Crime News: ಸಿಗರೇಟ್​ನಿಂದ ಸುಟ್ಟು ಗರ್ಭಿಣಿ ಮಹಿಳೆಗೆ ಚಿತ್ರಹಿಂಸೆ; ವರದಕ್ಷಿಣೆಗೆ ಪೀಡಿಸಿದ ಪತಿರಾಯ ಅರೆಸ್ಟ್

Crime News: ಸಿಗರೇಟ್​ನಿಂದ ಸುಟ್ಟು ಗರ್ಭಿಣಿ ಮಹಿಳೆಗೆ ಚಿತ್ರಹಿಂಸೆ; ವರದಕ್ಷಿಣೆಗೆ ಪೀಡಿಸಿದ ಪತಿರಾಯ ಅರೆಸ್ಟ್
ವರದಕ್ಷಿಣೆಗೆ ಪೀಡಿಸಿದ ಪತಿರಾಯ ಅರೆಸ್ಟ್

Crime Updates: ಪ್ರತೀ ದಿನ ಚಿನ್ನ ಹಾಗೂ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಪ್ರದೀಪ್, 2 ಲಕ್ಷ ಹಣ ಹಾಗೂ ನಾಲ್ಕು ಪವನ್ ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿತ್ತು. ಪತ್ನಿಯ ದೂರಿನ ಮೇಲೆ ಆರೋಪಿ ಬಂಧಿಸಲಾಗಿದೆ.

TV9kannada Web Team

| Edited By: ganapathi bhat

Mar 01, 2022 | 2:50 PM

ಉಡುಪಿ: ಸಿಗರೇಟ್​ನಿಂದ ಸುಟ್ಟು ಗರ್ಭಿಣಿ ಮಹಿಳೆಗೆ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡಿದ ಪತಿರಾಯ ಅರೆಸ್ಟ್ ಆಗಿದ್ದಾನೆ. ಕುಂದಾಪುರ ‌ಪೊಲೀಸರಿಂದ ಆರೋಪಿ ಬಂಧ‌ನ ಮಾಡಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬರೆಗಟ್ಟು ನಿವಾಸಿ ಪ್ರದೀಪ್ ಬಂಧಿತ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಸಿಗರೇಟ್​​ನಿಂದ ಚಿತ್ರಹಿಂಸೆ ನೀಡುವ ವೀಡಿಯೋ ವೈರಲ್ ಆಗಿತ್ತು. ಪತ್ನಿ ಪ್ರಿಯಾಂಕ ವರದಕ್ಷಿಣೆಗಾಗಿ ಹಿಂಸೆ ಪ್ರಕರಣ ಕೂಡ ದಾಖಲಿಸಿದ್ದರು

ಪ್ರದೀಪ್ ಹಾಗೂ ಪ್ರಿಯಾಂಕ ಪ್ರೀತಿಸಿ ಮದುವೆಯಾಗಿದ್ದರು. ಕ್ಷಮೆ ಕೇಳುವಂತೆ ಒತ್ತಾಯಿಸಿ ಸಿಗರೇಟ್​ನಿಂದ ಸುಡುವ ಯತ್ನ ಮಾಡುವ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಪತ್ನಿ ಪ್ರಿಯಾಂಕ ವರದಕ್ಷಿಣೆಗಾಗಿ ಹಿಂಸೆ ಪ್ರಕರಣ ದಾಖಲಿಸಿದ್ದರು. ಪ್ರತೀ ದಿನ ಚಿನ್ನ ಹಾಗೂ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಪ್ರದೀಪ್, 2 ಲಕ್ಷ ಹಣ ಹಾಗೂ ನಾಲ್ಕು ಪವನ್ ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿತ್ತು. ಪತ್ನಿಯ ದೂರಿನ ಮೇಲೆ ಆರೋಪಿ ಬಂಧಿಸಲಾಗಿದೆ.

ಹೈಎಂಡ್ ಕಾರು ಕಳ್ಳತನ ಮಾಡುತ್ತಿದ್ದ ಜೈಪುರ ಮೂಲದ ಸತ್ಯೇಂದ್ರ ಸಿಂಗ್ ಶೇಖಾವತ್ ಬಂಧನ

ಬೆಂಗಳೂರು: ಹೈಎಂಡ್ ಕಾರು ಕಳ್ಳತನ ಮಾಡುತ್ತಿದ್ದ ಆರೋಪಿ ಜೈಪುರ ಮೂಲದ ಸತ್ಯೇಂದ್ರ ಸಿಂಗ್ ಶೇಖಾವತ್ ಬಂಧಿಸಲಾಗಿದೆ. ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಜಾರ ಹಿಲ್ಸ್ ಬಳಿಯಿಂದ ಪೊಲೀಸ್ ಠಾಣೆಯಲ್ಲಿ ಕಾರುಗಳ್ಳತನ ಮಾಡಿದ್ದ ಆರೋಪಿ ತೆಲಂಗಾಣ ಪೊಲೀಸರಿಗೆ ವಾಟ್ಸಾಪ್​​ನಲ್ಲಿ ಕ್ಯಾಚ್ ಮಿ ಇಫ್​ ಯು ಕ್ಯಾನ್ ಎಂದು ಮೆಸೇಜ್ ಮಾಡಿದ್ದ. ಕದ್ದ ಕಾರನ್ನು ಡ್ರಗ್ಸ್ ಮಾಫಿಯಾ‌ ಲೀಡರ್​​ಗಳಿಗೆ ಮಾರಾಟ ಮಾಡುತ್ತಿದ್ದ ಶೇಖಾವತ್ ಇದೀಗ ಬಂಧಿಸಲಾಗಿದೆ.

ಕೋಣನಕುಂಟೆ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ನಾಯಿ ಸಂತೋಷ ಬಂಧನ

ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಕೋಣನಕುಂಟೆ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ನಾಯಿ ಸಂತೋಷ ಎಂಬಾತನ ಬಂಧನವಾಗಿದೆ. ಕಳೆದ 27 ರಂದು ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ರಾಬರಿ ಮಾಡಿದ್ದ ಸಂತೋಷ್, ಹುಳಿಮಾವು ವ್ಯಾಪ್ತಿಯ ಉಡುಪಿ ಗಾರ್ಡೇನಿಯಾ ಹತ್ತಿರ ಸಾರ್ವಜನಿಕರ ಬಳಿ ರಾಬರಿ ಮಾಡುತ್ತಿದ್ದ. ಮಾರಕಾಸ್ತ್ರ ತೋರಿಸಿ ಚಿನ್ನಾಭರಣ ದೋಚಿದ್ದ ನಾಯಿ ಸಂತೋಷ್ ಇದೀಗ ಬಂಧಿಸಲಾಗಿದೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತೋಷ್ 2017 ರಲ್ಲಿ ಕೋಣನಕುಂಟೆ ಠಾಣಾವ್ಯಾಪ್ತಿಯ ಜೋಡಿ ಕೊಲೆಯ ಆರೋಪಿ ಕೂಡ ಆಗಿದ್ದ. ಸದ್ಯ ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ ಮಾಡಲಾಗಿದೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇತರ ಅಪರಾಧ ಸುದ್ದಿಗಳು

ಬೆಂಗಳೂರು: ಮಾಂಗಲ್ಯ ಸರ ಎಗರಿಸಿ ಎಸ್ಕೇಪ್ ಆಗಿದ್ದ ಖದೀಮರನ್ನು ಬಂಧಿಸಲಾಗಿದೆ. ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಚೈನ್ ಎಗರಿಸ್ತಿದ್ದ ಖದೀಮರ ಬಂಧನವಾಗಿದೆ. ವರದರಾಜು ಹಾಗೂ ರಾಜೇಶ್ ಬಂಧಿತ ಆರೋಪಿಗಳು. ಫೆ.14 ರಂದು ಶ್ರೀ ನಗರದ ಕಾಳಪ್ಪ ಬ್ಲಾಕ್​ನಲ್ಲಿ ಘಟನೆ ನಡೆದಿತ್ತು. ಮಹಿಳೆಯ ಕತ್ತಿನಲ್ಲಿದ್ದ ಚೈನ್ ಕಿತ್ತು ಗ್ಯಾಂಗ್ ಪರಾರಿಯಾಗಿತ್ತು. ಚೈನ್ ಕಿತ್ತು ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಹನುಮಂತ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮಹಿಳೆ, ದೂರಿನಂತೆ ಇದೀಗ ಸದ್ಯ ಆರೋಪಿಗಳನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ನಕ್ಷತ್ರ ಆಮೆಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ರವಿಚಂದ್ರ (56) ಎಂಬಾತನನ್ನು ಬಂಧಿಸಲಾಗಿದೆ. 2 ಜೀವಂತ ಆಮೆಗಳನ್ನು ವಶಕ್ಕೆ ಪಡೆಯಲಾಗಿದೆ.

ರಾಯಚೂರು: ನಗರದ ವಿವಿಧೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. 25 ಲೀಟರ್ ಸೇಂದಿ, 1 ಕೆಜಿ ಸಿಹೆಚ್ ಪೌಡರ್, ಒಂದು ಬೈಕ್ ಜಪ್ತಿ ಮಾಡಲಾಗಿದೆ. ರಾಂಪುರ ಬಳಿ ವೀರೇಶ್, ತಿಮ್ಮಪ್ಪ ಬಂಧನ ಮಾಡಲಾಗಿದೆ. ನ್ಯೂ ಮೆದರ್ ವಾಡಿಯಲ್ಲಿ ಕಿಶೋರ್‌ಲಾಲ್ ಬಂಧನವಾಗಿದೆ. 32 ಕೆಜಿ ಸಿಹೆಚ್ ಪೌಡರ್, 4 ಕೆಜಿ ವೈಟ್ ಪೇಸ್ಟ್, 2 ಕೆಜಿ ಸಿಟ್ರಿಕ್ ಆ್ಯಸಿಡ್, 3 ಕೆಜಿ ಸ್ಯಾಕ್ರಿನ್ ಹಾಗೂ 10 ಲಿಟರ್ ಸೇಂದಿ ಜಪ್ತಿ ಮಾಡಲಾಗಿದೆ. ಟಿಪ್ಪು ಸುಲ್ತಾನ್ ವೃತ್ತದ ಬಳಿ ದಾಳಿ ವೇಳೆ ಆರೋಪಿ ಪರಾರಿ ಆಗಿದ್ದಾನೆ. ಅಬಕಾರಿ ಇಲಾಖೆ ಅಧಿಕಾರಿಗಳು ಆರೋಪಿಯ ಬೈಕ್, 4 ಕೆಜಿ ಸಿಎಚ್ ಪೌಡರ್ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಫೇಸ್​ಬುಕ್​​ನಲ್ಲಿ ಮಹಿಳೆಯರ ಫೋಟೋ, ಸಂಪರ್ಕ ಸಂಖ್ಯೆ ಹಾಕಿ ಕಿರುಕುಳ; ಡಾರ್ಲಿಂಗ್ ಚಂದು ಎಂಬಾತನ ಬಂಧನ

ಇದನ್ನೂ ಓದಿ: ಕೊಪ್ಪಳ: ಜನರಿಗೆ ವಿವಿಧ ರೀತಿ ವಂಚನೆ ಮಾಡುತ್ತಿದ್ದ ಕಪಟ ಸ್ವಾಮೀಜಿ ಪೊಲೀಸರ ಬಲೆಗೆ

Follow us on

Related Stories

Most Read Stories

Click on your DTH Provider to Add TV9 Kannada