ಮ್ಯಾನ್ಮಾರ್‌ನ ಕಯಾಹ್ನಲ್ಲಿ 30ಕ್ಕೂ ಹೆಚ್ಚು ಜನರಿಗೆ ಗುಂಡಿಕ್ಕಿ ಮೃತದೇಹ ಸುಟ್ಟುಹಾಕಿದ ಸ್ಥಿತಿಯಲ್ಲಿ ಪತ್ತೆ; ಹತ್ಯೆಯಲ್ಲಿ ಮಿಲಿಟರಿ ಕೈವಾಡ?
ಮ್ಯಾನ್ಮಾರ್ ಅನ್ನು ಆಳುವ ಮಿಲಿಟರಿಯಿಂದ ಹತ್ಯೆಗೀಡಾದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಸುಟ್ಟ ಶವ ಶನಿವಾರ ಎಚ್‌ಪ್ರುಸೊ ಪಟ್ಟಣದ ಮೊ ಸೊ ಗ್ರಾಮದ ಬಳಿ ಕಾಣಿಸಿದೆ ಎಂದು ಕರೆನ್ನಿ ಮಾನವ ಹಕ್ಕುಗಳ ಗುಂಪು ಹೇಳಿದೆ.
ಕಯಾಹ್: ಶುಕ್ರವಾರದಂದು ಮ್ಯಾನ್ಮಾರ್‌ನ ( Myanmar) ಸಂಘರ್ಷ ಪೀಡಿತ ಕಯಾಹ್ ರಾಜ್ಯದಲ್ಲಿ(Kayah state) ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿ ಅವರ ಮೃತದೇಹಗಳನ್ನು ಸುಟ್ಟುಹಾಕಲಾಗಿದೆ ಎಂದು ಸ್ಥಳೀಯ ನಿವಾಸಿ, ಮಾಧ್ಯಮ ವರದಿಗಳು ಮತ್ತು ಸ್ಥಳೀಯ ಮಾನವ ಹಕ್ಕುಗಳ ಗುಂಪು ತಿಳಿಸಿದೆ. ಮ್ಯಾನ್ಮಾರ್ ಅನ್ನು ಆಳುವ ಮಿಲಿಟರಿಯಿಂದ ಹತ್ಯೆಗೀಡಾದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಸುಟ್ಟ ಶವ ಶನಿವಾರ ಎಚ್‌ಪ್ರುಸೊ ಪಟ್ಟಣದ ಮೊ ಸೊ ಗ್ರಾಮದ ಬಳಿ ಕಾಣಿಸಿದೆ ಎಂದು ಕರೆನ್ನಿ ಮಾನವ ಹಕ್ಕುಗಳ ಗುಂಪು ಹೇಳಿದೆ. “ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಅಮಾನವೀಯ ಮತ್ತು ಕ್ರೂರ ಹತ್ಯೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ಗುಂಪು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದೆ. ಮ್ಯಾನ್ಮಾರ್ ಸೇನೆಯು ಗ್ರಾಮದಲ್ಲಿ ಪ್ರತಿಪಕ್ಷದ ಸಶಸ್ತ್ರ ಪಡೆಗಳಿಂದ ಅನಿರ್ದಿಷ್ಟ ಸಂಖ್ಯೆಯ “ಆಯುಧಗಳೊಂದಿಗೆ ಭಯೋತ್ಪಾದಕರನ್ನು” ಗುಂಡಿಕ್ಕಿ ಕೊಂದಿದೆ ಎಂದು ರಾಜ್ಯ ಮಾಧ್ಯಮ ತಿಳಿಸಿದೆ. ಜನರು ಏಳು ವಾಹನಗಳಲ್ಲಿದ್ದರು ಮತ್ತು ಮಿಲಿಟರಿಯವರು ನಿಲ್ಲಿಸಲು ಹೇಳಿದಾಗ ನಿಲ್ಲಲಿಲ್ಲ ಎಂದು ಅದು ಹೇಳಿದೆ.
ಮ್ಯಾನ್ಮಾರ್ ಮಿಲಿಟರಿ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಮಾನವ ಹಕ್ಕುಗಳ ಗುಂಪು ಮತ್ತು ಸ್ಥಳೀಯ ಮಾಧ್ಯಮಗಳು ಹಂಚಿಕೊಂಡ ಫೋಟೋಗಳು ಸುಟ್ಟ ಟ್ರಕ್‌ಬೆಡ್‌ಗಳ ಮೇಲೆ ದೇಹಗಳ ಸುಟ್ಟ ಅವಶೇಷಗಳನ್ನು ತೋರಿಸಿದೆ.
ಕರೇನ್ನಿ ರಾಷ್ಟ್ರೀಯ ರಕ್ಷಣಾ ಪಡೆ, ಫೆಬ್ರುವರಿ 1 ದಂಗೆಯ ನೇತೃತ್ವದ ಜುಂಟಾವನ್ನು ವಿರೋಧಿಸುವ ಹಲವಾರು ನಾಗರಿಕ ಸೇನಾಪಡೆಗಳಲ್ಲಿ ಅತಿ ದೊಡ್ಡದಾಗಿದೆ.ಸತ್ತವರು ತಮ್ಮ ಸದಸ್ಯರಲ್ಲ ಆದರೆ ಸಂಘರ್ಷದಿಂದ ಆಶ್ರಯ ಪಡೆಯುವ ನಾಗರಿಕರು ಎಂದು ಅದು ಹೇಳಿದೆ. ಎಲ್ಲಾ ಮೃತ ದೇಹಗಳು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ವಿವಿಧ ಗಾತ್ರಗಳಲ್ಲಿದ್ದುದನ್ನು ನೋಡಿ ನಾವು ತುಂಬಾ ಆಘಾತಕ್ಕೊಳಗಾಗಿದ್ದೇವೆ ಎಂದು ಗುಂಪಿನ ಕಮಾಂಡರ್ ರಾಯಿಟರ್ಸ್‌ಗೆ ತಿಳಿಸಿದರು.
ಶುಕ್ರವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ ಗುಂಡು ಹಾರಾಟ ನಡೆದಿದ್ದರಿಂದ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ ಗ್ರಾಮಸ್ಥರೊಬ್ಬರು ಹೇಳಿದ್ದಾರೆ. “ನಾನು ಇಂದು ಬೆಳಿಗ್ಗೆ ನೋಡಲು ಹೋಗಿದ್ದೆ. ನಾನು ಸುಟ್ಟ ಶವಗಳನ್ನು ನೋಡಿದೆ, ಮತ್ತು ಮಕ್ಕಳು ಮತ್ತು ಮಹಿಳೆಯರ ಬಟ್ಟೆಗಳು ಸುತ್ತಲೂ ಹರಡಿವೆ” ಎಂದು ಅವರು ಫೋನ್ ಮೂಲಕ ರಾಯಿಟರ್ಸ್ ಗೆ ತಿಳಿಸಿದರು.
ಏತನ್ಮಧ್ಯೆ ದೇಶದ ಇನ್ನೊಂದು ಭಾಗದಲ್ಲಿ, ಥಾಯ್ ಗಡಿಯ ಸಮೀಪದಲ್ಲಿ ಮ್ಯಾನ್ಮಾರ್ ಮಿಲಿಟರಿ ಬಂಡುಕೋರರ ಗುಂಪಿನೊಂದಿಗೆ ಘರ್ಷಣೆಯನ್ನು ಮುಂದುವರೆಸಿದೆ. ಇದರ ಪರಿಣಾಮವಾಗಿ ದಾರಿ ತಪ್ಪಿದ ರಾಕೆಟ್ ಚಾಲಿತ ಗ್ರೆನೇಡ್ ಥೈಲ್ಯಾಂಡ್ ಭಾಗದಲ್ಲಿ ಮನೆಯನ್ನು ಹಾನಿಗೊಳಿಸಿತು. ಯಾವುದೇ ಸಾವು ನೋವು ವರದಿಯಾಗಿಲ್ಲ ಎಂದು ಥಾಯ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಕಳೆದ ವಾರ ಭುಗಿಲೆದ್ದ ಹೋರಾಟದ ಉಲ್ಬಣದಲ್ಲಿ ಗಡಿಯ ಸಮೀಪವಿರುವ ಕರೆನ್ ನ್ಯಾಷನಲ್ ಯೂನಿಯನ್ (ಕೆಎನ್‌ಯು) ನಿಯಂತ್ರಿತ ಪ್ರದೇಶದ ಮೇಲೆ ಮ್ಯಾನ್ಮಾರ್ ಮಿಲಿಟರಿ ಒಂದು ದಿನದ ಹಿಂದೆ ವೈಮಾನಿಕ ದಾಳಿಗಳನ್ನು ನಡೆಸಿತು.
ಸುಮಾರು 11 ತಿಂಗಳ ಹಿಂದೆ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ಮಿಲಿಟರಿಯು ಉರುಳಿಸಿದಾಗಿನಿಂದ ಮ್ಯಾನ್ಮಾರ್ ಪ್ರಕ್ಷುಬ್ಧವಾಗಿದೆ.
ಇದನ್ನೂ ಓದಿ: Archbishop Desmond Tutu ದಕ್ಷಿಣ ಆಫ್ರಿಕಾದ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ನಿಧನ