
ಬೆಂಗಳೂರು, ಅ.14: ಭಾರತದ ವಿಚಾರಗಳು ಹಾಗೂ ಸಂಸ್ಕೃತಿ, (American entrepreneur )ಮಾನವಿಯ ಮೌಲ್ಯಗಳ ಬಗ್ಗೆ ವಿದೇಶಿಗರು ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಭಾರತದ್ದು ಅತಿಥಿ ದೇವೋ ಭವ ಸಂಸ್ಕೃತಿ, ಭಾರತದಲ್ಲಿ ವಿದೇಶಿಗರಿಗೆ ವಿಭಿನ್ನವಾದ ಗೌರವವನ್ನು ನೀಡಲಾಗುತ್ತದೆ. ವಿದೇಶಿಗರಿಗೂ ಅಷ್ಟೇ ಭಾರತದ ಸಂಸ್ಕೃತಿ, ಇಲ್ಲಿನ ವಿಚಾರಧಾರೆಗಳು ತುಂಬಾ ಇಷ್ಟಪಡುತ್ತಾರೆ. ಇದೀಗ ಅಮೆರಿಕ ವ್ಯಕ್ತಿಯೊಬ್ಬರು ತನ್ನ ಉದ್ಯಮಗಾಗಿ ಭಾರತಕ್ಕೆ ಅಂದರೆ ಕರ್ನಾಟಕಕ್ಕೆ ಬಂದಿದ್ದಾರೆ. ಇದೀಗ ಅವರಿಗೆ ಭಾರತ ಸರ್ಕಾರ ವೀಸಾ ನೀಡಿ, 5 ವರ್ಷಗಳ ಕಾಲ ಭಾರತದಲ್ಲಿ ಇರಲು ಅವಕಾಶ ನೀಡಿದೆ. ಈ ಖುಷಿಯ ವಿಚಾರವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಇದರ ಜತೆಗೆ ತಮ್ಮ ಕರ್ನಾಟಕದ ಸ್ನೇಹಿತೆಯನ್ನು ಪರಿಚಯ ಮಾಡಿದ್ದಾರೆ.
ಅಮೆರಿಕದ ಟೋನಿ ಕ್ಲೋರ್ ಎಂಬ ಉದ್ಯಮಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈ ವಿಚಾರವನ್ನು ಎಕ್ಸ್ನಲ್ಲಿ ತಮ್ಮ ಗೆಳತಿಗೆ ಚುಂಬಿಸುವ ಫೋಟೋವನ್ನು ಹಾಕಿಕೊಂಡು ಹೇಳಿಕೊಂಡಿದ್ದಾರೆ. ಇನ್ನು ಈ ಪೋಸ್ಟ್ನಲ್ಲಿ ಪ್ರಧಾನಿ ಮೋದಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಟೋನಿ ಕ್ಲೋರ್ ಅವರನ್ನು ಈ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ವಿಶೇಷ ಸಂದರ್ಶನವನ್ನು ಮಾಡಿತ್ತು. ಐದು ವರ್ಷಗಳ ಭಾರತೀಯ ವೀಸಾವನ್ನು ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಟೋನಿ ಕ್ಲೋರ್, ಭಾರತದ ಸ್ವಾಗತಾರ್ಹ ರೀತಿಯನ್ನು ಅಮೆರಿಕದ ನಿರ್ಬಂಧಿತ ವಿಧಾನಕ್ಕೆ ಹೋಲಿಸಿದ್ದಾರೆ. ಅಂದರೆ, ಭಾರತ ಎಲ್ಲರನ್ನೂ ಸ್ವಾಗತಿಸುತ್ತದೆ. ಆದರೆ ಅಮೆರಿಕ ವಲಸಿಗರನ್ನು ಓಡಿಸುವ ಪ್ರವೃತ್ತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಭಾರತವು ವಿದೇಶಿ ಬ್ಲಾಕ್‌ಚೈನ್ ಮತ್ತು AI ಬಿಲ್ಡರ್ಗಳನ್ನು ಸ್ವಾಗತಿಸುತ್ತಿದೆ. ಈ ಕಾರಣಕ್ಕೆ ನನಗೆ 5 ವರ್ಷಗಳ ವೀಸಾ ನೀಡಿದೆ ಎಂದು ಹೇಳಿದ್ದಾರೆ.
How it started ➡️ How it’s going
Only possible thanks to Modi Ji 🇮🇳🪷🙏 https://t.co/BkOb1vrrVg pic.twitter.com/DfFx2FxlBU— Tony Klor (@TonyCatoff) October 12, 2025
ಭಾರತ ವಿದೇಶಿಗರಿಗೂ ಅವಕಾಶವನ್ನು ನೀಡುತ್ತಿದೆ. ಈ ಮೂಲಕ ತನ್ನ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಟ್ರಂಪ್ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಮೆರಿಕ ವಿದೇಶಿಗರಿಗೆ ಕಿಕ್ ರಾಕ್ ಮಾಡುತ್ತಿದೆ. ಆದರೆ ಭಾರತ ಸ್ವಾಗತ ಭಾಯ್ ಎಂದು ಹೇಳುತ್ತಿದೆ. ಈ ಮೂಲಕ ಟ್ರಂಪ್ ವಿಧಾನಕ್ಕೂ ಹಾಗೂ ಭಾರತ ಪ್ರಧಾನಿ ಮೋದಿಯ ನೀತಿಗೂ ಇರುವ ವ್ಯತ್ಯಾಸವನ್ನು ತಿಳಿಸಿದ್ದಾರೆ. ಎಕ್ಸ್ನಲ್ಲಿ ಟೋನಿ ಕ್ಲೋರ್ ತಮ್ಮ ವೀಸಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ B-1 ವೀಸಾವನ್ನು ಸೆಪ್ಟೆಂಬರ್ 23, 2025 ರಂದು ನೀಡಲಾಯಿತು ಮತ್ತು ಸೆಪ್ಟೆಂಬರ್ 22, 2030 ರವರೆಗೆ ಮಾನ್ಯವಾಗಿರುತ್ತದೆ. B-1 ವೀಸಾವು ಸಾಮಾನ್ಯವಾಗಿ ಸಭೆಗಳು, ಭೇಟಿ, ವಾಣಿಜ್ಯ ಅವಕಾಶಗಳ ಉದ್ದೇಶಗಳಿಗಾಗಿ ನೀಡಲಾಗುತ್ತದೆ.
ಇದನ್ನೂ ಓದಿ: ಅಬ್ಬಬ್ಬಾ, ಬೆಂಗಳೂರಿನಲ್ಲಿ ಮನೆ ಕೆಲಸದವರಿಗೆ ತಿಂಗಳಿಗೆ 45 ಸಾವಿರ ರೂ. ವೇತನ ನೀಡುವ ರಷ್ಯಾದ ಮಹಿಳೆ
ಭಾರತೀಯ ರಾಯಭಾರ ಕಚೇರಿಗಳ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, B-1 ವೀಸಾ ಭಾರತದಲ್ಲಿ ವ್ಯಾಪಾರ ಉದ್ಯಮಗಳನ್ನು ಸ್ಥಾಪಿಸಲು ಬಯಸುವ ವಿದೇಶಿಯರಿಗೆ ಇದನ್ನು ನೀಡಲಾಗುತ್ತದೆ. ಕೈಗಾರಿಕಾ ಅಥವಾ ವ್ಯಾಪಾರ ಉದ್ಯಮವನ್ನು ಸ್ಥಾಪಿಸಲು, ಇದು ಕೈಗಾರಿಕಾ, ವಾಣಿಜ್ಯ ಅಥವಾ ಗ್ರಾಹಕ ವಸ್ತುಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಭಾರತಕ್ಕೆ ಭೇಟಿ ನೀಡಲು” ಅನುಮತಿಸುತ್ತದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ