Urban Revamp Design Challenge 2023: ನಗರ ಪುನರುಜ್ಜೀವನ ವಿನ್ಯಾಸ ಸವಾಲು, ಪ್ರಸ್ತಾವನೆಗೆ ಆಹ್ವಾನ

|

Updated on: May 17, 2023 | 8:16 PM

ನಗರದ ಸಾರ್ವಜನಿಕ ಸ್ಥಳಗಲನ್ನು ಪರಿವರ್ತಿಸಲು ನಗರ ಪುನರುಜ್ಜೀವನ ವಿನ್ಯಾಸ ಚಾಲೆಂಜ್​​ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಆ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸುಂದರವಾಗಿ ಪರಿವರ್ತಿಸಲು ಪ್ರಸ್ತಾವನೆ ಆಹ್ವಾನಿಸಲಾಗಿದೆ.

Urban Revamp Design Challenge 2023: ನಗರ ಪುನರುಜ್ಜೀವನ ವಿನ್ಯಾಸ ಸವಾಲು, ಪ್ರಸ್ತಾವನೆಗೆ ಆಹ್ವಾನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನಗರದ ಸಾರ್ವಜನಿಕ ಸ್ಥಳಗಳನ್ನು ಪರಿವರ್ತಿಸಲು ನಗರ ಪುನರುಜ್ಜೀವನ ವಿನ್ಯಾಸ ಚಾಲೆಂಜ್​ 2023 (Urban Revamp Design Challenge 2023) ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಆ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸುಂದರವಾಗಿ ಪರಿವರ್ತಿಸಲು ಪ್ರಸ್ತಾವನೆ ಆಹ್ವಾನಿಸಲಾಗಿದೆ. ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಡಿಸೈನರ್ಸ್ ಇಂಡಿಯಾ,  ಕ್ಯೂರಿಯಾಸಿಟಿ ಅಲೈಯನ್ಸ್ ಫೌಂಡೇಶನ್ ಮತ್ತು ಕಸ್ತೂರಿ ನಗರ ನಿವಾಸಿಗಳ ಕಲ್ಯಾಣ ಸಂಘ ಮತ್ತು ಸೆನ್ಸಿಂಗ್ ಲೋಕಲ್ ಅಂಡ್ ಯಂಗ್ ಲೀಡರ್ಸ್ ಫಾರ್ ಆಕ್ಟಿವ್ ಸಿಟಿಜನ್ಶಿಪ್​​ ಸಹಭಾಗಿತ್ವದಲ್ಲಿ ಬೆಂಗಳೂರಿನ ಎರಡು ಸಾರ್ವಜನಿಕ ಸ್ಥಳಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ವಿನ್ಯಾಸಕರಿಗೆ ಪ್ರಸ್ತಾಪಗಳನ್ನು ಆಹ್ವಾನಿಸಿದೆ.

ಪುನರುಜ್ಜೀವನ ವಿನ್ಯಾಸ ಚಾಲೆಂಜ್​ಗೆ ಬೆಂಗಳೂರಿನ ಬೆನ್ನಿಗಾನಹಳ್ಳಿ ಮೇಲ್ಸೇತುವೆ ಮತ್ತು ಪಾದರಾಯನಪುರ ನಗರಳನ್ನು ಆಯ್ಕೆ ಮಾಡಲಾಗಿದೆ. ಹೆಚ್ಚಿನ ಜನ ಸಾಂದ್ರತೆ, ವೈವಿಧ್ಯಮಯ ಬಳಕೆದಾರ ಗುಂಪುಗಳು, ಪರಿಸರ ಹೀಗೆ ಇತ್ಯಾದಿ ಮಾನದಂಡಗಳ ಆಧಾರದ ಮೇಲೆ ಇವೆರಡು ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಕಾಯಕವೇ ಕೈಲಾಸ! ಬೆಂಗಳೂರು ಟ್ರಾಫಿಕ್​ನಲ್ಲಿ ಸ್ಕೂಟಿಯಲ್ಲೇ ಕುಳಿತು ಕೆಲಸ ಮಾಡಿದ ಮಹಿಳೆ: ಫೋಟೋ ವೈರಲ್

ಸಾರ್ವಜನಿಕ ಸ್ಥಳಗಳ ಮರುವಿನ್ಯಾಸ ಮತ್ತು ನವೀಕರಣದ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲಾಗುತ್ತಿದೆ. ಸೆನ್ಸಿಂಗ್ ಲೋಕಲ್​​​ ಸಂಸ್ಥೆಯ ಸಹ-ಸಂಸ್ಥಾಪಕ ಸೋಬಿಯಾ ಮಾತನಾಡಿ, ನಮ್ಮ ನಗರದಲ್ಲಿ ಪಾದಚಾರಿ ಮಾರ್ಗಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗಿದೆ. ಹಾಗಾಗಿ ಸಾರ್ವಜನಿಕ ಸ್ಥಳಗಳ ಮರು ವಿನ್ಯಾಸದ ಬಗ್ಗೆ ಗಮನ ಹರಿಸಿಲ್ಲ ಎಂದರು.

ಪಾದಚಾರ ಮಾರ್ಗಗಳು, ಸುರಕ್ಷಿತ ಜಂಕ್ಷನ್​ಗಳು, ಆಟದ ಮೈದಾನ ಮುಂತಾದವುಗಳನ್ನು ಪಡೆಯಲು ನಿವಾಸಿಗಳು ವರ್ಷಗಳಿಂದ ಹೋರಾಟ ಮಾಡಿದ್ದನ್ನು ನಾವು ನೋಡಿದ್ದೇವೆ. ಆದರೆ ಸಾರ್ವಜನಿಕ ಸ್ಥಳಗಳ ಮರು ವಿನ್ಯಾಸ ಮಾಡಿರುವುದು ಬಹಳ ವಿರಳ ಎಂದು ಹೇಳಿದರು.

ಇದನ್ನೂ ಓದಿ: ಟಿಇಟಿ ಪಾಸ್ ಮಾಡದ ಹೊರಗುತ್ತಿಗೆ ಶಿಕ್ಷಕರಿಗೆ ಗೇಟ್ ಪಾಸ್; ಬಿಬಿಎಂಪಿ ನಿರ್ಧಾರಕ್ಕೆ ಶಿಕ್ಷಕರು ಕಂಗಾಲು

ನಗರ ಪುನರುಜ್ಜೀವನ ಸವಾಲು ಒಂದು ವಿಶಿಷ್ಟ ಉಪಕ್ರಮವಾಗಿದ್ದು, ವಿನ್ಯಾಸ ಪ್ರಕ್ರಿಯೆಯಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಸ್ಥಳದ ಬಳಕೆದಾರರನ್ನು ಒಳಗೊಳ್ಳುವ ಮೂಲಕ ಅಂತರ್ಗತ ನಗರ ವಿನ್ಯಾಸ ಮತ್ತು ಯೋಜನೆಯನ್ನು ಉತ್ತೇಜಿಸುವುದಾಗಿದೆ.

ನಗರ ಪುನರುಜ್ಜೀವನ ಸವಾಲಿಗೆ ನೋಂದಣಿ ಮಾಡಿಕೊಳ್ಳಲು ಮೇ 26, 2023 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಸ್ಪರ್ಧೆಗೆ ನೋಂದಾಯಿಸಲು, www.urbanrevamp.in ಭೇಟಿ ನೀಡಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.