Union Budget 2022: ಈ ಬಾರಿಯ ಬಜೆಟ್​ನಲ್ಲಿ ಐಟಿ ಪಾವತಿದಾರರಿಗೆ ನಿರ್ಮಲಾ ಸೀತಾರಾಮನ್ ಏನು ಗಿಫ್ಟ್ ಕೊಡ್ತಾರೆ?

ಫೆಬ್ರವರಿ 1ರಂದು ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಕೇಂದ್ರದ ಸಾಮಾನ್ಯ ಬಜೆಟ್​ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಏನು ಗಿಫ್ಟ್ ಕೊಡ್ತಾರೆ ಎಂಬ ಕುತೂಹಲ ಸಹಜ.

Union Budget 2022: ಈ ಬಾರಿಯ ಬಜೆಟ್​ನಲ್ಲಿ ಐಟಿ ಪಾವತಿದಾರರಿಗೆ ನಿರ್ಮಲಾ ಸೀತಾರಾಮನ್ ಏನು ಗಿಫ್ಟ್ ಕೊಡ್ತಾರೆ?
ಸಾಂದರ್ಭಿಕ ಚಿತ್ರ
Follow us
S Chandramohan
| Updated By: ಸುಷ್ಮಾ ಚಕ್ರೆ

Updated on: Jan 11, 2022 | 8:10 PM

ನವದೆಹಲಿ: ಮುಂದಿನ ತಿಂಗಳ ಒಂದರಂದು ಕೇಂದ್ರದ ಸಾಮಾನ್ಯ ಬಜೆಟ್​ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಕೊರೊನಾದ ಮೂರನೇ ಅಲೆಯ ಮಧ್ಯೆ ಮಂಡನೆಯಾಗುತ್ತಿರುವ ಕೇಂದ್ರದ ಬಜೆಟ್​ನಲ್ಲಿ ಆದಾಯ ತೆರಿಗೆ ಪಾವತಿದಾರರು ತಮ್ಮದೇ ಆದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಬಾರಿ ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ ಸಾಧ್ಯತೆ ಕಡಿಮೆ. ಹೀಗಾಗಿ, ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಏರಿಸುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸ್ಟಾಂಡರ್ಡ್ ಡಿಡಕ್ಷನ್ ಮೊತ್ತ ಎಷ್ಟು ಏರಿಕೆಯಾಗಬಹುದು? ಈ ಬಗ್ಗೆ ಐ.ಟಿ ಪಾವತಿದಾರರಿಗೆ ಇರೋ ನಿರೀಕ್ಷೆಗಳೇನು? ಕೇಂದ್ರ ಸರ್ಕಾರದ ಲೆಕ್ಕಾಚಾರಗಳೇನು? ಎನ್ನುವುದರ ಮಾಹಿತಿ ಇಲ್ಲಿದೆ.

ಫೆಬ್ರವರಿ 1ರಂದು ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಕೇಂದ್ರದ ಸಾಮಾನ್ಯ ಬಜೆಟ್​ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಏನು ಗಿಫ್ಟ್ ಕೊಡ್ತಾರೆ ಎಂಬ ಕುತೂಹಲ ಸಹಜ. ಪ್ರತಿ ಬಾರಿಯೂ ಆದಾಯ ತೆರಿಗೆ ಪಾವತಿದಾರರಿಗೆ ತಮ್ಮದೇ ಆದ ನಿರೀಕ್ಷೆಗಳು ಕೇಂದ್ರದ ಬಜೆಟ್ ಬಗ್ಗೆ ಇರುತ್ತವೆ. ಈ ಬಾರಿ ಕೇಂದ್ರದ ಬಜೆಟ್​ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಸ್ಪಲ್ಪ ರಿಲೀಫ್ ನೀಡುವ ಸಾಧ್ಯತೆ ಇದೆ. ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆದರೆ, ಸ್ಟಾಂಡರ್ಡ್ ಡಿಡಕ್ಷನ್​ನಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯ ಆದಾಯ ತೆರಿಗೆ ಪಾವತಿದಾರರಿಗೆ ಹಾಗೂ ಪಿಂಚಣಿದಾರರಿಗೆ ವಾರ್ಷಿಕ 50 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್ ನೀಡಲಾಗುತ್ತಿದೆ. ಈ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಶೇ.30 ರಿಂದ ಶೇ. 35ರಷ್ಟು ಏರಿಸುವ ಸಾಧ್ಯತೆ ಇದೆ ಎಂದು ಕೇಂದ್ರದ ಹಣಕಾಸು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಈ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುವುದು ಬಾಕಿ ಇದೆ.

ಒಂದು ವೇಳೆ ಏನಾದರೂ ಶೇ.30ರಷ್ಟು ಸ್ಟಾಂಡರ್ಡ್ ಡಿಡಕ್ಷನ್ ಮೊತ್ತ ಏರಿಸಿದರೆ, ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವು 65 ಸಾವಿರಕ್ಕೆ ಏರಿಕೆಯಾಗಲಿದೆ. ಐ.ಟಿ ಪಾವತಿದಾರರಿಗೆ ವಾರ್ಷಿಕ 15 ಸಾವಿರಕ್ಕೆ ಹೆಚ್ಚುವರಿಯಾಗಿ ಐ.ಟಿ ಪಾವತಿಯಿಂದ ವಿನಾಯಿತಿ ಸಿಗಲಿದೆ.

ದೇಶದಲ್ಲಿ ಈಗ ಆದಾಯ ತೆರಿಗೆ ಪಾವತಿಯಲ್ಲಿ ವಾರ್ಷಿಕ 50 ಸಾವಿರ ರೂ.ವರೆಗೂ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತಕ್ಕೆ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಇದೆ. ಈ ವಿನಾಯಿತಿ ಪಡೆಯಲು ಯಾವುದೇ ವೈದ್ಯಕೀಯ ಬಿಲ್​ಗಳನ್ನು ನೀಡುವ ಅಗತ್ಯವಿಲ್ಲ. ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು 75 ಸಾವಿರ ರೂ.ಗೆ ಏರಿಸಬೇಕೆಂದು ಐ.ಟಿ ಪಾವತಿದಾರರು ಬೇಡಿಕೆ ಇಟ್ಟಿದ್ದಾರೆ.

ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಕೊರೊನಾದ ಸಾಂಕ್ರಾಮಿಕ ರೋಗ ಇದೆ. ಇದರಿಂದಾಗಿ ಜನರ ವೈದ್ಯಕೀಯ ಚಿಕಿತ್ಸಾ ವೆಚ್ಚ ಏರಿಕೆಯಾಗಿದೆ. ಹೀಗಾಗಿ, ಆದಾಯ ತೆರಿಗೆ ಪಾವತಿಸುವ ವರ್ಗ, ಉದ್ಯಮ ವರ್ಗ, ತಜ್ಞರು ಸ್ಟಾಂಡರ್ಡ್ ಡಿಡಕ್ಷನ್​ನಲ್ಲಿ ಏರಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಕಳೆದ 3 ವರ್ಷಗಳಲ್ಲಿ ಹಣದುಬ್ಬರ ಕೂಡ ಏರಿಕೆಯಾಗಿದೆ. 2019ರ ಬಜೆಟ್​ನಲ್ಲಿ ಕೊನೆಯ ಬಾರಿಗೆ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು 50 ಸಾವಿರ ರೂ.ಗೆ ಏರಿಸಲಾಗಿತ್ತು.

ಕೊರೊನಾದಿಂದಾಗಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಸಾಮಾನ್ಯ ಎಂಬಂತಾಗಿದೆ. ಇದರಿಂದಾಗಿ ಉದ್ಯೋಗಿಗಳ ವೈದ್ಯಕೀಯ ಚಿಕಿತ್ಸಾ ವೆಚ್ಚ, ಮನೆಯಲ್ಲೇ ಕಚೇರಿ ವ್ಯವಸ್ಥೆ ವೆಚ್ಚ, ಇತರೆ ವೆಚ್ಚಗಳು ಏರಿಕೆಯಾಗಿವೆ. ಹೀಗಾಗಿ ಸ್ಟಾಂಡರ್ಡ್ ಡಿಡಕ್ಷನ್ ಏರಿಕೆ ಮಾಡಿದರೆ ಉದ್ಯೋಗಿಗಳಿಗೆ, ಆದಾಯ ತೆರಿಗೆ ಪಾವತಿದಾರರಿಗೆ ಅನುಕೂಲವಾಗಲಿದೆ. ಕೊರೊನಾ ಕಾರಣದಿಂದ ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಹೆಚ್ಚಿನ ರಿಲೀಫ್ ಅನ್ನು ಐ.ಟಿ ಪಾವತಿದಾರರಿಗೆ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕನಿಷ್ಠ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನೇ ಏರಿಕೆ ಮಾಡಿ ಎಂಬ ಬೇಡಿಕೆಯನ್ನು ಐ.ಟಿ. ಪಾವತಿದಾರರು ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದಾರೆ.

ಹೊಸ ತೆರಿಗೆ ಪದ್ಧತಿಯನ್ನು ಆಳವಡಿಸಿಕೊಂಡಿರುವವರಿಗೆ ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ, ಲಾಭ ಸಿಗುವುದಿಲ್ಲ. ಹಳೆಯ ತೆರಿಗೆ ಪದ್ಧತಿಯಲ್ಲಿ ಐ.ಟಿ ಪಾವತಿಸುವವರಿಗೆ ಮಾತ್ರವೇ ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ, ಲಾಭ ಸಿಗುತ್ತದೆ. ಸ್ಟಾಂಡರ್ಡ್ ಡಿಡಕ್ಷನ್ ಅನ್ನು 2018ರ ಬಜೆಟ್​ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. 2019ರ ಕೇಂದ್ರದ ಬಜೆಟ್​ನಲ್ಲಿ ವೈದ್ಯಕೀಯ ವೆಚ್ಚದ ಬಿಲ್ ಗಳನ್ನು ನೀಡದೇ, ಸ್ಟಾಂಡರ್ಡ್ ಡಿಡಕ್ಷನ್ ಮಾಡುವ ಮೊತ್ತವನ್ನು 40 ಸಾವಿರದಿಂದ 50 ಸಾವಿರ ರೂ.ಗೆ ಏರಿಸಲಾಯಿತು.

ಕೊರೊನಾ ಸಾಂಕ್ರಮಿಕದಿಂದಾಗಿ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ಕಾರ್ಯ ನಿರ್ವಹಿಸುವುದು ಅನಿವಾರ್ಯವಾಗಿದೆ. ಹೀಗಾಗಿ ವಿದ್ಯುತ್, ಇಂಟರ್​ನೆಟ್ ಸೇರಿದಂತೆ ಇತರೆ ವೆಚ್ಚಗಳು ಏರಿಕೆಯಾಗಿವೆ. ಹೀಗಾಗಿ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಏರಿಸುವ ಮೂಲಕ ಆದಾಯ ತೆರಿಗೆ ಪಾವತಿಸುವವರಿಗೆ ರಿಲೀಫ್ ನೀಡಬೇಕೆಂಬ ಬೇಡಿಕೆ ಇದೆ.

ಕೇಂದ್ರ ಸರ್ಕಾರ ಪ್ರತಿ ವರ್ಷ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಪರಿಷ್ಕರಿಸುವ ಅಭ್ಯಾಸ ಇಟ್ಟುಕೊಳ್ಳಬೇಕು ಎಂದು ಆದಾಯ ತೆರಿಗೆ ಪಾವತಿದಾರ ಹಾಗೂ ಖಾಸಗಿ ಕಂಪನಿಯ ಎಚ್.ಆರ್. ಮ್ಯಾನೇಜರ್ ಡಿ.ಎನ್. ದಯಾನಂದಮೂರ್ತಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಎರಡು ಕಾರಣಗಳಿಗಾಗಿ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಏರಿಸಬೇಕೆಂದು ಟ್ಯಾಕ್ಸ್ ಕನ್ಸಲ್ಟೆಂಟ್ ಅಂಡ್ ಅಡ್ವೋಕೇಟ್ ಗೋವಿಂದರಾಜು ಹೇಳುತ್ತಾರೆ, ಮೊದಲನೇಯದಾಗಿ ಹಣದುಬ್ಬರದ ಕಾರಣಕ್ಕಾಗಿ, ಎರಡನೇಯದಾಗಿ ವರ್ಕ್ ಫ್ರಮ್ ಹೋಮ್ ಕಾರಣಕ್ಕಾಗಿ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತ ಏರಿಸಬೇಕೆಂದು ಗೋವಿಂದರಾಜು ಒತ್ತಾಯಿಸಿದ್ದಾರೆ.

ಬಜೆಟ್ ಪೂರ್ವಬಾವಿ ಸಭೆಯಲ್ಲಿ ಅಸೋಚಾಮ್ ಹಾಗೂ ಕಾನಫೇಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಕೂಡ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಏರಿಸಬೇಕೆಂದು ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿವೆ.

ಇದನ್ನೂ ಓದಿ: ಸಂಸತ್ತಿನ ಶೇಕಡಾ 28 ಉದ್ಯೋಗಿಗಳಿಗೆ ಕೊರೋನಾ ಸೋಂಕು ದೃಢ, ತೂಗುಯ್ಯಾಲೆಯಲ್ಲಿ ಬಜೆಟ್ ಅಧಿವೇಶನ

ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ 400 ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗೆ ಕೊವಿಡ್ ಪಾಸಿಟಿವ್

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್