ಚೈತ್ರಾ ಕುಂದಾಪುರ ವಂಚನೆ ಕೆಲಸ ಕೇವಲ ಮಂಗಳೂರು-ಉಡುಪಿಗೆ ಸೀಮಿತವಾಗಿರದೆ ರಾಜ್ಯಾದ್ಯಂತ ವ್ಯಾಪಿಸಿದಂತಿದೆ!

ಸಿಸಿಬಿ ವಿಚಾರಣೆಯಲ್ಲಿ ಒಂದೊಂದಾಗಿ ವಿಷಯಗಳು ಹೊರಬೀಳುತ್ತಿದ್ದಂತೆಯೇ, ಮಾಧ್ಯಮವರು ಸಲೂನ್ ಮಾಲೀಕ ರಾಮು ಬಳಿ ಹೋಗಿ ವಿವರ ಪಡೆದುಕೊಂಡಿದ್ದಾರೆ. ಇದು ಧನರಾಜ್ ಗೆ ಗೊತ್ತಾಗಿ ಅವನು ತನ್ನ ಸ್ನೇಹಿತ ನೂತನ್ ಎಂಬುವವನಿಂದ ರಾಮು ಫೋನ್ ಮಾಡಿಸಿ ಧಮ್ಕಿ ಹಾಕಿಸಿದ್ದಾನೆ. ರಾಮು ಮತ್ತು ನೂತನ್ ನಡುವೆ ನಡೆದ ಸಂಭಾಷನಣೆಯನ್ನು ಇಲ್ಲಿ ಕೇಳಬಹುದು

|

Updated on: Sep 14, 2023 | 1:18 PM

ಚಿಕ್ಕಮಗಳೂರು: ಚೈತ್ರಾ ಕುಂದಾಪರ (Chaitra Kundapura) ಸಿಸಿಬಿ ಪೊಲೀಸರಿಗೆ ತುಂಬಾನೇ ಕೆಲಸ ನೀಡಿದ್ದಾಳೆ ಅನಿಸುತ್ತೆ. ಯಾಕೆ ಅಂತ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಆಕೆಯ ಕಾರ್ಯಕ್ಷೇತ್ರ ಕೇವಲ ಮಂಗಳೂರು ಉಡುಪಿಗೆ ಸೀಮಿತವಾಗಿರದೆ ರಾಜ್ಯಾದ್ಯಂತ ವಿಸ್ತರಿಸಿದಂತಿದೆ. ಗೋವಿಂದ ಬಾಬು ಪೂಜಾರಿ (Govind Babu Pujari) ಅಥವಾ ಅವರಂಥ ಮತ್ತೊಬ್ಬ ಮಿಕನಿಗೆ ಯಾವುದೋ ಆಮಿಶವೊಡ್ಡಿ ಹಣ ಪೀಕುವ ಉದ್ದೇಶದಿಂದ ಚೈತ್ರಾ ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಧನ​ರಾಜ್ (Dhanraj) ಹೆಸರಿನ ವ್ಯಕ್ತಿಯ ಮೂಲಕ ಚೆನ್ನನಾಯ್ಕ್ ಎನ್ನುವವನಿಗೆ ಬಿಜೆಪಿ ಕೇಂದ್ರ ಚುನಾವಣಾ ಮಂಡಳಿ ಸದಸ್ಯನ (BJP Election Committee member) ವೇಷ ಹಾಕಿಸಿದ್ದಾಳೆ. ಆ ಸದಸ್ಯನ ಫೋಟೋ ತೆಗದುಕೊಂಡು ಚೆನ್ನ ನಾಯ್ಕ್ ಕಡೂರಲ್ಲಿ ಕ್ಷೌರದ ಅಂಗಡಿ ನಡೆಸುವ ರಾಮು ಎನ್ನುವವರಲ್ಲಿಗೆ ಹೋಗಿ ಬಿಜಪಿ ಸದಸ್ಯನ ಹಾಗೆ ಹೇರ್ ಕಟ್ ಮಾಡಿಸಿಕೊಂಡು, ಅವರಂತೆ ಕಾಣಲು ಡೈ ಕೂಡ ಮಾಡಿಸಿಕೊಂಡಿದ್ದಾನೆ. ಸಿಸಿಬಿ ವಿಚಾರಣೆಯಲ್ಲಿ ಒಂದೊಂದಾಗಿ ವಿಷಯಗಳು ಹೊರಬೀಳುತ್ತಿದ್ದಂತೆಯೇ, ಮಾಧ್ಯಮವರು ಸಲೂನ್ ಮಾಲೀಕ ರಾಮು ಬಳಿ ಹೋಗಿ ವಿವರ ಪಡೆದುಕೊಂಡಿದ್ದಾರೆ. ಇದು ಧನರಾಜ್ ಗೆ ಗೊತ್ತಾಗಿ ಅವನು ತನ್ನ ಸ್ನೇಹಿತ ನೂತನ್ ಎಂಬುವವನಿಂದ ರಾಮು ಫೋನ್ ಮಾಡಿಸಿ ಧಮ್ಕಿ ಹಾಕಿಸಿದ್ದಾನೆ. ರಾಮು ಮತ್ತು ನೂತನ್ ನಡುವೆ ನಡೆದ ಸಂಭಾಷನಣೆಯನ್ನು ಇಲ್ಲಿ ಕೇಳಬಹುದು. ಈ ವಿಡಿಯೋ ವೈರಲ್ ಆಗಿದ್ದು ಧನರಾಜ್ ಮತ್ತು ನೂತನ್ ಗೆ ಉಳಿಗಾಲವಿದ್ದಂತಿಲ್ಲ, ಯಾಕೆಂದರೆ ಪೊಲೀಸರು ಈಗಾಗಲೇ ಅವರ ಬೇಟೆಗಿಳಿದಿರುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಹೇಳಿದ್ದಕ್ಕೆ ಶಿವಕುಮಾರ್ ನಕ್ಕಿದ್ಯಾಕೆ?
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಹೇಳಿದ್ದಕ್ಕೆ ಶಿವಕುಮಾರ್ ನಕ್ಕಿದ್ಯಾಕೆ?
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್