ಬೆಂಗಳೂರು, ಸೆಪ್ಟೆಂಬರ್ 14: ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲೇ ಒಟ್ಟು 13,000 ಸಿಬ್ಬಂದಿ ನೇಮಕ ಮಾಡುತ್ತೇವೆ ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ. ಬಿಜೆಪಿ ಶಾಸಕ S.T.ಸೋಮಶೇಖರ್ ನೇತೃತ್ವದಲ್ಲಿ ಯಶವಂತಪುರ ಕ್ಷೇತ್ರದ ಕೆಂಗೇರಿ ಉಪನಗರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ಆಲಿಸಿದ್ದಾರೆ. ನಗರದಲ್ಲಿ ಬಸ್ ಸಮಸ್ಯೆ, ಟಿಟಿಎಂಸಿಯಲ್ಲಿ ಇರಬೇಕಾದ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.
ಖಾಸಗಿ ಬಸ್ಗಳಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ವಿಚಾರವಾಗಿ ಮಾತನಾಡಿ, ಹೆಚ್ಚಿನ ದರ ತೆಗೆದುಕೊಳ್ಳುತ್ತಿದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದೇವೆ. ಗೌರಿ ಗಣೇಶ ಹಬ್ಬಕ್ಕೆ ಹೆಚ್ಚುವರಿ ಬಸ್ಗಳನ್ನು ಬಿಡಲು ನಿರ್ಧರಿಸಿದ್ದೇವೆ. ಶಾಸಕ ಎಸ್.ಟಿ.ಸೋಮಶೇಖರ್ ಜತೆ ರಾಜಕೀಯ ಚರ್ಚೆ ಮಾಡಿಲ್ಲ. ಸೋಮಶೇಖರ್ ಮರುಸೇರ್ಪಡೆ ಆಗುತ್ತೇನೆ ಅಂದರೆ ಯೋಚಿಸೋಣ ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದ್ದು, ಭಾರತೀಯ ಜನತಾ ಪಕ್ಷದಲ್ಲೇ ಇದ್ದೇನೆ, ನಾನು ಸೈಲೆಂಟ್ ಆಗಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಯೋಚನೆ ಇಲ್ಲ. ರಾಮಲಿಂಗಾರೆಡ್ಡಿ ಜತೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದರು.
ಇದನ್ನೂ ಓದಿ: ದೆಹಲಿಯಿಂದ ಬೆಂಗಳೂರಿಗೆ ಯಡಿಯೂರಪ್ಪ ವಾಪಸ್: ಜೆಡಿಎಸ್ನೊಂದಿಗೆ ಮೈತ್ರಿ ಬಗ್ಗೆ ಹೇಳಿದ್ದಿಷ್ಟು
ಬಸ್ ನಿಲ್ದಾಣಗಳ ಸಮಸ್ಯೆ ಬಗ್ಗೆ ಹೇಳಲು ಸಚಿವರನ್ನು ಕರೆಸಿದ್ದೆವು. ಸಾರಿಗೆ ಸಚಿವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಜನವರಿಗೆ ಕೆಂಗೇರಿ ಟಿಟಿಎಂಸಿ ಉದ್ಘಾಟನೆ ಮಾಡೋಣ ಎಂದಿದ್ದಾರೆ ಎಂದರು.
ಪಕ್ಷದ ಕಾರ್ಯಕ್ರದಲ್ಲಿ ಸೋಮಶೇಖರ್ ಕಾಣಿಸಿಕೊಳ್ಳದ ವಿಚಾರವಾಗಿ ಮಾತನಾಡಿದ ಅವರು, ವೈಯಕ್ತಿಕ ಕಾರಣದಿಂದ ಪಕ್ಷದ ಕಾರ್ಯಕ್ರಮಗಳಿಗೆ ಗೈರಾಗಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:33 pm, Thu, 14 September 23