ಬೆಂಗಳೂರು: ಮೆಟ್ರೋ (Metro) ಸುರಂಗ (Tunnel) ಕೊರೆದು ಸುಮಾರು 13 ತಿಂಗಳ ನಂತರ ಊರ್ಜಾ ಯಂತ್ರ (Urja Machine) ಹೊರಬಂದಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದೆ. 855 ಮೀಟರ್ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, 2020ರ ಆಗಸ್ಟ್ನಲ್ಲಿ ಊರ್ಜಾ ಯಂತ್ರ ಸುರಂಗ ಪ್ರವೇಶಿಸಿತ್ತು. 13 ತಿಂಗಳ ಬಳಿಕ ಇಂದು (ಸೆ.22) ಊರ್ಜಾ ಯಂತ್ರ ಹೊರಬಂದಿದೆ. ಯಂತ್ರ ಹೊರಬರುವ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದು, ಊರ್ಜಾ ಬ್ರೇಕ್ ಥ್ರೂ ವೀಕ್ಷಿಸಿದ್ದಾರೆ.
ಉರ್ಜಾ ಯಂತ್ರ ಕಂಟೋನ್ಮೆಂಟ್ನಿಂದ ಶಿವಾಜಿನಗರ ಮಾರ್ಗವಾಗಿ ಸುರಂಗ ಕೊರೆದಿದೆ. 855 ಮೀಟರ್ ಸುರಂಗ ಕೊರೆದು ಟಿಬಿಎಂ ಹೊರ ಬಂದಿದೆ. ಎರಡನೇ ಹಂತದಲ್ಲಿ ಒಟ್ಟು 9 ಟಿಬಿಎಂ ಮಿಷನ್ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಸುರಂಗ ಮಾರ್ಗ ಕೆಲಸ ಪೂರ್ಣಗೊಳಿಸಿ ಮೊದಲ ಟಿಬಿಎಂ ಉರ್ಜಾ ಹೊರಬಂದಿದೆ.
ಶಿವಾಜಿನಗರ ಭಾಗದಲ್ಲಿ ಭೂಮಿಯೊಳಗೆ ಸುರಂಗ ಮಾರ್ಗ ಕೊರೆಯುವುದು ದೊಡ್ಡ ಸವಾಲಾಗಿತ್ತು. ಸಡಿಲ ಮಣ್ಣು ಹಾಗೂ ಸಾಕಷ್ಟು ಬೋರ್ವೆಲ್ಗಳು ಸಿಕ್ಕಿದ್ದವು. ಇದನ್ನೆಲ್ಲಾ ಬೇಧಿಸಿ ಊರ್ಜಾ ಯಶಸ್ವಿಯಾಗಿ ತನ್ನ ಕೆಲಸ ಮುಗಿಸಿ ಸುರಂಗ ಮಾರ್ಗದಿಂದ ಹೊರಬಂದಿದೆ. ಈ ಮಹತ್ವದ ಕ್ಷಣಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸಾಕ್ಷಿಯಾಗಿದ್ದಾರೆ. ಮೆಟ್ರೋ ಫೇಸ್ 2 ನಲ್ಲಿ, ಗೊಟ್ಟಿಗೆರೆಯಿಂದ ನಾಗಾವರವರೆಗೆ 21 ಕಿ.ಮೀ ಉದ್ದ ಮೆಟ್ರೋ ಕಾಮಗಾರಿ ನಡೆಯುತ್ತಿದೆ.
ಇದರಲ್ಲಿ ಸುಮಾರು 13 ಕಿ.ಮೀ ನಷ್ಟು ಸುರಂಗ ಮಾರ್ಗ ಕಾಮಗಾರಿ ಮಾಡಲಾಗುತ್ತಿದೆ. ಇದಕ್ಕಾಗಿ 9 ಟಿಬಿಮ್ (ಟನಲ್ ಬೋರಿಂಗ್ ಮಿಷನ್)ಗಳು ಕೆಲಸ ನಿರ್ವಹಿಸುತ್ತಿವೆ. ಈ 9 ಮಿಷನ್ಗಳ ಪೈಕಿ ಊರ್ಜಾ ಸುರಂಗ ಮಾರ್ಗ ಕೆಲಸ ಮುಗಿಸಿ ಹೊರ ಬರುತ್ತಿರುವ ಮೊದಲ ಯಂತ್ರವಾಗಿದೆ.
ಇದನ್ನೂ ಓದಿ
ದೇವನಹಳ್ಳಿ: ಬಿಎಸ್ಎಫ್ ಕ್ಯಾಂಪ್ನಲ್ಲಿ ಕೊರೊನಾ ರಣಕೇಕೆ; ಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ, ಓರ್ವ ಗಂಭೀರ
(Urja machine came out 13 months after the Metro Tunnel was drilled At shivajinagar)
Published On - 10:55 am, Wed, 22 September 21