ನ್ಯೂ ಇಯರ್ ಸೆಲೆಬ್ರೇಷನ್​ಗೆ ಬ್ರೇಕ್! ಸರ್ಕಾರದ ನಿರ್ಧಾರಕ್ಕೆ ಹೋಟೆಲ್, ಪಬ್ ಮಾಲೀಕರು ಬೇಸರ

ನ್ಯೂ ಇಯರ್ ಸೆಲೆಬ್ರೇಷನ್​ಗೆ ಬ್ರೇಕ್! ಸರ್ಕಾರದ ನಿರ್ಧಾರಕ್ಕೆ ಹೋಟೆಲ್, ಪಬ್ ಮಾಲೀಕರು ಬೇಸರ
ಸಾಂಕೇತಿಕ ಚಿತ್ರ

ಹೋಟೆಲ್, ಪಬ್, ರೆಸ್ಟೋರೆಂಟ್​ಗೆ ಶೇಕಡಾ 50 ರಷ್ಟು ಮಿತಿ ಹೇರಿದ ಹಿನ್ನೆಲೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ನ್ಯೂ ಇಯರ್ ಹಿನ್ನೆಲೆ ಈಗಗಾಲೇ ಶೇಕಡಾ 100ರಷ್ಟು ಬುಕಿಂಗ್ ಮಾಡಿಕೊಂಡಿದ್ದಾರೆ.

TV9kannada Web Team

| Edited By: sandhya thejappa

Dec 26, 2021 | 12:25 PM

ಬೆಂಗಳೂರು: ರಾಜ್ಯದಲ್ಲಿ ಸದ್ಯ ಕೊರೊನಾ ರೂಪಾಂತರಿ ಒಮಿಕ್ರಾನ್ (Omicron) ವೈರಸ್ ಆತಂಕ ಮನೆಮಾಡಿದೆ. ದಿನದಿಂದ ದಿನಕ್ಕೆ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಸಭೆ ನಡೆಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದೇ 28ರಿಂದ ಜನವರಿ 7ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶ ನೀಡಿದೆ. ಅಲ್ಲದೇ ಡಿಸೆಂಬರ್ 30ರಿಂದ ಜನವರಿ 2ರವರೆಗೆ ಹೋಟೆಲ್, ಕ್ಲಬ್, ಪಬ್, ರೆಸ್ಟೋರೆಂಟ್ಗಳಿಗೆ 50:50 ನಿಯಮ ಜಾರಿಗೊಳಿಸಿದೆ.

ಹೋಟೆಲ್, ಪಬ್, ರೆಸ್ಟೋರೆಂಟ್​ಗೆ ಶೇಕಡಾ 50 ರಷ್ಟು ಮಿತಿ ಹೇರಿದ ಹಿನ್ನೆಲೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ನ್ಯೂ ಇಯರ್ ಹಿನ್ನೆಲೆ ಈಗಗಾಲೇ ಶೇಕಡಾ 100ರಷ್ಟು ಬುಕಿಂಗ್ ಮಾಡಿಕೊಂಡಿದ್ದಾರೆ. ಆದರೆ ಬುಕಿಂಗ್ ಕ್ಯಾನ್ಸಲ್ ಮಾಡಿದರೆ ನಷ್ಟದ ಜತೆಗೆ ಸಮಸ್ಯೆಯಾಗುತ್ತೆ ಅಂತ ಮಾಲೀಕರು ಹೇಳುತ್ತಿದ್ದಾರೆ.

ನೈಟ್ ಕರ್ಫ್ಯೂ ಜಾರಿಗೆ ಬೇಸರ ವ್ಯಕ್ತಪಡಿಸಿರುವ ಪಬ್ ಮಾಲೀಕರು, ಲೈಫ್​ನಲ್ಲಿಯೇ 10 ಗಂಟೆಯೊಳಗೆ ಯಾವತ್ತು ನ್ಯೂ ಇಯರ್ ಸೆಲೆಬ್ರೇಷನ್ ಮಾಡಿಲ್ಲ. ನ್ಯೂ ಇಯರ್ ಸೆಲೆಬ್ರೇಷನ್ ಎಲ್ಲರಿಗೂ ಒಂದು ಸಂತಸದ ಆಚರಣೆ. ಈ ರೂಲ್ಸ್​ನಿಂದ ಹೋಟೆಲ್, ಪಬ್, ಮಾಲೀಕರಿಗೆ ನಷ್ಟವಾಗುತ್ತದೆ. 70 ಸಾವಿರ ಕಾರ್ಮಿಕರಿಗೆ ಈ ರೂಲ್ಸ್ ಆರ್ಥಿಕ ನಷ್ಟವಾಗುವ ಸಂಕಷ್ಟ ಎದುರಾಗಿದೆ ಅಂತ ಹೇಳಿದರು.

50:50 ನಿಯಮಗಳಿಂದ ಕೊರೊನಾ ಹರಡೊದಿಲ್ಲವಾ? ಎಂದು ಪ್ರಶ್ನಿಸಿರುವ ಪಬ್ ಮಾಲೀಕರ ಅಸೋಷಿಯೇಶನ್ ಸದಸ್ಯ ಕಿರಣ್ ರಾಜ್, ಈ ವರ್ಷದ ಆಚರಣೆಗೆ ತುಂಬಾ ನಿರೀಕ್ಷೆ ಇತ್ತು. ಪಬ್, ಬಾರ್ ಹಾಗೂ ಹೋಟೆಲ್​ಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸರ್ಕಾರ ಕೊನೆಗಳಿಗೆಯಲ್ಲಿ ಈ ನಿಯಮ ಮಾಡಿರುವುದು ಸರಿ ಇಲ್ಲ. ಸರ್ಕಾರದ ಈ ನಿರ್ಧಾರ ನಿರಾಸೆ ತಂದಿದೆ. ಸರ್ಕಾರದ ನಿರ್ಧಾರಗಳನ್ನ ನಾವು ಸ್ವಾಗತ ಮಾಡುತ್ತೇವೆ. ಆದರೆ ಈ ನಿಯಮ ಮೊದಲೇ ಜಾರಿಗೆ ತಂದಿದ್ದರೆ ನಾವು ಯಾವುದೇ ಪ್ಲ್ಯಾನ್ ಮಾಡುತ್ತಿರಲಿಲ್ಲ ಅಂತ ಬೇಸರ ಹೊರಹಾಕಿದ್ದಾರೆ.

30 ಹಾಗೂ 31 ಎರಡು ದಿನ ನಮಗೆ 11 ಗಂಟೆವರೆಗೂ ಅವಕಾಶ ಕೊಡಬೇಕಿತ್ತು. ನಾವು ಈಗಾಗಲೇ ಹೊಸ ವರ್ಷಕ್ಕೆ ರೆಡಿ ಆಗಿದ್ದೆವು. ಸರ್ಕಾರದ ಆದೇಶ ನಮಗೆ ದಿಗ್ಭ್ರಮೆ ಮೂಡಿಸಿದೆ. ಈಗಾಗಲೇ ಬೇಕರಿಯವರು ಕೇಕ್ ರೆಡಿ ಮಾಡಿ ಇಟ್ಟಿದ್ದಾರೆ. ಕೆಲವರು ಆರ್ಡರ್ ಕೊಟ್ಟಿದ್ದಾರೆ. ಇದು ನಮಗೆ ದೊಡ್ಡ ಸಮಸ್ಯೆ ಆಗಿದೆ. ಸರ್ಕಾರ ಎರಡು ದಿನ ನಮಗೆ ಅವಕಾಶ ಕೊಡಬೇಕು. ನಾವು ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇವೆ. ರಾಜಕಾರಣ ಕಾರ್ಯಕ್ರಮದಲ್ಲಿ ಅವಕಾಶವಿತ್ತು. ಇದೀಗ ದಿಢೀರ್ ಆಗಿ ನಿರ್ಧಾರ ಮಾಡಿದ್ದು ನಮಗೆ ದೊಡ್ಡ ಆಘಾತ ತಂದಿದೆ ಅಂತ ಬಳ್ಳಾರಿ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಗುರುರಾಜ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆಟೋ ಚಾಲಕರು ವಿರೋಧ ನೈಟ್ ಕರ್ಫ್ಯೂ ಜಾರಿಗೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ನೈಟ್ ಕರ್ಫ್ಯೂ ಇಂದ ಆಟೋ ಉದ್ಯಮಕ್ಕೆ ಮತ್ತಷ್ಟು ಹೊಡೆದ ಬೀಳುತ್ತದೆ. ಸರ್ಕಾರ ಮತ್ತೊಮ್ಮೆ ಪರಿಶೀಲನೆ ಮಾಡಿ ಕರ್ಫ್ಯೂ ಬಗ್ಗೆ ನಿರ್ಧಾರ ಮಾಡಬೇಕು. ಈಗಲೇ ಸಾಕಷ್ಟು ಸಂಕಷ್ಟದಲ್ಲಿ ಇದ್ದೇವೆ, ಮತ್ತೆ ನೈಟ್ ಕರ್ಫ್ಯೂ ಜಾರಿಯಾದರೆ ಯಾವ ರೀತಿ ಜೀವನ ನಡೆಸುವುದು. ಮೊದಲೆ ಬಾಡಿಗೆ ಇಲ್ಲ. ಜೀವನಕ್ಕೆ ಏನು ಮಾಡಬೇಕು.  ಹೊಸವರ್ಷದ ಸಮಯದಲ್ಲಿ ರಾಜ್ಯಗಳಿಂದ, ಜಿಲ್ಲೆಗಳಿಂದ ಸಾಕಷ್ಟು ಜನ ಬೆಂಗಳೂರಿಗೆ ಬರುತ್ತಾರೆ. ಇದರಿಂದ ನಮಗೆ ದುಡಿಮೆ ಕೂಡ ಹೆಚ್ಚಾಗುತ್ತದೆ. ಅದರೆ‌ ಕರ್ಫ್ಯೂ ಇಂದ ಜನ ಹೊರಗೆ ಬರಲ್ಲ ‌ನಮಗೆ ಬಾಡಿಗೆ ಆಗೋದಿಲ್ಲ. ಒಮಿಕ್ರಾನ್ ಹೆಚ್ಚು ಇರುವ ಜಾಗದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿ ಅಂತ ಆಟೋ ಚಾಲಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ

ನ್ಯೂ ಇಯರ್​​ ಪಾರ್ಟಿಗೆ ರಾಧಿಕಾ ಕುಮಾರಸ್ವಾಮಿ ರಂಗು; ಕಲರ್ಸ್​ ಕನ್ನಡದಲ್ಲಿ ಮಸ್ತ್​ ಡ್ಯಾನ್ಸ್​

ಪ್ರವಾಸಿಗರ ಮನ ಸೆಳೆಯುತ್ತಿದೆ ಗಗನಚುಕ್ಕಿ ಜಲಪಾತ, ಸೌಂದರ್ಯ ರಾಶಿ ಕಣ್ತುಂಬಿಕೊಳ್ಳಲು ಬಂದ ದಂಡು

Follow us on

Most Read Stories

Click on your DTH Provider to Add TV9 Kannada