MLA ticket cheating case: ನಕಲಿ ನಾಯಕರುಗಳ ಮಧ್ಯೆ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ಮಿಸ್​​ ಚೈತ್ರಾ ಕುಂದಾಪುರ, ಅಂದಿನ ಸಚಿವ ಸುನಿಲ್ ಕುಮಾರ್​ಗೆ ಇಂದು ಶಾಕ್​!

Chaitra Kundapura: ಅಂದು ವಿಷಯ ಏನೆಂದು ಅರಿಯದ ಸಚಿವ ಸುನಿಲ್ ಕುಮಾರ್ ಚೈತ್ರಾಳನ್ನು ಎಂದಿನಂತೆ ಸಹಜವಾಗಿ ಗುರುತಿಸಿ ಮಾತಾನಾಡಿಸಿದ್ದರು. ಆ ವೇಳೆಯೇ ಅಷ್ಟೋ ಇಷ್ಟೋ ಗೋವಿಂದ ಬಾಬು ಪೂಜಾರಿ ಬಗ್ಗೆ ಸಹ ಹೇಳಿದ್ದಳು ಮಿಸ್​ ಚೈತ್ರಾ. ಆದರೆ ಸುನಿಲ್ ಕುಮಾರ್ ಭೇಟಿ ಬಳಿಕ, ಅದಕ್ಕೆ ಬೇರೆ ಬಣ್ಣ ಬಳಿದು ಈ ಸಚಿವರೇ ಮುಂದೆ ಸಂಘ ಮತ್ತು ಪಕ್ಷದಲ್ಲಿ ಪ್ರಮುಖರು. ಅದಕ್ಕೆ ನಿಮ್ಮ ಟಿಕೆಟ್​​ಗಾಗಿ ಅವರನ್ನು ಭೇಟಿ ಮಾಡಿಸಿದ್ದು ಎಂದು ಮಿಸ್​ ಚೈತ್ರಾ ಬೂಸಿ ಬಿಟ್ಟಿದ್ದಳಂತೆ

MLA ticket cheating case: ನಕಲಿ ನಾಯಕರುಗಳ ಮಧ್ಯೆ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ಮಿಸ್​​ ಚೈತ್ರಾ ಕುಂದಾಪುರ, ಅಂದಿನ ಸಚಿವ ಸುನಿಲ್ ಕುಮಾರ್​ಗೆ ಇಂದು ಶಾಕ್​!
ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ಮಿಸ್​​ ಚೈತ್ರಾ ಕುಂದಾಪುರ
Follow us
Prajwal Kumar NY
| Updated By: ಸಾಧು ಶ್ರೀನಾಥ್​

Updated on: Sep 14, 2023 | 8:23 AM

ಬೆಂಗಳೂರು, ಸೆಪ್ಟೆಂಬರ್​​ 14: ಪ್ರಮುಖ ರಾಜಕೀಯ ಪಕ್ಷದ ವತಿಯಿಂದ ಅಸೆಂಬ್ಲಿ ಟಿಕೆಟ್ ಆಮಿಷವೊಡ್ಡಿ ಯುವ ಉದ್ಯಮಿಯೊಬ್ಬರಿಗೆ (BJP ticket aspirant industrialist Govinda Babu for Byndoor assembly seat) ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಚೈತ್ರಾ ಕುಂದಾಪುರ (Hindutva activist Chaitra Kundapura) ಮತ್ತು ಗಗನ್ ಕಡೂರು ಜೋಡಿ ಬಾನಗಡಿಗಳು ನೂರೆಂಟು ಹೊರಬರುತ್ತಿವೆ. ಸಿಸಿಬಿ ವಿಚಾರಣೆಯಿಂದ ಸವಿಸ್ತಾರ ಮಾಹಿತಿ ಹೊರಬರುತ್ತಿದ್ದು, ಬಿಜೆಪಿ ಮತ್ತು ಆರ್ ಎಸ್ ಎಸ್ ಹೆಸರಿನಲ್ಲಿ ಸಂಪೂರ್ಣ ನಕಲಿ ನಾಯಕರುಗಳನ್ನು ಸೃಷ್ಟಿ ಮಾಡಿತ್ತು ಈ ಖತರನಾಕ್​​ ಜೋಡಿ. ಆಶ್ಚರ್ಯದ ಸಂಗತಿಯೆಂದರೆ ಈ ನಕಲಿಗಳ ಸೃಷ್ಟಿ ಭಾಗವಾಗಿ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿದ್ದ ಮಿಸ್​​ ಚೈತ್ರಾ ಕುಂದಾಪುರ ಆ ಭೇಟಿಯನ್ನೇ ಅಸಲಿಯೆಂದು ಬಿಂಬಿಸಿಕೊಂಡಿದ್ದಳು. ಆದರೆ ಆ ಸಚಿವರಿಗೆ ಅದರ ಬಗ್ಗೆ ಸಣ್ಣ ಸುಳಿವೂ ಇರಲಿಲ್ಲ. ಎಂದಿನಂತೆ ಹತ್ತಾರು ಮಂದಿ ತಮ್ಮನ್ನು ಭೇಟಿ ಮಾಡುತ್ತಿರುತ್ತಾರೆ. ಅದರಲ್ಲಿ ಸ್ವಲ್ಪ ಪರಿಚಯವಿದ್ದ ಚೈತ್ರಾ ಕುಂದಾಪುರ ಸಹ ಅಂದು ಭೇಟಿಯಾಗಿರಬಹುದು. ಆದರೆ ಪ್ರಸ್ತುತ ಮೋಸ ಹೋಗಿರುವ ಗೋವಿಂದ ಬಾಬುಗೆ ಅಂದು ಆ ಭೇಟಿಯನ್ನೇ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ ಭೇಟಿಯನ್ನೇ ಅಸಲಿ ಎಂಬಂತೆ ಬಿಂಬಿಸಿದ್ದಳು ಮಿಸ್​​ ಚೈತ್ರಾ ( MLA ticket cheating case)!

ಅಂದು ಕ್ಯಾಬಿನೆಟ್ ಮಿನಿಸ್ಟರ್ ಸುನಿಲ್ ಕುಮಾರ್ ಮನೆಗೆ ಕರೆದುಕೊಂಡು ಹೋಗಿದ್ದ ಮಿಸ್​​ ಚೈತ್ರಾ, ನಾವು ನಿಮಗೆ ಖಂಡಿತಾ ಟಿಕೆಟ್ ಕೊಡಿಸುತ್ತೇವೆ ಎಂದು ಗೋವಿಂದ ಬಾಬುಗೆ ಬಿಂಬಿಸುವ/ ನಂಬಿಸುವ ಯತ್ನದಲ್ಲಿ ಇದು ಸಹ ಒಂದು ಭಾಗವಾಗಿತ್ತು ಎಂಬುದು ಈಗ ವಿಚಾರಣೆ ವೇಳೆ ತಿಳಿದುಬಂದಿದೆ. ಮಾಜಿ ಸಚಿವ ಸುನಿಲ್ ಕುಮಾರ್ ರನ್ನು ಭೇಟಿ ಮಾಡಿಸಿದ್ದ ಮಿಸ್​ ಚೈತ್ರಾ ತಮ್ಮ ಮೈನವಿರೇಳಿಸುವ ಭಾಷಣದಿಂದ ಬಿಜೆಪಿ ನಾಯಕರಿಗೆ ಪರಿಚಿತಳಾಗಿದ್ದಳು. ಹೀಗಾಗಿ ಆ ಪರಿಚಯವನ್ನೇ ದುರುಪಯೋಗ ಮಾಡಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.

ಅಂದು ವಿಷಯ ಏನೆಂದು ಅರಿಯದ ಸಚಿವ ಸುನಿಲ್ ಕುಮಾರ್ ಚೈತ್ರಾಳನ್ನು ಎಂದಿನಂತೆ ಸಹಜವಾಗಿ ಗುರುತಿಸಿ ಮಾತಾನಾಡಿಸಿದ್ದರು. ಆ ವೇಳೆಯೇ ಅಷ್ಟೋ ಇಷ್ಟೋ ಗೋವಿಂದ ಬಾಬು ಪೂಜಾರಿ ಬಗ್ಗೆ ಸಹ ಹೇಳಿದ್ದಳು ಮಿಸ್​ ಚೈತ್ರಾ. ಆದರೆ ಸುನಿಲ್ ಕುಮಾರ್ ಭೇಟಿ ಬಳಿಕ, ಅದಕ್ಕೆ ಬೇರೆ ಬಣ್ಣ ಬಳಿದು ಈ ಸಚಿವರೇ ಮುಂದೆ ಸಂಘ ಮತ್ತು ಪಕ್ಷದಲ್ಲಿ ಪ್ರಮುಖರು. ಅದಕ್ಕೆ ಅವರನ್ನು (ಸುನಿಲ್ ಕುಮಾರ್) ಭೇಟಿ ಮಾಡಿಸಿದ್ದು, ನಿಮ್ಮ ಬಗ್ಗೆ ಎಲ್ಲಾ ಹೇಳಿದ್ದೇನೆ, ಟೆಕೆಟ್ ಕೊಡಿಸಲು ಸಹ ಸಹಾಯ ಮಾಡ್ತಾರೆ ಎಂದು ಬೂಸಿ ಬಿಟ್ಟಿದ್ದಳು ಮಿಸ್​ ಚೈತ್ರಾ!

ಆದ್ರೆ ಸುನಿಲ್ ಕುಮಾರ್ ಅವರ ಅರಿವಿಗೆ ಈ ಯಾವ ವಿಚಾರಗಳು ಗಮನಕ್ಕೆ ಬಂದಿರಲಿಲ್ಲ. ಎಲ್ಲಾರಂತೆ ಅದು ಸಾಮಾನ್ಯ ಭೇಟಿಯಾಗಿತ್ತು. ಅವರ ಭೇಟಿ ಬಳಿಕ, ಅವರನ್ನೆಲ್ಲ ವಾಪಸ್ಸು ಕಳಿಸಿದ್ದರು ಸುನಿಲ್ ಕುಮಾರ್.

ಇದನ್ನೂ ಓದಿ: ಎಂಎಲ್​ಎ ಟಿಕೆಟ್​ ವಂಚನೆ: ಚೈತ್ರಾ ಕುಂದಾಪುರ ಸೆ. 23ರ ವರೆಗೆ ಸಿಸಿಬಿ ಕಸ್ಟಡಿಗೆ

ಇನ್ನು ವಿಚಾರಣೆ ವೇಳೆ ಈ ಹಿಂದೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಜೊತೆಗೆ ಮೋಸ್ಟ್ ಕಾಂಟ್ಯಾಕ್ಟ್ ಇದ್ದಿದ್ದು ಮುಸ್ಲಿಂ ಲೀಗ್ ಮಹಿಳಾ ಮುಖಂಡರಾದ ಅಜುಂ ಜೊತೆಗೆ. ಫೋನ್ ಕರೆಗಳ ಪರಿಶೀಲನೆ ಮಾಡಿದಾಗ್ಲೇ ಚೈತ್ರಾ ಕುಂದಾಪುರ ಅಸಲಿಯತ್ತು ಸಿಸಿಬಿಗೆ ಬಯಲಾಗಿರುವುದು. ಸೋಜಿಗದ ವಿಚಾರವೆಂದರೆ ತಮ್ಮ ರಣಭೀಕರ ಭಾಷಣಗಳಲ್ಲಿ ಮುಸ್ಲಿಂ ವಿರೋಧಿಯಾಗಿ/ ಹಿಂದೂಗಳ ಪರವಾಗಿ ಭಾಷಣ ಬಿಗಿಯುತ್ತಿದ್ದ ಮಿಸ್ ಚೈತ್ರಾ ವಾಸ್ತವದಲ್ಲಿ ಮುಸ್ಲಿಂ ಯುವತಿ ಜೊತೆಗೆ ಅತ್ಯಂತ ಹೆಚ್ಚು ಸಂಪರ್ಕ ಹೊಂದಿದ್ದಳು! ಹಣದ ವ್ಯವಹಾರ, ಆಶ್ರಯ ಪಡೆದಿರುವುದು ಸೇರಿ ಹಲವಾರು ವಿಚಾರಗಳಲ್ಲಿ ಚೈತ್ರಾಗೆ ಮುಸ್ಲಿಂ ಯುವತಿ ಸಹಾಯ ಮಾಡಿದ್ದಾಳೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ