Apollo Hospital Bengaluru: ಅಪೊಲೊ ಆಸ್ಪತ್ರೆಯಲ್ಲಿ ವಿಶಿಷ್ಟ ಶ್ವಾಸಕೋಶದ ಕಸಿ ಯಶಸ್ಸು

|

Updated on: Jun 07, 2023 | 12:41 PM

ಬೆಂಗಳೂರಿನ ಅಪೊಲೊ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ವಿಭಾಗವು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ 57 ವರ್ಷದ ರೋಗಿಯೊಬ್ಬರಿಗೆ ವಿಶಿಷ್ಟವಾದ ಶ್ವಾಸಕೋಶದ ಕಸಿಯನ್ನು ಯಶಸ್ವಿಯಾಗಿ ನಡೆಸಿದೆ.

Apollo Hospital Bengaluru: ಅಪೊಲೊ ಆಸ್ಪತ್ರೆಯಲ್ಲಿ ವಿಶಿಷ್ಟ ಶ್ವಾಸಕೋಶದ ಕಸಿ ಯಶಸ್ಸು
ಅಪೊಲೊ ಆಸ್ಪತ್ರೆ
Follow us on

ಬೆಂಗಳೂರು: ಬೆಂಗಳೂರಿನ ಅಪೊಲೊ ಆಸ್ಪತ್ರೆ (Apollo Hospital)ಶ್ವಾಸಕೋಶಶಾಸ್ತ್ರ ವಿಭಾಗವು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ 57 ವರ್ಷದ ರೋಗಿಯೊಬ್ಬರಿಗೆ ವಿಶಿಷ್ಟವಾದ ಶ್ವಾಸಕೋಶದ ಕಸಿಯನ್ನು ಯಶಸ್ವಿಯಾಗಿ ನಡೆಸಿದೆ. ಈ ಚಿಕಿತ್ಸೆಯಲ್ಲಿ ಕೌಶಲ್ಯ, ನಿಖರತೆ, ತಂಡದ ಕೆಲಸ ಮತ್ತು ವೈದ್ಯಕೀಯ ವೃತ್ತಿಪರತೆಯಿಂದ ಸಾಧ್ಯವಾಗಿದೆ ಎಂದು ಹೇಳಲಾಗಿದೆ.

57 ವಯಸ್ಸಿನ ಬೆಂಗಳೂರಿನ ಮೀನಾಕ್ಷಿ (ಹೆಸರು ಬದಲಾಯಿಸಲಾಗಿದೆ) ಅವರು ಉಸಿರಾಟದ ತೊಂದರೆಯಿಂದಾಗಿ ಎರಡು ವರ್ಷಗಳ ಹಿಂದೆ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಶ್ವಾಸಕೋಶದ ಗಟ್ಟಿಯಾಗುವಿಕೆಯಿಂದ ಇಂಟರ್‌ಸ್ಟಿಶಿಯಲ್ ಶ್ವಾಸಕೋಶದ ಕಾಯಿಲೆ (ಐಎಲ್‌ಡಿ) ಇದೆ ಎಂದು ಗುರುತಿಸಲಾಯಿತು. ಇದರಿಂದ ಅವರ ಸ್ಥಿತಿ ಗಂಭೀರವಾಗಿತ್ತು. ಮನೆಯಲ್ಲಿ ನಿರಂತರ ಆಮ್ಲಜನಕದ ಅವಶ್ಯಕತೆ ಕೂಡ ಇತ್ತು, ಪ್ರತಿದಿನದ ಕೆಲಸವನ್ನು ಕೂಡ ಮಾಡಲು ಕಷ್ಟವಾಗಿತ್ತು.

ಇದನ್ನೂ ಓದಿ : Kidney Transplant: ಯಾವ ಹಂತದಲ್ಲಿರುವಾಗ ಕಿಡ್ನಿ ಕಸಿ ಅಗತ್ಯ, ಮುನ್ನೆಚ್ಚರಿಕೆಗಳೇನು? ತಿಳಿಯಿರಿ

ಅವರ ಸ್ಥಿತಿಯ ತೀವ್ರತೆಯನ್ನು ಗುರುತಿಸಿ, ಅಪೋಲೋ ಆಸ್ಪತ್ರೆಯ ವೈದ್ಯಕೀಯ ತಂಡವು ಶ್ವಾಸಕೋಶದ ಕಸಿ ವಿಷಯದ ಕುರಿತು ವಿವರಿಸಿದರು, ಇದರ ಜತೆಗೆ ಶ್ವಾಸಕೋಶ ದಾನಿಗಳು ಕೂಡ ತುಂಬಾ ಸಹಾಯ ಮಾಡಿದ್ದರು ಎಂದು ಹೇಳಲಾಗಿತ್ತು. ಕಸಿ ಮಾಡುವ ಮೌಲ್ಯಮಾಪನ ಮತ್ತು ಮೂವತ್ತಾರು ಗಂಟೆಗಳ ಚಿಕಿತ್ಸೆಯ ನಂತರ ಶ್ವಾಸಕೋಶದ ಕಸಿಯು ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

ಶ್ವಾಸಕೋಶದ ಕಸಿಗಾಗಿ ಪಲ್ಮನಾಲಜಿ ತಂಡದ ನೇತೃತ್ವ ವಹಿಸಿದ್ದ ಅಪೊಲೊ ಆಸ್ಪತ್ರೆಗಳ ಪಲ್ಮನಾಲಜಿ ಮತ್ತು ಇಂಟರ್ವೆನ್ಷನಲ್ ಹಿರಿಯ ಸಲಹೆಗಾರ ಡಾ ರವೀಂದ್ರ ಮೆಹ್ತಾ ಅವರು ಹೇಳಿರುವಂತೆ ರೋಗಿಯು ಪೂರ್ವ-ವಿಧಾನ ಪರೀಕ್ಷೆಗಳಿಗೆ ಒಳಗಾಗಿದ್ದರು, ಇವರಿಗೆ ದಾನಿಗಳ ಶ್ವಾಸಕೋಶ ಹೊಂದಾಣಿಕೆ ಆಗುತ್ತದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕಿತ್ತು. ನಂತರ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಶ್ವಾಸಕೋಶಶಾಸ್ತ್ರಜ್ಞರು, ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು ಮತ್ತು ಕ್ರಿಟಿಕಲ್ ಕೇರ್ ವೈದ್ಯರ ಸಮರ್ಪಿತ ತಂಡವು ಒಟ್ಟುಗೂಡಿತು ಮತ್ತು ಶಸ್ತ್ರಚಿಕಿತ್ಸಕರು ಸಂಕೀರ್ಣ ಕಾರ್ಯವಿಧಾನವನ್ನು ನಡೆಸಿದ್ದಾರೆ. ಇದೀಗ ಮೀನಾಕ್ಷಿ ಅವರು ಉತ್ತಮ ಜೀವನ ನಡೆಸಬಹುದು ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Wed, 7 June 23