ಪ್ರವಾಸಿಗರ ಮನ ಸೆಳೆಯುತ್ತಿದೆ ಗಗನಚುಕ್ಕಿ ಜಲಪಾತ, ಸೌಂದರ್ಯ ರಾಶಿ ಕಣ್ತುಂಬಿಕೊಳ್ಳಲು ಬಂದ ದಂಡು
ಹಸಿರು ಹೊದ್ದು ನಿಂತಿರುವ ಬೆಟ್ಟದ ಮಧ್ಯೆ ಜಲರಾಶಿ ಧುಮ್ಮಿಕ್ಕುವ ಸೌಂದರ್ಯ ವರ್ಣಿಸಲಾಗದು. ಪ್ರಕೃತಿ ವಿಸ್ಮಯವನ್ನ ಪದಗಳಲ್ಲಿ ಬಣ್ಣಿಸಲಾಗದು ಅಂಥಾ ಸೊಬಗಿನ ತಾಣವೇ ಗಗನಚುಕ್ಕಿ ಜಲಪಾತ.
ಮಂಡ್ಯ: ಭೂಮಿ ಮೇಲಿನ ಸ್ವರ್ಗ.. ಪ್ರವಾಸಿಗರ ಮನಸೂರೆಗೊಳಿಸುವ ಪ್ರಕೃತಿ ಸೊಬಗು. ಗುಡ್ಡದ ಮೇಲಿನ ಕಲ್ಲು, ಬಂಡೆಗಳನ್ನು ಸೀಳಿಕೊಂಡು ನೀರು ಭೋರ್ಗರೆದು ಧುಮ್ಮಿಕ್ಕುತ್ತಿದ್ರೆ, ಆ ಸೌಂದರ್ಯ ರಾಶಿ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು.
ಹಸಿರು ಹೊದ್ದು ನಿಂತಿರುವ ಬೆಟ್ಟದ ಮಧ್ಯೆ ಜಲರಾಶಿ ಧುಮ್ಮಿಕ್ಕುವ ಸೌಂದರ್ಯ ವರ್ಣಿಸಲಾಗದು. ಪ್ರಕೃತಿ ವಿಸ್ಮಯವನ್ನ ಪದಗಳಲ್ಲಿ ಬಣ್ಣಿಸಲಾಗದು ಅಂಥಾ ಸೊಬಗಿನ ತಾಣವೇ ಗಗನಚುಕ್ಕಿ ಜಲಪಾತ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿದೆ. ಕಾವೇರಿ ಹಾಗೂ ಕಬಿನಿ ಡ್ಯಾಂಗಳಿಂದ ನೀರು ಹರಿಬಿಡಲಾಗ್ತಿದ್ದು, ಜಲಪಾತ ರುದ್ರ ರಮಣೀಯ ರೂಪ ಪಡೆದಿದೆ. ಇಂತಹ ಸುಂದರ ಪ್ರಕೃತಿ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರ್ತಿದೆ. ಅದ್ರಲ್ಲೂ ಕ್ರಿಸ್ಮಸ್ ಮತ್ತು ವೀಕೆಂಡ್ ಆಗಿರೋದ್ರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು, ನಯನ ಮನೋಹರ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡ್ತಿದ್ದಾರೆ.
ಮತ್ತೊಂದ್ಕಡೆ, ಜಲಪಾತವನ್ನು ಹತ್ತಿರದಿಂದ ನೋಡಲು ಸರ್ಕಾರ ಕೆಲಸ ಕೈಗೆತ್ತಿಕೊಂಡಿತ್ತು. ಪ್ರವಾಸಿಗರ ಒತ್ತಾಸೆಯಂತೆ, 4 ಕೋಟಿ ರೂಪಾಯಿ ವೆಚ್ಚದಲ್ಲಿ ಗಗನಚುಕ್ಕಿ ಜಲಪಾತವನ್ನ ಅಭಿವೃದ್ಧಿಪಡಿಸಲು ಕೆಲಸ ಆರಂಭಿಸಿತ್ತು. ಜಲಪಾತದ ಸಮೀಪಕ್ಕೆ ಹೊಂದಿಕೊಂಡಂತೆ 3 ಸ್ಟೆಪ್ಸ್ ನಿರ್ಮಿಸಿ, ಸಾವಿರ ಜನರು ಒಂದೇ ಬಾರಿಗೆ ಜಲಪಾತದೆದುರು ಕುಳಿತು ಪ್ರಕೃತಿ ಸೌಂದರ್ಯ ಸವಿಯಲು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. ಆದ್ರೀಗ, ಆ ಕೆಲಸ ವಿಳಂಬವಾಗ್ತಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ಇನ್ನು ಒಮಿಕ್ರಾನ್ ಕಂಟಕ ಹೆಚ್ಚಾಗ್ತಿದೆ. ಕೊರೊನಾ ಕೂಡ ಅಬ್ಬರಿಸುತ್ತಿದೆ. ಇಂಥಾ ಹೊತ್ತಲ್ಲಿ ಪ್ರವಾಸಿಗರು ಕೊವಿಡ್ ರೂಲ್ಸ್ ಪಾಲಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಪ್ರಕೃತಿ ಸೌಂದರ್ಯ ಸವಿಯುವ ಭರದಲ್ಲಿ ಮೈಮರೆಯುತ್ತಿದ್ದಾರೆ ಅಂತಾ ಸ್ಥಳೀಯರು ಆತಂಕ ವ್ಯಕ್ತಪಡಿಸ್ತಿದ್ದಾರೆ. ಹೀಗಾಗಿ, ಪ್ರವಾಸಿಗರು ಕೊಂಚ ಎಚ್ಚರಿಕೆ ವಹಿಸೋದು ಒಳ್ಳೇದು.
ವರದಿ: ರವಿ ಲಾಲಿಪಾಳ್ಯ, ಟಿವಿ9, ಮಂಡ್ಯ.