ಜೆಡಿಎಸ್ ಜೊತೆ ಮೈತ್ರಿ ಬೆಳೆಸಲು ಯಡಿಯೂರಪ್ಪ ಅದ್ಯಾವ ನೈತಿಕತೆಯೊಂದಿಗೆ ಮುಂದಾಗಿದ್ದಾರೋ? ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಹಿರಿಯ ನಾಯಕರಾದ ಆರ್ ಅಶೋಕ್ ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ ವಿರೋಧ ಪಕ್ಷದ ನಾಯಕನ ಸ್ಥಾನ ಗಿಟ್ಟಿಸಲು ಸುಖಾಸುಮ್ಮನೆ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಗಂಟಲು ಹರಿದುಕೊಳ್ಳುತ್ತಿದ್ದಾರೆ. ಆದರೆ ಅವರೇನೇ ಮಾಡಿದರೂ ಆ ಸ್ಥಾನ ಸಿಗಲ್ಲ ಎಂದು ಲಕ್ಷ್ಮಣ್ ಹೇಳಿದರು.

|

Updated on: Sep 14, 2023 | 4:25 PM

ಬೆಂಗಳೂರು: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman) ಇಂದು ಮೈಸೂರು ಬದಲು ಬೆಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿದರು. ಬಿಎಸ್ ಯಡಿಯೂರಪ್ಪನವರು (BS Yediyurappa) ಹಿಂದೊಮ್ಮೆ ವಿಧಾನ ಸಭಾ ಆಧಿವೇಶನ ನಡೆಯುತ್ತಿದ್ದಾಗ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರನ್ನು (HD Kumaraswamy) ಹಿಗ್ಗಾಮುಗ್ಗಾ ಟೀಕಿಸಿದ ಆಡಿಯೋವನ್ನು ತಮ್ಮ ಮೊಬೈಲ್ ಮೂಲಕ ಪತ್ರಕರ್ತರಿಗೆ ಕೇಳಿಸಿ ಅದ್ಯಾವ ನೈತಿಕತೆಯಿಂದ ಜೆಡಿಎಸ್ ಜೊತೆ ಮೈತ್ರಿ ಬೆಳೆಸಲು ಮುಂದಾಗಿದ್ದರೋ ಅಂತ ಗೇಲಿ ಮಾಡಿದರು. ಇದುವರೆಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನು ಅಯ್ಕೆಮಾಡಲಾದ ಬಿಜೆಪಿ ಯೋಗ್ಯತೆ ಪ್ರಶ್ನಿಸಿದ ಲಕ್ಷ್ಮಣ್ ಆ ಸ್ಥಾನದಲ್ಲಿ ಕುಮಾರಸ್ವಾಮಿಯನ್ನು ಕೂರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಹಿರಿಯ ನಾಯಕರಾದ ಆರ್ ಅಶೋಕ್ ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ ವಿರೋಧ ಪಕ್ಷದ ನಾಯಕನ ಸ್ಥಾನ ಗಿಟ್ಟಿಸಲು ಸುಖಾಸುಮ್ಮನೆ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಗಂಟಲು ಹರಿದುಕೊಳ್ಳುತ್ತಿದ್ದಾರೆ. ಆದರೆ ಅವರೇನೇ ಮಾಡಿದರೂ ಆ ಸ್ಥಾನ ಸಿಗಲ್ಲ ಎಂದು ಲಕ್ಷ್ಮಣ್ ಹೇಳಿದರು. ಲೋಕ ಸಭಾ ಚುನಾವಣೆ ಮುಗಿಯುವವರೆಗೆ ನಳಿನ್ ಕುಮಾರ್ ಕಟೀಲ್ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಸುವಂತೆ ಯಡಿಯೂರಪ್ಪನವರ ಮೂಲಕ ಬಿಜೆಪಿ ವರಿಷ್ಠರಿಗೆ ವಿನಂತಿಸಿಕೊಳ್ಳುತ್ತೇನೆ ಅಂತ ಲಕ್ಷ್ಮಣ್ ವ್ಯಂಗ್ಯವಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್