ಮಂಡ್ಯ: ನಾಟಿಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆ; 2.5 ಕೆಜಿ ಮುದ್ದೆ ತಿಂದು ಗೆದ್ದ ಕೆಂಪರಾಜು! ವಿಡಿಯೋ ನೋಡಿ
2.2 ಕೆಜಿ ಮುದ್ದೆ ತಿಂದು ಹುಲ್ಕೇರೆ ಪ್ರಶಾಂತ್ ಮೂರನೇ ಬಹುಮನ ಪಡೆದಿದ್ದಾರೆ. 2.1 ಕೆಜಿ ಮುದ್ದೆ ತಿಂದು ಹನಿಯಂಬಾಡಿ ಮಹೇಶ್ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಗಮನ ಸೆಳೆದ ನಾಟಿಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ವಿಶೇಷ ಸ್ಪರ್ಧೆ ನಡೆದಿದೆ. ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ನಡೆದ ಗ್ರಾಮೀಣ ಕ್ರೀಡೆ ಹಲವರ ಗಮನ ಸೆಳೆದಿದೆ. ಗ್ರಾಮದ ವಿಶ್ವೇಶ್ವರಯ್ಯ ಯುವಕರ ಬಳಗದಿಂದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಗ್ರಾಮೀಣ ಕ್ರೀಡೆಯಲ್ಲಿ 50 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.
2.5 ಕೆಜಿ ಮುದ್ದೆ ತಿಂದ ಮೊತ್ತಹಳ್ಳಿ ಕೆಂಪರಾಜು ಮೊದಲ ಬಹುಮಾನ ಪಡೆದುಕೊಂಡಿದ್ದಾರೆ. 2.3 ಕೆಜಿ ಮುದ್ದೆ ತಿಂದ ಹುಣಸಹಳ್ಳಿಯ ಶಿವಣ್ಣ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. 2.2 ಕೆಜಿ ಮುದ್ದೆ ತಿಂದು ಹುಲ್ಕೇರೆ ಪ್ರಶಾಂತ್ ಮೂರನೇ ಬಹುಮನ ಪಡೆದಿದ್ದಾರೆ. 2.1 ಕೆಜಿ ಮುದ್ದೆ ತಿಂದು ಹನಿಯಂಬಾಡಿ ಮಹೇಶ್ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದವರಿಗೆ 5,001 ರೂಪಾಯಿ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ಗೆದ್ದವರಿಗೆ 3001 ರೂಪಾಯಿ ಮತ್ತು ಟ್ರೋಫಿ, ತೃತೀಯ ಬಹುಮಾನವಾಗಿ ಗೆದ್ದವರಿಗೆ 1001 ರೂಪಾಯಿ ಮತ್ತು ಟ್ರೋಫಿ ನೀಡಲಾಗಿದೆ. ಸಮಾಧಾನಕರ ಬಹುಮಾನ ಪಡೆದವರಿಗೆ ಕೂಡ ಬಹುಮಾನ ವಿತರಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಕೊತ್ತತ್ತಿಯಲ್ಲಿ ಗ್ರಾಮೀಣ ಕೂಟ ಗಮನ ಸೆಳೆದಿದೆ. ನಾಟಿಕೋಳಿ ಸಾರು ಮುದ್ದೆ ತಿನ್ನುವ ಸ್ಪರ್ಧೆಯನ್ನು ನೂರಾರು ಜನರು ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಶೋಭಾ ಕರಂದ್ಲಾಜೆ ನಾಟಿ ಮಾಡಿದ್ದ ಭತ್ತವನ್ನ ಕೂಯ್ಲು ಮಾಡಿದ ಬಿಜೆಪಿ ಕಾರ್ಯಕರ್ತರು
ಇದನ್ನೂ ಓದಿ: ಮಂಡ್ಯ: ಅಪ್ರಾಪ್ತ ಬಾಲಕಿಯ ಸಾವಿನ ಸುತ್ತ ಅನುಮಾನದ ಹುತ್ತ; ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಪೋಷಕರ ಆರೋಪ
Published On - 5:00 pm, Sun, 26 December 21