ಟೈಗರ್ ಪ್ರಭಾಕರ್ ರೀತಿ ಡೈಲಾಗ್ ಹೊಡೆದ ‘ಫೈಟರ್’ ವಿನೋದ್; ಇಲ್ಲಿದೆ ವಿಡಿಯೋ
ಖ್ಯಾತ ನಟ ಟೈಗರ್ ಪ್ರಭಾಕರ್ ಅವರು ಡೈಲಾಗ್ ಹೇಳುತ್ತಿದ್ದ ಶೈಲಿಯೇ ಭಿನ್ನ. ಸಖತ್ ಖಡಕ್ ಆಗಿತ್ತು ಅವರ ಧ್ವನಿ. ಅದೇ ರೀತಿಯಲ್ಲಿ ವಿನೋದ್ ಪ್ರಭಾಕರ್ ಅವರು ಡೈಲಾಗ್ ಹೊಡೆದಿದ್ದಾರೆ. ಇದು ನಡೆದಿದ್ದು ‘ಫೈಟರ್’ ಸಿನಿಮಾದ ಹೊಸ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ‘ಫೈಟರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಿದೆ. ಈ ಹಾಡಿಗೆ ಗುರು ಕಿರಣ್ ಸಂಗೀತ ನೀಡಿದ್ದು, ಕವಿರಾಜ್ ಅವರು ಸಾಹಿತ್ಯ ಬರೆದಿದ್ದಾರೆ. ಸಾಂಗ್ ರಿಲೀಸ್ ವೇದಿಕೆಯಲ್ಲಿ ವಿನೋದ್ ಅವರು ತಂದೆ ಟೈಗರ್ ಪ್ರಭಾಕರ್ (Tiger Prabhakar) ಅವರನ್ನು ನೆನಪು ಮಾಡಿಕೊಂಡರು. ತಂದೆಯ ರೀತಿಯೇ ತಮ್ಮ ಸಿನಿಮಾ ಡೈಲಾಗ್ ಹೊಡೆದರು. ಅದನ್ನು ಕೇಳಿ ಅಭಿಮಾನಿಗಳು ಎಂಜಾಯ್ ಮಾಡಿದರು. ‘ಫೈಟರ್’ (Fighter Movie) ಸಿನಿಮಾಗೆ ನೂತನ್ ಉಮೇಶ್ ಅವರು ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos