ್ರಗಳನ್ನು ಜಾಗತಿಕ ಸೂಚ್ಯಂಕಗಳಲ್ಲಿ ಲಿಸ್ಟ್ ಮಾಡುವುದು ಲಿಕ್ವಿಡಿಟಿ ವಿಸ್ತರಣೆ ಮತ್ತು ಸಾಲ ಪಡೆಯುವ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ.

ಯುರೋಕ್ಲಿಯರ್ 49 ಬೇರೆ ಬೇರೆ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಇವುಗಳಲ್ಲಿ ಎಲ್ಲೂ ಬಾಂಡ್ ವಹಿವಾಟಿನ ಮೇಲೆ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಇಲ್ಲ. ಬಾಂಡ್​ಗಳ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು (FPIs) ಫುಲಿ ಆಕ್ಸೆಸಬಲ್ ರೂಟ್ (FAR) ಅಡಿಯಲ್ಲಿ ಖರೀದಿಸಬಹುದಾದದ್ದು 16.98 ಲಕ್ಷ ಕೋಟಿ 17 ವಿವಿಧ ಅವಧಿಗಳಿಗೆ ಇದೆ ಎಂದು ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ದತ್ತಾಂಶ ತೋರಿಸುತ್ತದೆ, ಈ ಸಾಲಪತ್ರಗಳು 2024ರಿಂದ 2051ರ ಮಧ್ಯೆ ಮೆಚ್ಯೂರಿಟಿ ಇದೆ. ​

ಇದನ್ನೂ ಓದಿ: Union Budget 2022: ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ ಶೇ. 20ರಷ್ಟು ಅನುದಾನ ಹೆಚ್ಚಳ ಸಾಧ್ಯತೆ

Published On - 6:27 pm, Wed, 19 January 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್