ಓವರ್ ಟೇಕ್ ಮಾಡಲು ಬಿಡಲಿಲ್ಲವೆಂದು ಹೆಲ್ಮೆಟ್​ನಿಂದ ಕಾರಿನ ಮೇಲೆ ಹಲ್ಲೆ; ಮೂರು ವರ್ಷದ ಮಗುವಿಗೆ ಗಾಯ

ಬೈಕ್​ ಗೆ ಕಾರು ಓವರ್ ಟೇಕ್ ಮಾಡಲು ಜಾಗ ಬಿಡಲಿಲ್ಲವೆಂದು ಕೋಪಗೊಂಡ ಬೈಕ್ ಚಾಲಕ ತನ್ನ ಹೆಲ್ಮೆಟ್​ನಿಂದ ಕಾರಿನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಕಾರಿನ ಗಾಜು ಒಡೆದು ಕಾರಿನೊಳಗಿದ್ದ ಮೂರು ವರ್ಷದ ಮಗುಗೆ ಗಾಯಗಳಾಗಿವೆ. ಅಲ್ಲದೆ ಕಾರು ಚಾಲಕನ ಮೇಲೆಯೂ ಹಲ್ಲೆಯಾಗಿದೆ.

ಓವರ್ ಟೇಕ್ ಮಾಡಲು ಬಿಡಲಿಲ್ಲವೆಂದು ಹೆಲ್ಮೆಟ್​ನಿಂದ ಕಾರಿನ ಮೇಲೆ ಹಲ್ಲೆ; ಮೂರು ವರ್ಷದ ಮಗುವಿಗೆ ಗಾಯ
ಸಿಸಿಟಿವಿ ದೃಶ್ಯ

Updated on: May 23, 2024 | 10:51 AM

ಬೆಂಗಳೂರು, ಮೇ.23: ದಂಪತಿ ಮತ್ತು ಅವರ ಮೂರು ವರ್ಷದ ಮಗಳು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದ್ವಿಚಕ್ರ ವಾಹನ ಸವಾರನೊಬ್ಬ ದಾಳಿ ನಡೆಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಓವರ್ ಟೇಕ್ (Over Take) ಮಾಡಲು ಜಾಗ ಬಿಡಲಿಲ್ಲವೆಂದು ರೊಚ್ಚಿಗೆದ್ದ ಬೈಕ್ ಸವಾರ ಏಕಾಏಕಿ ಕಾರು ಚಾಲಕನ ಮೇಲೆ ದಾಳಿ ನಡೆಸಿದ್ದಾನೆ. ಘಟನೆ ಸಂಬಂಧ ಕಾರು ಮಾಲೀಕ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೇರಳ ಮೂಲದ ಐಟಿ ವೃತ್ತಿಪರ ಅಖಿಲ್ ಸಾಬು ಎಂಬುವವರು ತಮ್ಮ ಪತ್ನಿ ಹಾಗೂ ಮೂರು ವರ್ಷದ ಮಗಳ ಜೊತೆ ಸರ್ಜಾಪುರ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ. ಇನ್ನು ಘಟನೆಯಲ್ಲಿ ಬೈಕ್ ಚಾಲಕ ಕಾರಿನ ಗ್ಲಾಸ್ ಒಡೆದು ಹಾಕಿದ್ದು ಕಾರಿನೊಳಗಿದ್ದ ಮಗಳಿಗೆ ಗಾಯಗಳಾಗಿವೆ ಎಂದು ಅಖಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಸ್ಥಳೀಯ ನಿವಾಸಿ ಜಗದೀಶ್ ಎಂದು ಗುರುತಿಸಲಾಗಿದೆ.

ಈ ಕಿರಿಕ್​ನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಬೈಕ್ ಚಾಲಕ ಕುಟುಂಬ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟುವುದನ್ನು ಕಾಣಬಹುದು.

ಇದನ್ನೂ ಓದಿ: ಕರ್ನಾಟಕದಲ್ಲಿ 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯ ವಯೋಮಿತಿ: ಪೋಷಕರ ಆಕ್ರೋಶ

ಕಾರಿನ ಹಿಂಬದಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಜಗದೀಶ್​ ಓವರ್​ ಟೇಕ್​ ಮಾಡಲು ಕಾರು ಅಡ್ಡ ಬರುತ್ತಿದೆ ಎಂದು ಹೇಳಿ ಕಾರನ್ನು ಅಡ್ಡಗಟ್ಟಿ ತನ್ನ ಹೆಲ್ಮೆಟ್​ನಿಂದ ಕಾರಿನ ಗಾಜಿಗೆ ಒಡೆದಿದ್ದಾನೆ. ಈ ವೇಳೆ ನಡು ರಸ್ತೆಯಲ್ಲಿ ಕಾರು ಚಾಲಕ ಮತ್ತು ಬೈಕ್​ ಚಾಲಕರಿಬ್ಬರು ಬಡಿದಾಡಿಕೊಂಡಿದ್ದಾರೆ.

ಘಟನೆಯಲ್ಲಿ ಕಾರು ಚಾಲಕನ ಕಣ್ಣು, ಮೂಗು, ಕೆನ್ನೆಗೆ ಗಾಯವಾಗಿದೆ. ಅಷ್ಟೆ ಅಲ್ಲದೇ ದ್ವಿಚಕ್ರ ವಾಹನ ಸವಾರ ತನ್ನ ಹೆಲ್ಮೆಟ್​ನಿಂದ ಕಾರಿನ ಗಾಜು ಹೊಡೆದಿದ್ದರಿಂದ ಕಾರಿನಲ್ಲಿದ್ದ 3 ವರ್ಷದ ಮಗುವಿಗೆ ಕೈಗೆ ಗಾಯವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:44 am, Thu, 23 May 24