ಬೆಂಗಳೂರು: ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಡಿ.31ರಂದು ಕರ್ನಾಟಕ ಬಂದ್ ನಡೆಸಲಿರುವ ಹಿನ್ನೆಲೆ, ಕರ್ನಾಟಕ ಬಂದ್‌ಗೆ ಬೆಂಬಲ ನೀಡುವಂತೆ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ. ಈ ಸಂಬಂಧ ಸೋಮವಾರ ಮಲ್ಲೇಶ್ವರಂ ಸರ್ಕಲ್‌ನಲ್ಲಿ ಉರುಳು ಸೇವೆ ಮಾಡುತ್ತೇವೆ. ಉರುಳು ಸೇವೆ ಮಾಡುವ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಕರ್ನಾಟಕ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.
ನೈತಿಕ ಬೆಂಬಲ ಕೊಡುತ್ತೇವೆ ಎನ್ನುವವರು ಮನೆಯಲ್ಲೇ ಇರಿ. ನಿಮ್ಮ ನೈತಿಕ ಬೆಂಬಲ ನಮಗೆ ಬೇಡವೇ ಬೇಡ ಎಂದು ಬೆಂಗಳೂರಿನಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ದಾರಿಯುದ್ದಕ್ಕೂ ಮನವಿ ಮಾಡುತ್ತಿರುವ ವಾಟಾಳ್ ನಾಗರಾಜ್, ಡಿಸೆಂಬರ್ 31ರಂದು ಮನೆಯಿಂದ ಯಾರೂ ಹೊರ ಬರಬೇಡಿ. ಎಂಇಎಸ್ ಬ್ಯಾನ್ ಮಾಡುವಂತೆ ಆಗ್ರಹಿಸಿ ಬಂದ್ ಮಾಡುತ್ತೇವೆ. ಹೀಗಾಗಿ ಬಸ್, ಆಟೋ, ರೈಲು ಯಾವುದೇ ವಾಹನಗಳು ಇರಲ್ಲ. ಹೀಗಾಗಿ ಮನೆಯಿಂದ ಹೊರಗಡೆ ಬರಬೇಡಿ ಎಂದು ಅನೌನ್ಸ್ ಮಾಡುತ್ತಿದ್ದಾರೆ.
ಕರ್ನಾಟಕ ಬಂದ್ ಬೆಂಬಲಿಸುವುದಾಗಿ ಮಂತ್ರಿ ಮಾಲ್ನವರು ಹೇಳಿದ್ದಾರೆ. ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಮನವಿಗೆ ಸ್ಪಂದನೆ ನೀಡಿದ್ದಾರೆ. ರಾಜ್ಯದಲ್ಲಿ MES ನಿಷೇಧಕ್ಕೆ ಸರ್ಕಾರ ಮೇಲೆ ಒತ್ತಡ ತರಬೇಕು. ಕೇಂದ್ರ, ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಬಂದ್‌ಗೆ ಕರೆ ನೀಡಬೇಕು. ಡಿ.31ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡ್ಬೇಕು. ಎಲ್ಲಾ ಮಾಲ್ಗಳು ಕನ್ನಡ ಪರ ಹೋರಾಟಗಾರರನ್ನು ಬೆಂಬಲಿಸಿ ಎಂದು ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ‘ಕರ್ನಾಟಕ ಬಂದ್‌ನಿಂದ ಮಹಾರಾಷ್ಟ್ರದವರಿಗೆ ತೊಂದರೆ ಆಗಲ್ಲ; ಬಂದ್‌ಗೆ ಕರೆ ನೀಡಿದವರು ಈ ಬಗ್ಗೆ ಯೋಚಿಸಬೇಕು’
ಇದನ್ನೂ ಓದಿ: ಡಿ.31ರ ಬಂದ್ ಬಗ್ಗೆ ಯಾವುದೇ ಮನವಿ ಪತ್ರ ನೀಡಿಲ್ಲ; ಒತ್ತಾಯಪೂರ್ವಕವಾಗಿ ಬಂದ್ ನಡೆಸುವಂತಿಲ್ಲ: ಕಮಲ್ ಪಂತ್