ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೇನೆ, ಕಾಂಗ್ರೆಸ್ ಸೇರುವ ವದಂತಿ ಸುಳ್ಳು: ಎಸ್ ಟಿ ಸೋಮಶೇಖರ್, ಶಾಸಕ
ಇಲ್ಲಿನ ಸಮಸ್ಯೆಗಳನ್ನು ತಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು ಹಂತ ಹಂತವಾಗಿ ಎಲ್ಲ ಎಲ್ಲವನ್ನು ಜನೆವರಿಯೊಳಗೆ ಪರಿಹರಿಸುವುದಾಗಿ ಹೇಳಿದ್ದಾರೆ ಎಂದು ಸೋಮಶೇಖರ್ ಹೇಳಿದರು. ಬಿಜೆಪಿಗೆ ಬೈ ಹೇಳಿ ಕಾಂಗ್ರೆಸ್ ವಾಪಸ್ಸಾಗುವ ಬಗ್ಗೆ ಯೋಚನೆಯೇ ಮಾಡಿಲ್ಲ, ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಳುತ್ತಿರುವುದಾಗಿ ಸೋಮಶೇಖರ್ ಹೇಳಿದರು.
ಬೆಂಗಳೂರು: ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekar) ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ವದಂತಿಯನ್ನು ಅಲ್ಲಗಳೆದರು. ಅವರ ಕ್ಷೇತ್ರದ ಕೆಂಗೇರಿ ಉಪನಗರದಲ್ಲಿ (Kengeri Satellite Town) ಅವರು ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರೊಂದಿಗೆ ಕಾಣಿಸಿಕೊಂಡಾಗ ಮಾಧ್ಯಮ ಪ್ರತಿನಿಧಿಗಳಲ್ಲಿ ಸಹಜವಾಗೇ ಅಂಥ ಪ್ರಶ್ನೆ ಮರುಕಳಿಸಿತ್ತು. ಕೆಂಗೇರಿ ಉಪನಗರದಲ್ಲಿ ಬಸ್ ಗಳ ಓಡಾಟ ಮತ್ತು ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿದ್ದು ಸ್ಥಳೀಯರು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ದಿನಗಳಿಂದ ಪೋಸ್ಟ್ ಮಾಡುತ್ತಿದ್ದರು. ಅವನ್ನೆಲ್ಲ ಸಾರಿಗೆ ಸಚಿವರ ಗಮನಕ್ಕೆ ತಂದಾಗ ಅವರು ಖುದ್ದಾಗಿ ಪರಿಶೀಲಿಸುವುದಾಗಿ ಹೇಳಿ ಇವತ್ತು ಆಗಮಿಸಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ತಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು ಹಂತ ಹಂತವಾಗಿ ಎಲ್ಲ ಎಲ್ಲವನ್ನು ಜನೆವರಿಯೊಳಗೆ ಪರಿಹರಿಸುವುದಾಗಿ ಹೇಳಿದ್ದಾರೆ ಎಂದು ಸೋಮಶೇಖರ್ ಹೇಳಿದರು. ಬಿಜೆಪಿಗೆ ಬೈ ಹೇಳಿ ಕಾಂಗ್ರೆಸ್ ವಾಪಸ್ಸಾಗುವ ಬಗ್ಗೆ ಯೋಚನೆಯೇ ಮಾಡಿಲ್ಲ, ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಳುತ್ತಿರುವುದಾಗಿ ಸೋಮಶೇಖರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ