ಜಿ20 ಶೃಂಗಸಭೆಯ ಆಹ್ವಾನ ತಿರಸ್ಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ: ಡಾ ಸಿಎನ್ ಅಶ್ವಥ್ ನಾರಾಯಣ
ಶೃಂಗಸಭೆಯಲ್ಲಿ ವಿಶ್ವದ ಬೇರೆ ಬರೆ ದೇಶಗಳ ಅಗ್ರಗಣ್ಯ ನಾಯಕರು ಬಂದಿದ್ದಾರೆ, ಅವರೊಂದಿಗೆ ವಿಚಾರ ವಿನಿಮಮ ನಡೆಸುವ ಸದವಕಾಶ ಇತ್ತು, ಹೊಸ ಹೊಸ ಐಡಿಯಾಗಳನ್ನು ರಾಜ್ಯಕ್ಕೆ ತರಬಹುದಾಗಿತ್ತು. ಆದರೆ ಸಿದ್ದರಾಮಯ್ಯನವರಿಗೆ ಇದ್ಯಾವುದೂ ಬೇಕಿಲ್ಲ ಎಂದು ಅಶ್ವಥ್ ನಾರಾಯಣ ಹೇಳಿದರು.
ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನವಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಹೋಗದಿರುವುದು, ಕಾಂಗ್ರೆಸ್ ಸರ್ಕಾರದ (Congress government) ಕೀಳುಮಟ್ಟದ ರಾಜಕಾರಣ, ದುರಹಂಕಾರ ಮತ್ತು ವೈಯಕ್ತಿಕ ಪ್ರತಿಷ್ಠೆಯ ದ್ಯೋತಕವಾಗಿದೆ ಎಂದು ಬಿಜೆಪಿ ನಾಯಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿದವರನ್ನು ಮಾತ್ರ ಪ್ರತಿನಿಧಿಸುವುದಿಲ್ಲ, ಆರೂವರೆ ಕೋಟಿ ಕನ್ನಡಿಗರ ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ. ಶೃಂಗಸಭೆಯಲ್ಲಿ ವಿಶ್ವದ ಬೇರೆ ಬರೆ ದೇಶಗಳ ಅಗ್ರಗಣ್ಯ ನಾಯಕರು ಬಂದಿದ್ದಾರೆ, ಅವರೊಂದಿಗೆ ವಿಚಾರ ವಿನಿಮಮ ನಡೆಸುವ ಸದವಕಾಶ ಇತ್ತು, ಹೊಸ ಹೊಸ ಐಡಿಯಾಗಳನ್ನು ರಾಜ್ಯಕ್ಕೆ ತರಬಹುದಾಗಿತ್ತು. ಆದರೆ ಸಿದ್ದರಾಮಯ್ಯನವರಿಗೆ ಇದ್ಯಾವುದೂ ಬೇಕಿಲ್ಲ ಎಂದು ಅಶ್ವಥ್ ನಾರಾಯಣ ಹೇಳಿದರು. ವಿಶ್ವಸ್ತರದಲ್ಲಿ ಭಾರತ ಈಗ ಉತ್ತಮ ಸ್ಥಾನ ಪಡೆದುಕೊಂಡಿದೆ, ವಿಶ್ವನಾಯಕನ ಪಟ್ಟಕ್ಕೇರಿದೆ, ಸ್ಥಿತಿ ಹೋಗಿರುವಾಗ ಸಿದ್ದರಾಮಯ್ಯ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳದೆ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ