ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು (ಮಾರ್ಚ್.3) ದೇವನಹಳ್ಳಿಗೆ ಭೇಟಿ ನೀಡಿ ಬಿಜೆಪಿಯ 4ನೇ ವಿಜಯ ಸಂಕಲ್ಪ ರಥಯಾತ್ರೆಗೆ (Vijay Sankalp Yatra) ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ನಗರದ ಕೆಲವು ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic Police) ಮಾಹಿತಿ ನೀಡಿದ್ದು, ಈ ಕೆಳಗಿನ ಮಾರ್ಗಗಳಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 9 ಗಂಟೆವರೆಗೆ ಸಂಚಾರ ವ್ಯತ್ಯಯ ಉಂಟಾಗಲಿದೆ.
ದೇವನಹಳ್ಳಿ ಹೆದ್ದಾರಿ, ಬಳ್ಳಾರಿ ರಸ್ತೆ, ಹೆಬ್ಬಾಳ ಜಂಕ್ಷನ್, ಮೇಖ್ರಿ ವೃತ್ತ, ಕಾವೇರಿ ಥೀಯಟರ್ ಜಂಕ್ಷನ್, ರಮಣ ಮಹರ್ಷಿ ರಸ್ತೆ, ರಾಜಭವನ ರಸ್ತೆ, ಇನ್ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ನೃಪತುಂಗ ರಸ್ತೆ, ಕ್ಷೀನ್ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಕೆಆರ್ ವೃತ್ತ, ಪೊಲೀಸ್ ತಿಮ್ಮಯ್ಯ, ಟ್ರಿನಿಟಿ ಜಂಕ್ಷನ್, ಹಳೆಯ ವಿಮಾನ ನಿಲ್ದಾಣ ರಸ್ತೆ, ಎಎಸ್ಸಿ ಸೆಂಟರ್, ಇಸ್ರೋ ಜಂಕ್ಷನ್ ಮತ್ತು ಎಸ್ಡಿ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗುತ್ತದೆ.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) March 2, 2023
ವಿಶೇಷ ವಿಮಾನದ ಮೂಲಕ ತಡರಾತ್ರಿ 2:30 ಕ್ಕೆ ಬೀದರ್ಗೆ ಬಂದಿರುವ ಅಮಿತ್ ಶಾ, 11:30 ಕ್ಕೆ ಗುರುನಾನಕ್ ಝೀರಾಕ್ಕೆ ಭೇಟಿ ಕೊಡುತ್ತಾರೆ. 11:40ಕ್ಕೆ ಬೀದರ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬಸವಕಲ್ಯಾಣಕ್ಕೆ ತೆರಳುವರು. ಮಧ್ಯಾಹ್ನ 12:10ಕ್ಕೆ ಬಸವಕಲ್ಯಾಣದ ಕ್ರಿಕೆಟ್ ಸ್ಟೇಡಿಯಂನಿಂದ ಅನುಭವ ಮಂಟಪಕ್ಕೆ ಹೋಗುತ್ತಾರೆ. ಮಧ್ಯಾಹ್ನ 12:30ಕ್ಕೆ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡುತ್ತಾರೆ.
ಮಧ್ಯಾಹ್ನ 12:40ಕ್ಕೆ ಅನುಭವ ಮಂಟಪಕ್ಕೆ ಭೇಟಿ ಕೊಟ್ಟು, 12:45ಕ್ಕೆ ತೇರು ಮೈದಾನಕ್ಕೆ ತೆರಳುವರು. ಮಧ್ಯಾಹ್ನ 1:15ಕ್ಕೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 3ಕ್ಕೆ ಹುಮನಾಬಾದ್ನಲ್ಲಿ ರೋಡ್ ಶೋ ನಡೆಯಲಿದೆ. ಬಳಿಕ ಬೀದರ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರಲಿದ್ದಾರೆ.
ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಲಕ್ಷಣ ಸೌದಿ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಸಾಥ್ ನೀಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:53 am, Fri, 3 March 23