Archbishop Desmond Tutu ದಕ್ಷಿಣ ಆಫ್ರಿಕಾದ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ನಿಧನ
South Africa ವರ್ಣಭೇದ ನೀತಿಯ ಅಹಿಂಸಾತ್ಮಕ ಹೋರಾಟಕ್ಕಾಗಿ 1984 ರಲ್ಲಿ ಟುಟು ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಒಂದು ದಶಕದ ನಂತರ, ಅವರು ಆ ಆಡಳಿತದ ಅಂತ್ಯಕ್ಕೆ ಸಾಕ್ಷಿಯಾದರು.
ದಕ್ಷಿಣ ಆಫ್ರಿಕಾದಲ್ಲಿ (South Africa) ವರ್ಣಭೇದ ನೀತಿಯನ್ನು ಕೊನೆಗೊಳಿಸಲು ಹೋರಾಡಿದ (Anti-Apartheid Icon) ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ (Nobel Peace prize laureate) ಆರ್ಚ್‌ಬಿಷಪ್ ಡೆಸ್ಮಂಡ್ ಟುಟು (Desmond Tutu) ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅಧ್ಯಕ್ಷ ಸಿರಿಲ್ ರಮಾಫೋಸಾ ಅವರು ಟುಟು ಸಾವನ್ನು ಖಚಿತಪಡಿಸಿದ್ದಾರೆ. ವಿಮೋಚನೆಗೊಂಡ ದಕ್ಷಿಣ ಆಫ್ರಿಕಾವನ್ನು ನಮಗೆ ನೀಡಿದ ಅತ್ಯುತ್ತಮ ದಕ್ಷಿಣ ಆಫ್ರಿಕನ್ನರ ಪೀಳಿಗೆಗೆ ನಮ್ಮ ರಾಷ್ಟ್ರದ ವಿದಾಯದಲ್ಲಿ ಮತ್ತೊಂದು ಅಧ್ಯಾಯ ಎಂದು ರಮಾಫೋಸಾ ಹೇಳಿದರು. ಟುಟು ದೇಶ-ವಿದೇಶಗಳಲ್ಲಿ ದೇಶದ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಟುಟು ಅವರಿಗೆ 1990 ರ ದಶಕದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇತ್ತೀಚಿನ ವರ್ಷಗಳಲ್ಲಿ ಅವರು ತಮ್ಮ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಹಲವಾರು ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. 90 ನೇ ವಯಸ್ಸಿನಲ್ಲಿ, ಅವರು ಇಂದು ಬೆಳಿಗ್ಗೆ ಕೇಪ್ ಟೌನ್‌ನಲ್ಲಿರುವ ಓಯಸಿಸ್ ಫ್ರೈಲ್ ಕೇರ್ ಸೆಂಟರ್‌ನಲ್ಲಿ ನಿಧನರಾದರು ಎಂದು ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ಐಪಿ ಟ್ರಸ್ಟ್‌ನ ಹಂಗಾಮಿ ಅಧ್ಯಕ್ಷೆ ಮತ್ತು ಆರ್ಚ್‌ಬಿಷಪ್ ಕಚೇರಿಯ ಸಂಯೋಜಕಿ ಡಾ ರಾಂಫೆಲಾ ಮಂಫೆಲೆ ಡಾ. ಟುಟು ಕುಟುಂಬದ ಪರವಾಗಿ ಹೇಳಿಕೆ ನೀಡಿದ್ದಾರೆ. ಆದಾಗ್ಯೂ, ಸಾವಿನ ಕಾರಣದ ಬಗ್ಗೆ ಆಕೆ ವಿವರ ನೀಡಿಲ್ಲ.
ವರ್ಣಭೇದ ನೀತಿಯ ಅಹಿಂಸಾತ್ಮಕ ಹೋರಾಟಕ್ಕಾಗಿ 1984 ರಲ್ಲಿ ಟುಟು ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಒಂದು ದಶಕದ ನಂತರ, ಅವರು ಆ ಆಡಳಿತದ ಅಂತ್ಯಕ್ಕೆ ಸಾಕ್ಷಿಯಾದರು. ಆ ಕರಾಳ ದಿನಗಳಲ್ಲಿ ಮಾಡಿದ ದೌರ್ಜನ್ಯಗಳನ್ನು ಬಹಿರಂಗಪಡಿಸಲು ಸ್ಥಾಪಿಸಲಾದ ಸತ್ಯ ಮತ್ತು ಸಾಮರಸ್ಯ ಆಯೋಗದ ಅಧ್ಯಕ್ಷರಾಗಿದ್ದರು ಟುಟು.
ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ನೆಲ್ಸನ್ ಮಂಡೇಲಾ ಅವರ ಸಮಕಾಲೀನರು ಟುಟು. 1948ರಿಂದ 1991 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ಬಹುಸಂಖ್ಯಾತರ ವಿರುದ್ಧ ಬಿಳಿ ಅಲ್ಪಸಂಖ್ಯಾತ ಸರ್ಕಾರವು ಜಾರಿಗೊಳಿಸಿದ ಜನಾಂಗೀಯ ಪ್ರತ್ಯೇಕತೆ ಮತ್ತು ತಾರತಮ್ಯದ ನೀತಿಯನ್ನು ಕೊನೆಗೊಳಿಸುವ ಚಳುವಳಿಯ ಹಿಂದಿನ ಪ್ರೇರಕ ಶಕ್ತಿಗಳಲ್ಲಿ ಒಬ್ಬರಾಗಿದ್ದರು ಇವರು.
ವರ್ಣಭೇದ ನೀತಿಯನ್ನು ನಿರ್ಮೂಲನೆ ಮಾಡುವ ಹೋರಾಟದಲ್ಲಿ ಅವರ ಪಾತ್ರಕ್ಕಾಗಿ ಅವರಿಗೆ 1984 ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಟುಟು ಅವರ ಮರಣವು ದಕ್ಷಿಣ ಆಫ್ರಿಕಾದ ಕೊನೆಯ ವರ್ಣಭೇದ ನೀತಿಯ ಯುಗದ ಅಧ್ಯಕ್ಷ ಎಫ್‌ಡಬ್ಲ್ಯೂ ಡಿ ಕ್ಲರ್ಕ್ ಅವರ 85 ನೇ ವಯಸ್ಸಿನಲ್ಲಿ ನಿಧನರಾದ ಕೆಲವೇ ವಾರಗಳ ನಂತರ ಸಂಭವಿಸಿದೆ. ಅಧ್ಯಕ್ಷ ರಮಾಫೋಸಾ ಅವರು”ಅಪ್ರತಿಮ ಆಧ್ಯಾತ್ಮಿಕ ನಾಯಕ, ವರ್ಣಭೇದ ನೀತಿ ವಿರೋಧಿ ಕಾರ್ಯಕರ್ತ ಮತ್ತು ಜಾಗತಿಕ ಮಾನವ ಹಕ್ಕುಗಳ ಪ್ರಚಾರಕರಾಗಿದ್ದರು ಟುಟು ಎಂದು ಹೇಳಿದರು.
ವರ್ಣಭೇದ ನೀತಿಯ ಶಕ್ತಿಗಳ ವಿರುದ್ಧ ಹೋರಾಡಿತ ಅಸಾಧಾರಣ ಬುದ್ಧಿವಂತಿಕೆಯ ವ್ಯಕ್ತಿ. ಅವರು ವರ್ಣಭೇದ ನೀತಿಯ ಅಡಿಯಲ್ಲಿ ದಬ್ಬಾಳಿಕೆ, ಅನ್ಯಾಯ ಮತ್ತು ಹಿಂಸೆಯನ್ನು ಅನುಭವಿಸಿದ ಮತ್ತು ಪ್ರಪಂಚದಾದ್ಯಂತ ತುಳಿತಕ್ಕೊಳಗಾದ ಮತ್ತು ದುರ್ಬಲ ಜನರ ಬಗ್ಗೆ ಸಹಾನುಭೂತಿ ಹೊಂದಿದ್ದರು ಎಂದು ರಮಾಫೋಸಾ ಹೇಳಿದ್ದಾರೆ.
ಇದನ್ನೂ ಓದಿ: Mann Ki Baat ಸ್ಕ್ರೀನ್ ಟೈಮ್ ಹೆಚ್ಚಾಗುತ್ತಿರುವ ಕಾಲದಲ್ಲಿ ಪುಸ್ತಕದ ಓದು ಜಾಸ್ತಿಯಾಗಲಿ: ನರೇಂದ್ರ ಮೋದಿ
Published On - 1:05 pm, Sun, 26 December 21