ಟಿಕೆಟ್ ಸಿಗಲಿ ಅಥವಾ ಸಿಗದಿರಲಿ; ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರಲ್ಲ: ಮಂಗಳಾ ಅಂಗಡಿ, ಬೆಳಗಾವಿ ಸಂಸದೆ

ಟಿಕೆಟ್ ಸಿಗಲಿ ಅಥವಾ ಸಿಗದಿರಲಿ; ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರಲ್ಲ: ಮಂಗಳಾ ಅಂಗಡಿ, ಬೆಳಗಾವಿ ಸಂಸದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 14, 2023 | 5:10 PM

ಅವರು ತಮ್ಮ ಬದಲು ಮಕ್ಕಳಾದ ಸ್ಪೂರ್ತಿ ಇಲ್ಲವೇ ಶ್ರದ್ಧಾ ಅವರಲ್ಲಿ ಯಾರಿಗಾದರೂ ಟಿಕೆಟ್ ಕೇಳಲಿದ್ದಾರೆಯೇ? ಅಂಥದ್ದೇನೂ ಇಲ್ಲ, ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧರಾಗಿರುವುದಾಗಿ ಮಂಗಳಾ ಹೇಳಿದರು. ಮಂಗಳಾ ಅವರ ಮಾತುಗಳಲ್ಲಿ ಸ್ಪಷ್ಟತೆ ಇತ್ತು, ಯಾವುದೇ ಗೊಂದಲವಿರಲಿಲ್ಲ.

ಬೆಳಗಾವಿ: ಅಪರೂಪಕ್ಕೊಮ್ಮೆ ಮಾಧ್ಯಮ ಜೊತೆ ಮಾತಾಡುವ ಬೆಳಗಾವಿ ಸಂಸದೆ ಮಂಗಳಾ ಅಂಗಡಿ (Mangala Angadi ), 2024 ಲೋಕ ಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗುವ ಬಗ್ಗೆ ವಿಶ್ವಾಸ ಮತ್ತು ಭರವಸೆ ವ್ಯಕ್ತಪಡಿಸಿದರು. ಟಿಕೆಟ್ ಸಿಗೋದಿಲ್ಲ ಅನ್ನೋದು ಕೇವಲ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ ಆದರೆ ತನಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು. ಒಂದು ವೇಳೆ ಟಿಕೆಟ್ ಸಿಗದ ಪಕ್ಷದಲ್ಲಿ ಕಾಂಗ್ರೆಸ್ ಪಕ್ಷ (Congress party) ಸೇರ್ತೀರಾ ಅಂತ ಕೇಳಿದ ಪ್ರಶ್ನೆಗೆ ಅವರು ಯಾವ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ, ಟಿಕೆಟ್ ತಮಗೆ ಸಿಗಲಿ ಅಥವಾ ಹೈಕಮಾಂಡ್ ಬೇರೆ ಯಾರಿಗೇ ನೀಡಲಿ-ತಮಗೇನೂ ಅಸಮಾಧಾನವಾಗದು ಎಂದು ಮಂಗಳಾ ಹೇಳಿದರು. ಅವರು ತಮ್ಮ ಬದಲು ಮಕ್ಕಳಾದ ಸ್ಪೂರ್ತಿ (Spoorthi) ಇಲ್ಲವೇ ಶ್ರದ್ಧಾ (Shraddha) ಅವರಲ್ಲಿ ಯಾರಿಗಾದರೂ ಟಿಕೆಟ್ ಕೇಳಲಿದ್ದಾರೆಯೇ? ಅಂಥದ್ದೇನೂ ಇಲ್ಲ, ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧರಾಗಿರುವುದಾಗಿ ಮಂಗಳಾ ಹೇಳಿದರು. ಮಂಗಳಾ ಅವರ ಮಾತುಗಳಲ್ಲಿ ಸ್ಪಷ್ಟತೆ ಇತ್ತು, ಯಾವುದೇ ಗೊಂದಲವಿರಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ