ಈ ಹಿಂದೆ ಜಗತ್ತಿನ ಆಗುಹೋಗುಗಗಳ ಕುರಿತು ಭವಿಷ್ಯ ನುಡಿದಿದ್ದ ಬಲ್ಗೇರಿಯಾದ ಬಾಬಾ ವಂಗಾ ಎನ್ನುವ ಕುರುಡು ವೃದ್ಧೆ 2022ರ ಕುರಿತೂ ಭವಿಷ್ಯ ಹೇಳಿದ್ದಾರೆ. ಈ ವರ್ಷ ಹಲವು ಏಷ್ಯನ್ ದೇಶಗಳು ಮತ್ತು ಆಸ್ಟ್ರೇಲಿಯಾ ದೇಶವು ತೀವ್ರವಾದ ಪ್ರವಾಹಕ್ಕೆ ತುತ್ತಾಗಲಿದೆ ಎಂದು ವಾಂಗಾ ಭವಿಷ್ಯದಲ್ಲಿ ನುಡಿದಿದ್ದಾರೆ. ಇನ್ನು ಕೊರೋನಾದಿಂದ ಮುಕ್ತವಾಗುತ್ತಿದ್ದಂತೆ ಸೈಬೀರಿಯಾದಲ್ಲಿ ಹೊಸದೊಂದು ಮಾರಣಾಂತಿಕ ವೈರಸ್ಅನ್ನು ಸಂಶೋಧಕರು ಪತ್ತೆ ಮಾಡಲಿದ್ದಾರೆ ಎಂದು ವಾಂಗಾ ಭವಿಷ್ಯ ನುಡಿದಿದ್ದಾರೆ. ಭಾರತದ ವಿಷಯವಾಗಿ, ಭಾರತದಲ್ಲಿ ಮಿಡತೆಗಳ ಹಿಂಡು ಬೆಳೆ ಮತ್ತು ಕೃಷಿ ಉತ್ಪನ್ನಗಳ ಮೇಲೆ ತೀವ್ರವಾದ ದಾಳಿ ನಡೆಸಲಿದ್ದು. ಅಪಾರ ಕ್ಷಾಮ ಉಂಟಾಗಲಿದೆ ಎಂದು ಅತೀಂದ್ರಿಯ ಶಕ್ತಿಯಿರುವ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ಪ್ರಪಂಚದ ಹಲವು ದೇಶಗಳು ನೀರಿನ ಬಿಕ್ಕಟ್ಟಿಗೆ ಸಿಲುಕಲಿದೆ, ನೀರಿನ ಕೊರೆತಯನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಎದುರಿಸಬಹುದು ಎಂದು ಹೇಳಿದ್ದಾರೆ.
ವರ್ಚುವಲ್ ರಿಯಾಲಿಟಿ ಬಗ್ಗೆಯೂ ಭವಿಷ್ಯ ನುಡಿದ ಬಾಬಾ ವಂಗಾ ಇತ್ತೀಚಿನ ವರ್ಷಗಳಲ್ಲಿ ವರ್ಚುವಲ್ ರಿಯಾಲಿಟಿ ಬಳಕೆಯು ಖಂಡಿತವಾಗಿಯೂ ಹೆಚ್ಚಾಗಿದೆ. ಆದರೆ 2022ರಲ್ಲಿ ಅದನ್ನು ನಿಜವಾಗಿಯೂ ಸ್ವಾಧೀನಪಡಿಸಿಕೊಳ್ಳಬಹುದು ಎಂದಿದ್ದಾರೆ. ಇದರ ಜತೆಗೆ ಭೂಮಿಯ ಮೇಲಿನ ಜೀವಿಗಳನ್ನು ಹುಡುಕಲು ಅನ್ಯಗ್ರಹ ಜೀವಿಗಳು Oumuamua ಎಂದು ಕರೆಯಲ್ಪಡುವ ಕ್ಷುದ್ರಗ್ರಹದ ಜೀವಿಗಳು ಭೂಮಿಗೆ ಬರಲಿವೆ ಎಂದು ಹೇಳಿದ್ದಾರೆ.
ಈ ಹಿಂದೆ ಬಾಬಾ ವಂಗಾ ನುಡಿದ ಹಲವು ಭವಿಷ್ಯಗಳು ನಿಜವಾಗಿವೆ. ಉದಾಹರಣಗೆ 9/11ರಭಯೋತ್ಪಾದಕ ದಾಳಿ ಮತ್ತು ಬ್ರಿಕ್ಸಿಟ್ ಅನ್ನು ಭವಿಷ್ಯವಾಗಿ ನುಡಿದಿದ್ದರು. ಜತೆಗೆ ಸೋವಿಯತ್ ಒಕ್ಕೂಟದ ವಿಸರ್ಜನೆ, ರಾಜಕುಮಾರಿ ಡಯಾನ ಅವರ ಸಾವು ಮತ್ತು 2004ರ ಥೈಲ್ಯಾಂಡ್ ಸುನಾಮಿ ಸೇರಿದಂತೆ ಬರಾಕ್ ಒಬಾಮ ಅವರ ಅಧ್ಯಕ್ಷತೆ ಬಗ್ಗೆಯೂ ಭವಿಷ್ಯ ನುಡಿದಿದ್ದರು ಅವುಗಳು ಸತ್ಯವಾಗಿದ್ದವೂ ಕೂಡ.
1911ರಲ್ಲಿ ಜನಿಸಿದ ಬಾಬ ವಾಂಗಾ 12 ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಂಭವಿಸಿ ದೃಷ್ಟಿ ಕಳೆದುಕೊಂಡಿದ್ದರು. ಅಂದಿನಿಂದ ತಾವು ಭವಿಷ್ಯವನ್ನು ನೋಡುವ ಅಪರೂಪದ ವಿದ್ಯೆಯನ್ನು ಸಿದ್ಧಿಪಡಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದರು. ಬಾಬಾ ವಂಗಾ ನಿಜವಾದ ಹೆಸರು ವಾಂಜಜೆಲಿಯಾ ಗುಶ್ವೇರೋವಾ ಎಂದು. ಅವರ ಈ ವಿಲಕ್ಷಣ ವಿದ್ಯೆಗಾಗಿ ಬಾಲ್ಕನ್ಸ್ ನಾಸ್ಟ್ರಾಡಾಮಸ್ ಎಂದು ಹೆಸರು ಪಡೆದಿದ್ದಾರೆ. 1996ರಲ್ಲಿ ಮರಣ ಹೊಂದಿದ ಬಾಬಾ ವಾಂಗಾ 5079ರವರೆಗೆ ನಡೆಯುವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು.
ಇದನ್ನೂ ಓದಿ:
‘ಚಿತ್ರರಂಗಕ್ಕೆ ಪುನೀತ್ ರೀತಿಯ ನಟ ಬೇಕು; ನಿಖಿಲ್ ಹೆಚ್ಚು ಸಿನಿಮಾ ಮಾಡಲಿ’: ಎಚ್.ಡಿ. ಕುಮಾರಸ್ವಾಮಿ