ಎಲ್ಐಸಿ ಐಪಿಒ ಇಶ್ಯೂ ಗಾತ್ರ ರೂ. 53,500 ಕೋಟಿಯಿಂದ ರೂ. 93,625 ಕೋಟಿ; ಪ್ರತಿ ಷೇರಿನ ಬೆಲೆ ರೂ. 1,693-2,962 ಸಾಧ್ಯತೆ
ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಐಪಿಒ ವಿತರಣೆ ಗಾತ್ರ 53,500 ಕೋಟಿ ರೂಪಾಯಿಯಿಂದ 93,625 ಕೋಟಿ ಆಗಬಹುದು ಎನ್ನಲಾಗಿದೆ. ಮತ್ತಿತರ ವಿವರ ಇಲ್ಲಿದೆ.
ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (Life Insurance Corporation) ಎಂಬೆಡೆಡ್ ಮೌಲ್ಯವನ್ನು ಸೆಪ್ಟೆಂಬರ್ 30, 2021ಕ್ಕೆ 5.39 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಖಾಸಗಿ ವಿಮಾ ಕಂಪೆನಿಗಳು ಎಂಬೆಡೆಡ್ ಮೌಲ್ಯದ 3-4 ಬಾರಿ ಹೆಚ್ಚಿನ ಎಂಬೆಡ್ ಮೌಲ್ಯಕ್ಕೆ ವಹಿವಾಟು ನಡೆಸುತ್ತವೆ. ಆದರೆ ಎಂಬೆಡೆಡ್ ಮೌಲ್ಯವು ಹಲವಾರು ಅಂದಾಜಿನ ಆಧಾರದ ಮೇಲೆ ಮಾಡಿರುವಂಥದ್ದಾಗಿದೆ. ಮತ್ತು ಅನೇಕ ಗುಣಾತ್ಮಕ ಅಂಶಗಳ ಆಧಾರದ ಮೇಲೆ ಇನ್ಷೂರೆನ್ಸ್ ಕಂಪೆನಿಗಳಿಗೆ ಬದಲಾಗಬಹುದು. ಗಾತ್ರವನ್ನು ಪರಿಗಣಿಸಿ ಹೇಳುವುದಾದರೆ, ಶೇ 66ರ ಮಾರುಕಟ್ಟೆ ಪಾಲಿನೊಂದಿಗೆ ಎಲ್ಐಸಿ ಹೊಸ ಬಿಜಿನೆಸ್ ಪ್ರೀಮಿಯಂ ಹೊಂದಿದೆ. ಅದರ ಬೆಳವಣಿಗೆ ದರವು ವೇಗವಾಗಿ ಬೆಳವಣಿಗೆ ದಾಖಲಿಸುತ್ತಿರುವ ಕೆಲವು ಖಾಸಗಿ ಇನ್ಷೂರೆನ್ಸ್ ಕಂಪೆನಿಗಳಿಗೆ ಹೋಲಿಸಿದರೆ ತಾಳೆ ಆಗದಿರಬಹುದು.
ಶೇ 2ರಿಂದ ಶೇ 3.5ರ ಮಧ್ಯೆ ಎಂಬೆಡೆಡ್ ಮೌಲ್ಯದ ಶ್ರೇಣಿಯು ನಿಗಮಕ್ಕೆ 10.7 ಲಕ್ಷ ಕೋಟಿ ರೂಪಾಯಿಗಳಿಂದ 18.7 ಲಕ್ಷ ಕೋಟಿ ರೂಪಾಯಿಗಳವರೆಗೆ ಮೌಲ್ಯವನ್ನು ನೀಡುತ್ತದೆ. 632 ಕೋಟಿ ಷೇರಿನ ಒಟ್ಟು ಈಕ್ವಿಟಿ ಬಂಡವಾಳದ ಆಧಾರದ ಮೇಲೆ ಶೇ 5ರ ಮಾರಾಟದ ಕೊಡುಗೆಯ ವಿತರಣೆಯ ಗಾತ್ರವು 53,500 ಕೋಟಿ ರೂಪಾಯಿಗಳಿಂದ 93,625 ಕೋಟಿ ರೂಪಾಯಿ ಆಗಲಿದೆ. ಪ್ರತಿ ಷೇರಿನ ಬೆಲೆಯು ಹೀಗೆ ರೂ. 1693ರಿಂದ ರೂ. 2962 ಆಗಬಹುದು. ಇದರ ವಿರುದ್ಧವಾಗಿ, ಎಲ್ಐಸಿ ಐಪಿಒಗಿಂತ ಮುಂಚಿತವಾಗಿ ಬಂಡವಾಳದ ಮರುಜೋಡಣೆ ಮೂಲಕ ಹೋದ ಕಾರಣ ಷೇರುಗಳ ಸ್ವಾಧೀನ ಸರ್ಕಾರದ ಸರಾಸರಿ ವೆಚ್ಚವು 0.16 ರೂ. ಇದೆ.
ಎಲ್‌ಐಸಿಯ ಆರಂಭಿಕ ಬಂಡವಾಳವು ಅದರ ಇನ್ಕಾರ್ಪೊರೇಟ್ ಆದಾಗ 100 ಕೋಟಿ ರೂಪಾಯಿ ಇತ್ತು. ಎಲ್ಐಸಿ ಒಂದು ಸಮೂಹ ಆಗಿರುವುದರಿಂದ ಮತ್ತು ಪಬ್ಲಿಕ್ ಲಿಸ್ಟೆಡ್ ಕಂಪೆನಿಯಾಗಿ ರೂಪಿಸದ ಕಾರಣ ಯಾವುದೇ ಷೇರುಗಳನ್ನು ಹಂಚಿಕೆ ಮಾಡಿಲ್ಲ. ಸಾರ್ವಜನಿಕ ವಿತರಣೆಗೆ ಮುಂಚಿತವಾಗಿ ನಿಗಮವನ್ನು ಷೇರುದಾರರೊಂದಿಗೆ ಕಾರ್ಪೊರೇಟ್ ರಚನೆಯಾಗಿ ಪರಿವರ್ತಿಸಲು, ನಿಗಮದ ಪ್ರಾರಂಭ ಸಮಯದಲ್ಲಿ ಸರ್ಕಾರದಿಂದ ತುಂಬಿದ 100 ಕೋಟಿ ರೂಪಾಯಿ ಮೂಲ ಬಂಡವಾಳವನ್ನು ಸಮಾನ ಮೊತ್ತಕ್ಕೆ ರೂ. 10 ಮುಖಬೆಲೆಯ ಷೇರುಗಳನ್ನು ಹಂಚಿಕೆ ಮಾಡುವ ಮೂಲಕ ಷೇರು ಬಂಡವಾಳವಾಗಿ ಪರಿವರ್ತಿಸಲಾಯಿತು. 2021ರ ಸೆಪ್ಟೆಂಬರ್ನಲ್ಲಿ, ಕಾರ್ಪೊರೇಷನ್ ನಂತರ ಮಾರ್ಚ್ 31, 2020ರಂತೆ ಎಲ್ಐಸಿ ಪುಸ್ತಕದಲ್ಲಿ ಬಾಕಿ ಉಳಿದಿರುವ ಉಚಿತ ಮೀಸಲುಗಳ ವಿರುದ್ಧ ಅದೇ ಮುಖಬೆಲೆಯಲ್ಲಿ ಹೆಚ್ಚುವರಿ 62.24 ಕೋಟಿ ಈಕ್ವಿಟಿ ಷೇರುಗಳನ್ನು ಮಂಜೂರು ಮಾಡಿತು.
ಆ ನಂತರ ಮತ್ತೊಮ್ಮೆ, 2020 ಮತ್ತು 2021ರ ಆರ್ಥಿಕ ವರ್ಷಗಳಿಗೆ ಭಾರತ ಸರ್ಕಾರದ ಹೆಚ್ಚುವರಿ ಉಳಿಸಿಕೊಂಡಿರುವ ಷೇರಿಗೆ ವಿರುದ್ಧವಾಗಿ ಅದೇ ಮುಖಬೆಲೆಯ 560 ಕೋಟಿ ಈಕ್ವಿಟಿ ಷೇರುಗಳನ್ನು ಹಂಚಲಾಯಿತು. ಎಲ್‌ಐಸಿಯ ಒಟ್ಟು ಬಂಡವಾಳವು ಈಗ 6,324 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: LIC IPO: 90 ಸಾವಿರ ಕೋಟಿ ರೂಪಾಯಿಗಳ ಎಲ್ಐಸಿ ಐಪಿಒ ಮಾರ್ಚ್ ಮಧ್ಯದ ಹೊತ್ತಿಗೆ ಬಿಡುಗಡೆ