ಬೆಂಗಳೂರು: ಅನಧಿಕೃತವಾಗಿ ಪಾಕಿಸ್ತಾನಕ್ಕೆ ಟ್ರಾಮಡೋಲ್ ನೋವು ನಿವಾರಕ ಔಷಧ ರಫ್ತು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ವಲಯದ NCB (Bangalore NCB) ಅಧಿಕಾರಿಗಳು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಲ್ಯೂಸೆಂಟ್ ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ಸೇರಿದಂತೆ ನಾಲ್ವರನ್ನ ಬಂಧಿಸಲಾಗಿದೆ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಕಂಪನಿ ಇದಾಗಿದೆ. ಈ ಕಂಪನಿ ಪಾಕಿಸ್ತಾನಕ್ಕೆ (Pakistan) ವಾರ್ಷಿಕ 25 ಸಾವಿರ ಕೆಜಿ ಟ್ರಾಮಡೋಲ್ ಡ್ರಗ್ (Tramadol HCL) ರಫ್ತು ಮಾಡುತ್ತಿತ್ತು. ಪಾಕ್ ಸೇರಿದಂತೆ ಡೆನ್ಮಾರ್ಕ್, ಜರ್ಮನಿ, ಮಲೇಷ್ಯಾಗೂ ರಫ್ತು ಮಾಡುತ್ತಿತ್ತು. ಲ್ಯೂಸೆಂಟ್ ಡ್ರಗ್ಸ್ ಕಂಪನಿ ಟ್ರಾಮಡೋಲ್ ರಫ್ತಿಗೆ ಯಾವುದೇ ಪರವಾನಗಿ ಹೊಂದಿಲ್ಲ ಎಂಬುದು ಗಮನಾರ್ಹ.
ಪ್ರಮುಖ ನಗರಗಳಲ್ಲಿ ಮಾರ್ಚ್ 19ರ ಚಿನ್ನದ ದರ ಹೀಗಿದೆ
ಚಿನ್ನದ ಬೆಲೆ ಮಾರ್ಚ್ 18, 2022ರ ಶನಿವಾರ ಎಷ್ಟಿದೆ ಎಂಬ ವಿವರ ಬೇಕಿದೆಯಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ ಶುದ್ಧತೆಯ ಚಿನ್ನದ ದರ ಎಷ್ಟು ಎಂಬ ಬಗ್ಗೆ ವಿವರಣೆ ಇಲ್ಲಿದೆ. ಹಣ ಹೂಡಿಕೆ ಉದ್ದೇಶಕ್ಕೋ ಶುಭ ಸಮಾರಂಭಕ್ಕೋ ಹೀಗೆ ಯಾವುದಕ್ಕಾದರೂ ಚಿನ್ನ ಅಥವಾ ಬೆಳ್ಳಿ ಖರೀದಿಸಬೇಕು ಅಂತಿದ್ದರೆ ಇಲ್ಲಿರುವ ದರದಿಂದ ಸಹಾಯ ಆಗಬಹುದು. ಈಗಿನ ದರದಲ್ಲಿ ಚಿನ್ನ- ಬೆಳ್ಳಿಯನ್ನು ಖರೀದಿ ಮಾಡಬೇಕಾ ಅಥವಾ ಬೇಡವಾ ಎಂಬ ಬಗ್ಗೆ ನಿರ್ಧಾರ ಮಾಡಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
Published On - 7:42 pm, Sat, 19 March 22