ಮಂಗಳಾ ಅಂಗಡಿ ಅವರನ್ನು ಕಾಂಗ್ರೆಸ್ ಸೇರುವಂತೆ ಆಹ್ವಾನಿಸಿಲ್ಲ: ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯ
2024 ರ ಲೋಕಸಭಾ ಚುನಾವಣೆಯಲ್ಲಿ ಮಂಗಳಾ ಅವರಿಗೆ ಬಿಜೆಪಿ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಿಸುವಿರಾ ಅಂತ ಕೇಳಿದ ಪ್ರಶ್ನೆಗೆ ಅವರು, ಅವರು ಬಿಜೆಪಿ ಸಂಸದರಾಗಿದ್ದಾರೆ, ಅವರಿಗೆ ಪುನಃ ಟಿಕೆಟ್ ನೀಡುತ್ತಾರೋ ಬಿಡುತ್ತಾರೋ ಅದು ಬಿಜೆಪಿ ನಾಯಕರಿಗೆ ಸಂಬಂಧಿಸಿದ ವಿಷಯ, ಬಿಜೆಪಿ ಹೈಕಮಾಂಡ್ ತನ್ನ ಮಾತು ಯಾಕೆ ಕೇಳುತ್ತದೆ ಎಂದು ಶೆಟ್ಟರ್ ಪ್ರಶ್ನಿಸಿದರು.
ಬೆಳಗಾವಿ: ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ (Jagadish Shettar) ಮತ್ತು ಬೆಳಗಾವಿಯ ಬಿಜೆಪಿ ಸಂಸದೆ ಮಂಗಳಾ ಅಂಗಡಿ (Mangala Angadi) ಸಂಬಂಧಿಕರು. ಸುರೇಶ್ ಅಂಗಡಿಯವರ ನಿಧನದ ಬಳಿಕ ತೆರವಾಗಿದ್ದ ಬೆಳಗಾವಿ ಲೋಕ ಸಭಾ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ (bypoll) ಅವರ ಪತ್ನಿ ಮಂಗಳಾರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಾಗ ಅವರ ಗೆಲುವಿಗೆ ಶೆಟ್ಟರ್ ಬಹಳ ಶ್ರಮಿಸಿದ್ದು ಸುಳ್ಳಲ್ಲ. ಈಗ ರಾಜ್ಯದಲ್ಲಿ ರಾಜಕೀಯ ಸನ್ನಿವೇಶ ಬದಲಾಗಿದೆ. ಕೆಲ ಬಿಜೆಪಿ ಶಾಸಕರು ಮತ್ತು ಧುರೀಣರು ಕಾಂಗ್ರೆಸ್ ಸೇರಲಿರುವ ವದಂತಿಗಳು ದಟ್ಟವಾಗಿವೆ. ಹೀಗಿರುವಾಗ ಶೆಟ್ಟರ್ ಅವರೇನಾದರೂ ಮಂಗಳಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ? ನಗರದಲ್ಲಿಂದು ಪತ್ರಕರ್ತರೊಡನೆ ಮಾತಾಡಿದ ಶೆಟ್ಟರ್, ಅಂಥ ಸಾದ್ಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದರು. 2024 ರ ಲೋಕಸಭಾ ಚುನಾವಣೆಯಲ್ಲಿ ಮಂಗಳಾ ಅವರಿಗೆ ಬಿಜೆಪಿ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಿಸುವಿರಾ ಅಂತ ಕೇಳಿದ ಪ್ರಶ್ನೆಗೆ ಅವರು, ಅವರು ಬಿಜೆಪಿ ಸಂಸದರಾಗಿದ್ದಾರೆ, ಅವರಿಗೆ ಪುನಃ ಟಿಕೆಟ್ ನೀಡುತ್ತಾರೋ ಬಿಡುತ್ತಾರೋ ಅದು ಬಿಜೆಪಿ ನಾಯಕರಿಗೆ ಸಂಬಂಧಿಸಿದ ವಿಷಯ, ಬಿಜೆಪಿ ಹೈಕಮಾಂಡ್ ತನ್ನ ಮಾತು ಯಾಕೆ ಕೇಳುತ್ತದೆ ಮತ್ತು ಕಾಂಗ್ರೆಸ್ ಹೈ ಕಮಾಂಡ್ ನೊಂದಿಗೆ ತಾನು ಟಿಕೆಟ್ ವಿಷಯ ಚರ್ಚಿಸುವುದಿಲ್ಲ ಎಂದು ಶೆಟ್ಟರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ