Crime Updates: ಜೈಲಿನಿಂದ ಬಿಡುಗಡೆಯಾಗಿ 21ನೇ ದಿನಕ್ಕೇ ಕಳ್ಳತನ; ಕಾರು ಕದಿಯುವಾಗ ಸಿಕ್ಕಿಬಿದ್ದ ಖದೀಮರು

| Updated By: ganapathi bhat

Updated on: Mar 03, 2022 | 11:19 AM

ಕಾರಿನ ಗಾಜು ಒಡೆದು ಸ್ಟೇರಿಂಗ್ ಲಾಕ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು. ಮುನಿರಾಜು ಕಾರು ತೆಗೆಯಲು ಹೋದಾಗ ಶೂಟರ್ ಸಲ್ಮಾನ್ ಕಾರಿನಲ್ಲಿ ಕೂತಿದ್ದ. ಮೆಹಬೂಬ್ ಉಮೆರ್ ಅಲ್ಲೆ ಪಕ್ಕದಲ್ಲಿ ಅಡಗಿ ಕುಳಿತಿದ್ದ. ಅವರು ಕಾರನ್ನು ಕದಿಯಲು ಬಂದಿರೋದು ಗೊತ್ತಾಗಿ ಮುನಿರಾಜು ಸಹಾಯಕ್ಕಾಗಿ ಕಿರುಚಿದ್ದರು.

Crime Updates: ಜೈಲಿನಿಂದ ಬಿಡುಗಡೆಯಾಗಿ 21ನೇ ದಿನಕ್ಕೇ ಕಳ್ಳತನ; ಕಾರು ಕದಿಯುವಾಗ ಸಿಕ್ಕಿಬಿದ್ದ ಖದೀಮರು
ಮೆಹಬೂಬ್ ಉಮರ್ ಅಲಿಯಾಸ್ ನವಾಜ್ ಮತ್ತು ಶೂಟರ್ ಸಲ್ಮಾನ್
Follow us on

ಬೆಂಗಳೂರು: ಕಳ್ಳನೊಬ್ಬ ಜೈಲಿನಿಂದ ಬಿಡುಗಡೆಯಾಗಿ 21 ದಿನಕ್ಕೇ ಕಳ್ಳತನಕ್ಕೆ ಇಳಿದ ಘಟನೆ ನಡೆದಿದೆ. ಪಲ್ಸರ್ ಬೈಕ್ ನಲ್ಲಿ ಬಂದು ಕಾರು ಕಳ್ಳತನ ಮಾಡುತ್ತಿದ್ದ ಆಸಾಮಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಹೈಫೈ ಏರಿಯಾದಲ್ಲಿ ಮತ್ತೆ ಕಾರು ಕಳ್ಳತನ ಮಾಡಲು ಹೋಗಿ ಕಳ್ಳ ಸಿಕ್ಕಿಹಾಕಿಕೊಂಡಿದ್ದಾನೆ. ಶೂಟರ್ ಸಲ್ಮಾನ್ ಮತ್ತು ಮೆಹಬೂಬ್ ಉಮರ್ ಅಲಿಯಾಸ್ ನವಾಜ್ ಎಂಬವರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಪಾರ್ಕಿಂಗ್ ಮಾಡಿದ್ದ ಕಾರನ್ನು ಶೂಟರ್ ಸಲ್ಮಾನ್ ಮತ್ತು ನವಾಜ್ ಕಳ್ಳತನ ಮಾಡಲು ಹೋಗಿದ್ದರು. ಮುನಿರಾಜು ಎನ್ನುವವರಿಗೆ ಸೇರಿದ್ದ ಕಾರನ್ನು ಕಳ್ಳತನ ಮಾಡಲು ಬಂದಿದ್ದ ಆರೋಪಿಗಳು, ಕಾರಿನ ಗಾಜು ಒಡೆದು ಸ್ಟೇರಿಂಗ್ ಲಾಕ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು. ಮುನಿರಾಜು ಕಾರು ತೆಗೆಯಲು ಹೋದಾಗ ಶೂಟರ್ ಸಲ್ಮಾನ್ ಕಾರಿನಲ್ಲಿ ಕೂತಿದ್ದ. ಮೆಹಬೂಬ್ ಉಮೆರ್ ಅಲ್ಲೆ ಪಕ್ಕದಲ್ಲಿ ಅಡಗಿ ಕುಳಿತಿದ್ದ. ಅವರು ಕಾರನ್ನು ಕದಿಯಲು ಬಂದಿರೋದು ಗೊತ್ತಾಗಿ ಮುನಿರಾಜು ಸಹಾಯಕ್ಕಾಗಿ ಕಿರುಚಿದ್ದರು.

ತಕ್ಷಣವೇ ಶೂಟರ್ ಸಲ್ಮಾನ್, ಮುನಿರಾಜವನ್ನ ಚಾಕುವಿನಿಂದ ಮುಗಿಸಿ ಬಿಡು ಎಂದಿದ್ದ. ಆದರೆ, ಸ್ಥಳೀಯರು ಮುನಿರಾಜು ಕೂಗಿದ್ದರಿಂದ ಸಹಾಯಕ್ಕೆ ಬಂದಿದ್ದರು. ಸ್ಥಳೀಯರನ್ನು ನೋಡಿ ಬೈಕ್ ಬಿಟ್ಟು ಎಸ್ಕೇಪ್ ಅಗಲು ಪ್ರಯತ್ನಿಸಿದ್ದ ಆರೋಪಿಗಳು, ಆಯತಪ್ಪಿ ಬಿದ್ದು ಸ್ಥಳಿಯರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದೀಗ ಸದಾಶಿವ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶೂಟರ್ ಸಲ್ಮಾನ್ ಬರೋಬ್ಬರಿ 11 ಪ್ರಕರಣ ಇರುವುದು ತಿಳಿದುಬಂದಿದೆ. ಕೊಲೆ, ಕೊಲೆಯತ್ನ, ಕಿಡ್ನಾಪ್, ರಾಬರಿ ಪ್ರಕರಣದಲ್ಲೂ ಸಲ್ಮಾನ್ ಭಾಗಿ ಆಗಿದ್ದಾರೆ.

ಇತರ ಅಪರಾಧ ಸುದ್ದಿಗಳು

ಯಾದಗಿರಿ: ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ ಆಗಿದೆ. ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 11 ಮಂದಿ ಗಾಯಾಳುಗಳು ಮೃತಪಟ್ಟಿದ್ದಾರೆ.

ಕಲಬುರಗಿ: ನಗರದ ನೂರ್ ಮೊಹಲ್ಲಾ ಕಾಲೋನಿಯಲ್ಲಿ ಕತ್ತು ಕೊಯ್ದು ಶಹನ್ ಬೇಗಂ (36) ಎಂಬಾಕೆಯನ್ನು ಕೊಲೆ ಮಾಡಲಾಗಿದೆ. ವಸೀಂ ಅಕ್ರಂ ಎಂಬಾತ ಹತ್ಯೆಗೈದಿದ್ದಾನೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಜಯನಗರ: ಅಮರದೇವರಗುಡ್ಡದಿಂದ ಕೂಡ್ಲಿಗಿ ಪಟ್ಟಣಕ್ಕೆ ಬರುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ವಿನಾಯಕ (24) ದುರ್ಮರಣನ್ನಪ್ಪಿದ ಘಟನೆ ನಡೆದಿದೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಗುಡ್ಡದಹಳ್ಳಿ ಬಳಿ ಆಂಧ್ರದ ಮೂಲದ ನಿಂಗಪ್ಪ (40) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಪಾರ್ವತಮ್ಮ, ಪ್ರಿಯಕರ ಹೊನ್ನೂರ ಸ್ವಾಮಿ ಬಂಧಿಸಲಾಗಿದೆ. ತಳಕು ಠಾಣೆ ಇನ್ಸ್​ಪೆಕ್ಟರ್​ ಸಮೀವುಲ್ಲಾ, ರಾಂಪುರ ಪಿಎಸ್​ಐ ಗಾದಿಲಿಂಗಪ್ಪ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಇದನ್ನೂ ಓದಿ: Crime News: ಸಿಗರೇಟ್​ನಿಂದ ಸುಟ್ಟು ಗರ್ಭಿಣಿ ಮಹಿಳೆಗೆ ಚಿತ್ರಹಿಂಸೆ; ವರದಕ್ಷಿಣೆಗೆ ಪೀಡಿಸಿದ ಪತಿರಾಯ ಅರೆಸ್ಟ್

ಇದನ್ನೂ ಓದಿ: Crime Updates: ತಲಾ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಬಿಬಿಎಂಪಿ ಸಿಬ್ಬಂದಿ, ಬೆಸ್ಕಾಂ ಅಧಿಕಾರಿ ಎಸಿಬಿ ಬಲೆಗೆ