ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಸರ್ಕಾರ ಕ್ರಮ; ಸಚಿವ ಪ್ರಿಯಾಂಕ್ ಖರ್ಗೆ
ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಚಾರಗಳು ಸತ್ಯ ಅಥವಾ ಸುಳ್ಳು ಎಂಬುದಷ್ಟೇ ನಾವು ಹೇಳಲು ಹೊರಟಿದ್ದೇವೆ. ಯಾವುದೇ ಹೊಸ ಕಾನೂನು, ಅಥವಾ ಮಸೂದೆ ತರಲು ಹೊರಟಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಬೆಂಗಳೂರು, ಸೆ.14: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಹೇಳಿದರು. ಇಂದು (ಸೆ.14) ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಇರುವ ಕಾನೂನಿನಡಿಯಲ್ಲೇ ದಳವೊಂದನ್ನು ರಚಿಸಿ, ಅದಕ್ಕೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ, ಆ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ನಾವು ಸಾಮಾಜಿಕ ಜಾಲತಾಣ (Social Media)ಗಳಲ್ಲಿ ಬರುವ ವಿಚಾರಗಳು ಸತ್ಯ ಅಥವಾ ಸುಳ್ಳು ಎಂಬುದಷ್ಟೇ ನಾವು ಹೇಳಲು ಹೊರಟಿದ್ದೇವೆ. ಯಾವುದೇ ಹೊಸ ಕಾನೂನು, ಅಥವಾ ಮಸೂದೆ ತರಲು ಹೊರಟಿಲ್ಲ ಎಂದು ಹೇಳಿದರು.
ಪ್ರಧಾನ ಮಂತ್ರಿಗಳೇ ಒಂದು ಟ್ವೀಟ್ ಮಾಡಿದ್ದಾರೆ. ‘ಸುಳ್ಳು ಸುದ್ದಿಗಳ ಸತ್ಯಾನ್ವೇಷಣೆ ಕಡ್ಡಾಯ ಎಂದು. ಇದು ಪ್ರಧಾನ ಮಂತ್ರಿಗಳ ಕಛೇರಿ ಟ್ವೀಟ್. ಚೀಫ್ ಜಸ್ಟೀಸ್ ಆಫ್ ಇಂಡಿಯಾ ಚಂದ್ರಚೂಡ್ ಅವರ ಅಭಿಪ್ರಾಯ ಕೂಡ ಹೌದು, ಸುಳ್ಳು ಸುದ್ದಿಯಿಂದ ಜನ ದಿಕ್ಕುತಪ್ಪಿದ್ರೆ, ಪ್ರಜಾಪ್ರಭುತ್ವದ ಉಳಿವಿಗೆ ಮಾರಕ ಎಂಬ ಮಾತನ್ನು ಹೇಳಿದ್ದಾರೆ. ಇನ್ನು ಇಂಡಿಯಾ ಟುಡೇ ಸರ್ವೆ ಪ್ರಕಾರ 78% ರಷ್ಟು ಜನ ಸುಳ್ಳು ಸುದ್ದಿಗಳಿಂದ ಕೋಮು ಭಾವನೆಗಳಿಗೆ ಒಳಗಾಗ್ತಾ ಇದ್ದಾರೆ ಎಂದು ಹೇಳಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Thu, 14 September 23