ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್
ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಡ್ರಗ್ಸ್ ವಿಚಾರವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕರ್ನಾಟಕ ಡ್ರಗ್ಸ್ ಮುಕ್ತ ಮಾಡಲು ಸರ್ಕಾರ ಸಿದ್ಧವಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾರಾಟ ಪ್ರಕರಣ ಹೆಚ್ಚಾಗುತ್ತಿದೆ. ಸದ್ಯ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥ ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿ.ಕೆ.ಅಚ್ಚುಕಟ್ಟು ಠಾಣಾ ಪೊಲೀಸರು ಸುಡಾನ್ ಪ್ರಜೆಯಾದ ನಫಿ ಇಬ್ರಾಹಿಂ ಮರೆಗ್ ಸತೂರ್ ಎಂಬುವವನನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ಕಾಲೇಜೊಂದರ ಬಳಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಪೊಲೀಸುರ ಆರೋಪಿಯನ್ನು ಬಂಧಿಸಿ ಬಂಧಿತನಿಂದ 1,04,500 ರೂ. ಮೌಲ್ಯದ ಎಕ್ಸ್ಟಸಿ ಮಾತ್ರೆಗಳನ್ನ ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಡ್ರಗ್ಸ್ ವಿಚಾರವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕರ್ನಾಟಕ ಡ್ರಗ್ಸ್ ಮುಕ್ತ ಮಾಡಲು ಸರ್ಕಾರ ಸಿದ್ಧವಾಗಿದೆ. ಡ್ರಗ್ಸ್ ಮಾರುವವರು, ಪಡೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ.
ಕಾಲೇಜುಗಳಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದರೆ ಕಾಲೇಜು ಆಡಳಿತ ಮಂಡಳಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು. ಡ್ರಗ್ ಪುಡಿ ಸಿಕ್ಕಿದರೆ ಪುಡಿ ಪುಡಿ ಮಾಡಬೇಕು. ಈಗಾಗಲೇ ಕಾಲೇಜುಗಳ ಸುತ್ತಮುತ್ತ, ಕಾಲೇಜು ಕ್ಯಾಂಪಸ್ ಒಳಗೆ ಸಿಸಿ ಟಿವಿ ಹಾಕಲು ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದ್ದೇವೆ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಮೂವರು ಸರಗಳ್ಳರ ಬಂಧನ ಕಲಬುರಗಿ ನಗರದಲ್ಲಿ ಮೂವರು ಸರಗಳ್ಳರನ್ನ ಬಂಧಿಸಲಾಗಿದೆ. ಕಲಬುರಗಿ ನಗರದ ಸಂಜು ನಗರದ ನಿವಾಸಿಗಳಾದ ಆರೋಪಿಗಳು ಇದೀಗ ಪೊಲೀಸರ ವಶದಲ್ಲಿದ್ದಾರೆ. ನಿಜಲಿಂಗಪ್ಪ, ವಿಠ್ಠಲ್, ಗುರುದೇವ ಎಂಬ ಬಂಧಿತ ಆರೋಪಿಗಳಿಂದ 11.50 ಲಕ್ಷ ರೂ. ಮೌಲ್ಯದ 280 ಗ್ರಾಂ ಚಿನ್ನಾಭರಣ ಜಪ್ತಿಮಾಡಲಾಗಿದೆ. ಡಿಸೆಂಬರ್ 11 ರಂದು ಜಯನಗರ ಬಡಾವಣೆಯಲ್ಲಿ ಮಹಿಳೆಯ 40 ಗ್ರಾಂ ಮಾಂಗಲ್ಯ ಸರ ದೋಚಿದ್ದರು. ಸೊಸೆ ಮೊಮ್ಮಗನ ಜೊತೆ ನಡೆದುಕೊಂಡು ಮನೆಗೆ ತೆರಳುತ್ತಿದ್ದಾಗ ಎಗರಿಸಿದ್ದರು. ಸರಗಳ್ಳರ ದುಷ್ಕೃತ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ
Radhika Pandit: ಹೇಗಿತ್ತು ನೋಡಿ ರಾಧಿಕಾ ಪಂಡಿತ್ ಮನೆಯ ಕ್ರಿಸ್ಮಸ್ ಸೆಲೆಬ್ರೇಷನ್
Published On - 2:33 pm, Sun, 26 December 21