ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿಯ ಎಸ್‌ಟಿ ವಿದ್ಯಾರ್ಥಿಗಳ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ತಿಂಡಿ ಊಟ ತಿನ್ನುವಾಗಲೆಲ್ಲ ವಿದ್ಯಾರ್ಥಿಗಳಿಗೆ ಕಲ್ಲು, ಹುಳುಗಳು ಸಿಗುತ್ತಿದ್ದು ವಿದ್ಯಾರ್ಥಿಗಳ ಕಂಗಾಲಾಗಿದ್ದಾರೆ. ಗುಣ ಮಟ್ಟದ ಆಹಾರ ನೀಡಿ ಎಂದು ಒತ್ತಾಯಿಸಿದ್ದು ವಸತಿ ನಿಲಯದ ವಾರ್ಡನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಟ್ರಿನಿಟಿ ಸರ್ಕಲ್ ಬಳಿಯ ಸರ್ಕಾರಿ ಹಾಸ್ಟೆಲ್‌ನಲ್ಲಿ ಎಸ್‌ಟಿ ವಿದ್ಯಾರ್ಥಿಗಳ ಊಟದಲ್ಲಿ ತರಕಾರಿ, ಬೇಳೆ ಜೊತೆ ಹುಳು, ಕಲ್ಲುಗಳು ಪ್ರತ್ಯಕ್ಷವಾಗುತ್ತಿವೆ. ಕಳೆದ 1 ವಾರದಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಆದ್ರೂ ಹಾಸ್ಟೆಲ್ ವಾರ್ಡನ್ ಕಳಪೆ ಆಹಾರ ಪೂರೈಸುತ್ತಿದ್ದಾರೆ ಎಂದು ವಸತಿ ನಿಲಯದ ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಕಲಾ ಕಾಲೇಜಿನ ಪರಿಶಿಷ್ಟ ಜಾತಿ ಬಾಲಕರ ಹಾಸ್ಟಲ್ನಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಈ ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಕ್ವಾಲಿಟಿ ಇಲ್ಲದ ಪದಾರ್ಥಗಳಿಂದ ವಿದ್ಯಾರ್ಥಿಗಳಿಗೆ ಉಪಹಾರ ತಯಾರಿಸಲಾಗುತ್ತಿದೆ. ದೂಳು ಹಿಡಿದು, ಮುಗ್ಗಿ ಹೋಗಿರುವ ಅಕ್ಕಿಂದಲೇ ಅನ್ನ ತಯಾರಿಸಲಾಗುತ್ತಿದೆ. ಅಡುಗೆ ತಯಾರಿಸುವ ಮೆಸ್ ದುರ್ವಾಸನೆಯಲ್ಲೇ ವಿದ್ಯಾರ್ಥಿಗಳು ಊಟ ಸೇವಿಸುವ ಪರಿಸ್ಥಿತಿ ಇದೆ. ಬೇಕಾಬಿಟ್ಟಿಯಾಗಿ ಅಡುಗೆ ತಯಾರು ಮಾಡಲಾಗುತ್ತಿದೆ. ಒಬ್ಬೊಬ್ಬರಾಗಿಯೇ ವಿದ್ಯಾರ್ಥಿಗಳು ಅಸ್ವಸ್ಥರಾಗ್ತಿದ್ದಾರೆ. ವಾಂತಿ- ಭೇದಿ ಕಾಯಿಲೆ ವಕ್ಕರಿಸುವ ಭೀತಿಯಲ್ಲಿ ವಿದ್ಯಾರ್ಥಿಗಳಿದ್ದು ಪರೀಕ್ಷೆ ಸಮಯದಲ್ಲಿ ಆರೋಗ್ಯ ಹಾಳಾದ್ರೆ ಗತಿ ಏನು ಎಂಬಂತಾಗಿದೆ. ಹೀಗಾಗಿ ಈ ಬಗ್ಗೆ ಪರಿಹಾರಕ್ಕಾಗಿ ವಿದ್ಯಾರ್ಥಿಗಳು ಅಂಗಲಾಚಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ನಷ್ಟ ಮಾಡಲು ರಾಹುಲ್ ಗಾಂಧಿ ಅಜ್ಜಿಯಿಂದಲೇ ಆಗಿಲ್ಲ, ಇನ್ನು ಮೊಮ್ಮಗನಿಂದ ಏನಾಗುತ್ತೆ: ಈಶ್ವರಪ್ಪ ವ್ಯಂಗ್ಯ