ಸಂಬಂಧಗಳಿಗೆ ಮಹತ್ವ ಕೊಡುವ ಬುದ್ಧಿ ಜಮೀರ್​ಗೆ ಬರಲಿ: ಭಾರತಿ ಶೆಟ್ಟಿ ಆಕ್ರೋಶ

Bharathi Shetty: ಕೆಲವರು ಬೇರೆ ಧರ್ಮದ ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಶಾಸಕ ಜಮೀರ್​ ಅಹಮದ್ ಅವರು ಮೊದಲು ಈ ವಿಷಯದತ್ತ ಗಮನ ಹರಿಸಲಿ ಎಂದು ಆಗ್ರಹಿಸಿದರು.

ಸಂಬಂಧಗಳಿಗೆ ಮಹತ್ವ ಕೊಡುವ ಬುದ್ಧಿ ಜಮೀರ್​ಗೆ ಬರಲಿ: ಭಾರತಿ ಶೆಟ್ಟಿ ಆಕ್ರೋಶ
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 14, 2022 | 4:32 PM

ಬೆಂಗಳೂರು: ಹೆಣ್ಣಿನ ಸೌಂದರ್ಯದ ವಿಚಾರದಲ್ಲಿ ಆಲೋಚಿಸುವ ರೀತಿ ಬದಲಾಗಬೇಕು. ನೋಡುವ ದೃಷ್ಟಿ ಸರಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ (Zameer Ahmed) ಅವರ ಕುಟುಂಬಗಳಲ್ಲಿ ಸಂಬಂಧಗಳು ಹೇಗಿರುತ್ತವೆಯೋ ಗೊತ್ತಿಲ್ಲ. ಆದರೆ ಹಿಂದೂ ಸಂಪ್ರದಾಯದಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವವಿದೆ. ಅಣ್ಣ, ತಮ್ಮ, ಅಕ್ಕ, ತಂಗಿ, ಗಂಡ, ಪ್ರಿಯಕರ ಎನ್ನುವ ಸಂಬಂಧಗಳ ನಡುವೆಯೇ ನಾವೆಲ್ಲರೂ ಬೆಳೆಯುತ್ತೇವೆ. ಜಮೀರ್​ ಅಹ್ಮದ್​ ಅವರ ಧರ್ಮದ ಪುರುಷರಿಗೆ ಮಹಿಳೆಯರನ್ನು ಹೇಗೆ ನೋಡಬೇಕು ಎಂಬ ಬಗ್ಗೆ ತಿಳಿಸಿಕೊಡಬೇಕಿದೆ. ಜಿಹಾದ್​ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ತಪ್ಪಾಗಿ ನೋಡುವ ಗಂಡಸರ ಕಣ್ಣು ಕೀಳಬೇಕಿದೆ. ಕೆಲವರು ಬೇರೆ ಧರ್ಮದ ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಶಾಸಕ ಜಮೀರ್​ ಅಹಮದ್ ಅವರು ಮೊದಲು ಈ ವಿಷಯದತ್ತ ಗಮನ ಹರಿಸಲಿ. ಹಿಜಾಬ್​ ವಿವಾದದ ಹಿಂದೆ ಬಹುದೊಡ್ಡ ನೆಟ್​ವರ್ಕ್​ ಕೆಲಸ ಮಾಡಿದೆ. ಈ ವಿವಾದವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಕೆಲವರು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ನೆಟ್​ವರ್ಕ್​ ಕೆಲಸ ಮಾಡುತ್ತಿದೆ ಎಂದು ನುಡಿದರು. ನಾವು 40 ವರ್ಷಗಳ ಹಿಂದೆ ವಿದ್ಯಾಭ್ಯಾಸ ಮಾಡುವಾಗ ಯಾವ ಹಿಜಾಬೂ ಇರಲಿಲ್ಲ. ಈಗ ಇಷ್ಡು ದೊಡ್ಡ ಮಟ್ಟದ ಸುದ್ದಿ ಯಾಕೆ ಆಯಿತು ಎಂದು ಪ್ರಶ್ನಿಸಿದರು.

ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ: ಜಮೀರ್

ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್​ಖಾನ್​ ನಿನ್ನೆ (ಫೆಬ್ರವರಿ 13) ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಿಜಾಬ್​ ಅಂದ್ರೆ ಮುಸಲ್ಮಾನರಲ್ಲಿ ಗೋಶಾಪರದ ಅಂತ ಹೇಳ್ತೇವೆ. ಅವರ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಿದ್ದರೆ ಗೊತ್ತಾಗುತ್ತಿತ್ತು. ಹೆಣ್ಣುಮಕ್ಕಳು ತಮ್ಮ ರಕ್ಷಣೆಗಾಗಿ ಹಿಜಾಬ್​ ಧರಿಸುತ್ತಾರೆ. ಹೆಣ್ಣುಮಕ್ಕಳು ದೊಡ್ಡವರಾದ ಮೇಲೆ ದೇಹರಚನೆ ಕಾಣಿಸಬಾರದು. ದೇಹರಚನೆ ಹೊರಗೆ ಕಾಣಿಸಬಾರದು ಎಂದು ಹಿಜಾಬ್​ ಬಳಸ್ತಾರೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವುದು ಭಾರತದಲ್ಲಿ. ಹಿಜಾಬ್​ ಹಾಕದಿರುವ ಕಾರಣದಿಂದ ಇಂತಹ ಘಟನೆ ನಡೆದಿದೆ ಎಂದು ಜಮೀರ್ ಅಹ್ಮದ್ ಹೇಳಿದ್ದರು.

ನಂತರ ಧುತ್ತನೆ ತಮ್ಮ ಹೇಳಿಕೆ ಹಿಂಪಡೆದ ಜಮೀರ್, ‘ನಾನು ಹಾಗೆ ಹೇಳಿಯೇ ಇಲ್ಲ. ಹಿಜಾಬ್​ನಿಂದ ಹೆಣ್ಣು ಮಕ್ಕಳಿಗೆ ಸೇಫ್ಟಿ ಎಂದು ಹೇಳಿದ್ದೇನೆ. ಹಿಜಾಬ್ ಧರಿಸಿದರೆ ಹೆಣ್ಣು ಮಕ್ಕಳ ಬ್ಯೂಟಿ ಕಾಣುವುದಿಲ್ಲ. ಅವರಿಗೆ ಸೇಫ್ಟಿ ಇರುತ್ತೆ ಎಂಬ ಅರ್ಥದಲ್ಲಿ ನಾನು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಹಿಜಾಬ್ ಧರಿಸದಿದ್ದರೆ ರೇಪ್ ಆಗುತ್ತೆಂದು ನಾನು ಹೇಳಿಲ್ಲ; ಯುಟರ್ನ್ ಹೊಡೆದ ಶಾಸಕ ಜಮೀರ್ ಅಹ್ಮದ್

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿ ಮುಖದ ಮೇಲೆ ‘ಅಪ್ನಾ ಟೈಮ್ ಆಯೇಗಾ’ ಅಂತ ಬರೆಯಲಾದ ಮಾಸ್ಕ್!