ದೆಹಲಿಯಿಂದ ಬರಿಗೈಲಿ ವಾಪಸ್ಸಾದ ಬಿಎಸ್ ಯಡಿಯೂರಪ್ಪ; ಹೆಚ್ ಡಿ ಕುಮಾರಸ್ವಾಮಿಗೆ ಭ್ರಮನಿರಸನ!

ದೆಹಲಿಯಿಂದ ಬರಿಗೈಲಿ ವಾಪಸ್ಸಾದ ಬಿಎಸ್ ಯಡಿಯೂರಪ್ಪ; ಹೆಚ್ ಡಿ ಕುಮಾರಸ್ವಾಮಿಗೆ ಭ್ರಮನಿರಸನ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 14, 2023 | 3:00 PM

ಕಳೆದ ಚುನಾವಣೆಯಲ್ಲಿ ಕೇವಲ 19 ಸ್ಥಾನ ಮಾತ್ರ ಗೆಲ್ಲುವಲ್ಲಿ ಸಫಲರಾದ ಕುಮಾರಸ್ವಾಮಿಗೆ ಪಕ್ಷ ಪುನಶ್ಚೇತನಗೊಳಿಸಲು ಬಿಜೆಪಿ ಜೊತೆ ಸಖ್ಯ ಬೆಳೆಸುವುದು ಅನಿವಾರ್ಯವಾಗಿದೆ. ದೆಹಲಿಗೆ ಹೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಮಾತುಕತೆ ನಡೆಸುವುದಾಗಿ ನಿನ್ನೆ ಹೇಳಿದ್ದರು. ಆದರೆ, ಪಕ್ಷದ ಅತ್ಯಂತ ಹಿರಿಯ ನಾಯಕ ಯಡಿಯೂರಪ್ಪನವರೊಂದಿಗೆ ವಿಷಯವನ್ನು ಚರ್ಚಿಸಲಿಚ್ಛಿಸದ ವರಿಷ್ಠರು ಕುಮಾರಸ್ವಾಮಿ ಜೊತೆ ಚರ್ಚಿಸುತ್ತಾರೆಯೇ?

ಬೆಂಗಳೂರು: ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ದೆಹಲಿಯಿಂದ ಬರಿಗೈಯಲ್ಲಿ ವಾಪಸ್ಸಾಗಿರೋದು ಬಿಜೆಪಿ ನಾಯಕರಿಗಿಂತ ಹೆಚ್ಚು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಗೆ (HD Kumaraswamy) ನಿರಾಸೆಯಾಗಿರುತ್ತದೆ. ಯಡಿಯೂರಪ್ಪ ವಿರೋಧ ಪಕ್ಷ ನಾಯಕ ಆಯ್ಕೆ, ರಾಜ್ಯ ಬಿಜೆಪಿಗೆ ಅಧ್ಯಕ್ಷ ಮತ್ತು ಜೆಡಿಎಎಸ್ ಮೈತ್ರಿಯ (alliance with JDS) ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಒಳ್ಳೆಯ ಸುದ್ದಿಹೊತ್ತು ತರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅವ್ಯಾವುಗಳ ಬಗ್ಗೆ ಚರ್ಚೆಯಾಗಲಿಲ್ಲ. ಚಂದ್ರಯಾನ-3 ರ ಯಶಸ್ಸಿನ ಬಗ್ಗೆ ಮಾತ್ರ ಚರ್ಚೆಯಾಯಿತು ಉಳಿದ ವಿಷಯಗಳನ್ನು ಚರ್ಚಿಸಲು ಸಮಯವಿರಲಿಲ್ಲ ಎಂದು ಯಡಿಯೂರಪ್ಪ ಹೇಳಿದರು. ಜೆಡಿಎಸ್ ಜೊತೆ ಮೈತ್ರಿ ಬೆಳೆಸುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಏನು ಹೇಳುತ್ತಾರೋ ಅದೇ ನಿರ್ಣಾಯಕವಾಗುತ್ತದೆ, ರಾಜ್ಯ ಬಿಜೆಪಿ ನಾಯಕರುರ ಆಡುವ ಮಾತು ಮುಖ್ಯವಲ್ಲ ಎಂದು ಯಡಿಯೂರಪ್ಪ ಹೇಳಿದರು. ಕಳೆದ ಚುನಾವಣೆಯಲ್ಲಿ ಕೇವಲ 19 ಸ್ಥಾನ ಮಾತ್ರ ಗೆಲ್ಲುವಲ್ಲಿ ಸಫಲರಾದ ಕುಮಾರಸ್ವಾಮಿಗೆ ಪಕ್ಷ ಪುನಶ್ಚೇತನಗೊಳಿಸಲು ಬಿಜೆಪಿ ಜೊತೆ ಸಖ್ಯ ಬೆಳೆಸುವುದು ಅನಿವಾರ್ಯವಾಗಿದೆ. ದೆಹಲಿಗೆ ಹೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಮಾತುಕತೆ ನಡೆಸುವುದಾಗಿ ನಿನ್ನೆ ಹೇಳಿದ್ದರು. ಆದರೆ, ಪಕ್ಷದ ಅತ್ಯಂತ ಹಿರಿಯ ನಾಯಕ ಯಡಿಯೂರಪ್ಪನವರೊಂದಿಗೆ ವಿಷಯವನ್ನು ಚರ್ಚಿಸಲಿಚ್ಛಿಸದ ವರಿಷ್ಠರು ಕುಮಾರಸ್ವಾಮಿ ಜೊತೆ ಚರ್ಚಿಸುತ್ತಾರೆಯೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ