ಮಂಡ್ಯ: ಅಪ್ರಾಪ್ತ ಬಾಲಕಿಯ ಸಾವಿನ ಸುತ್ತ ಅನುಮಾನದ ಹುತ್ತ; ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಪೋಷಕರ ಆರೋಪ
ಕಳೆದ 15 ದಿನಗಳ ಹಿಂದೆ ಹೊಟ್ಟೆ ನೋವಿನ ಕಾರಣಕ್ಕೆ ಬಾಲಕಿಯನ್ನು ಆಸ್ಪತ್ರೆಗೆ ತಾಯಿ ಕರೆದೊಯ್ದಿದ್ದರು. ವೈದ್ಯಕೀಯ ಪರೀಕ್ಷೆ ಬಳಿಕ ಬಾಲಕಿ ಗರ್ಭಿಣಿ ಎಂಬುದನ್ನು ವೈದ್ಯರು ಧೃಡಪಡಸಿದ್ದರು. ತನ್ನ ಅಪ್ರಾಪ್ತ ಮಗಳು ಗರ್ಭಿಣಿ ಎಂಬ ವಿಚಾರ ತಿಳಿದು ತಾಯಿ ಕೂಡ ಕುಸಿದು ಬಿದ್ದಿದ್ದರು.
ಮಂಡ್ಯ: ಡಿಸೆಂಬರ್ 16 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಇದು ಮೇಲ್ನೋಟಕ್ಕೆ ಆತ್ಮಹತ್ಯೆ (Suicide) ರೀತಿಯಲ್ಲಿ ಕಂಡಿದ್ದರಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಅಪ್ರಾಪ್ತ ಬಾಲಕಿ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಮಾಜಿ ಸಿಎಂ ಯಡಿಯೂರಪ್ಪ ಹುಟ್ಟೂರು ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಈ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ 14 ವರ್ಷದ ಬಾಲಕಿಯ ಪೋಷಕರು (Parents) ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಕಳೆದ 15 ದಿನಗಳ ಹಿಂದೆ ಹೊಟ್ಟೆ ನೋವಿನ ಕಾರಣಕ್ಕೆ ಬಾಲಕಿಯನ್ನು ಆಸ್ಪತ್ರೆಗೆ ತಾಯಿ ಕರೆದೊಯ್ದಿದ್ದರು. ವೈದ್ಯಕೀಯ ಪರೀಕ್ಷೆ ಬಳಿಕ ಬಾಲಕಿ ಗರ್ಭಿಣಿ ಎಂಬುದನ್ನು ವೈದ್ಯರು ಧೃಡಪಡಸಿದ್ದರು. ತನ್ನ ಅಪ್ರಾಪ್ತ ಮಗಳು ಗರ್ಭಿಣಿ ಎಂಬ ವಿಚಾರ ತಿಳಿದು ತಾಯಿ ಕೂಡ ಕುಸಿದು ಬಿದ್ದಿದ್ದರು. ಬಳಿಕ ಪಕ್ಕದ ಮನೆಯ ನಿವಾಸಿ ನೀಡಿದ್ದ ಲೈಂಗಿಕ ದೌರ್ಜನ್ಯ ಕುರಿತು ತಾಯಿ ಬಳಿ ಅಪ್ರಾಪ್ತ ಮಗಳು ಹೇಳಿಕೊಂಡಿದ್ದಳು. ಆದರೆ ಆರೋಪಿ ಸವರ್ಣೀಯ ಎಂಬ ಕಾರಣಕ್ಕೆ ಮರ್ಯಾದೆಗೆ ಹೆದರಿ ತಾಯಿ ವಿಚಾರ ಮುಚ್ಚಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಗ್ರಾಮ ಪಂಚಾಯತಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ತಾಯಿ ಮೊನ್ನೆ ರಾತ್ರಿ ಕೆಲಸದಿಂದ ವಾಪಾಸ್ಸಾಗುವ ಮೊದಲು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ. ಹೀಗಾಗಿ ಆತ್ಮಹತ್ಯೆ ಅಲ್ಲ. ಇದು ಕೊಲೆ ಎಂದು ತಾಯಿ ಮತ್ತು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಅಲ್ಲದೇ 50 ವರ್ಷದ ಪರಮೇಶ್ ಎಂಬಾತನಿಂದ ಬಾಲಕಿಯ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿದ್ದಾರೆ.
ವಿಚಾರ ಬೆಳಕಿಗೆ ಬಂದರೆ ತಾನು ತಪ್ಪಿತಸ್ಥ ಆಗುತ್ತೀನಿ ಎಂಬ ಭಯದಿಂದ ಮಗಳನ್ನು ಕೊಲೆ ಮಾಡಿದ್ದಾನೆಂದು ಪರಮೇಶ್ ಕೊಲೆ ಮಾಡಿದ್ದಾನೆ ಎಂದು ಆತನ ವಿರುದ್ಧ ಆರೋಪ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Crime News: ಅಪ್ರಾಪ್ತೆ ಅತ್ಯಾಚಾರ; ಮೂವರ ಬಂಧನ, ಆತ್ಮಹತ್ಯೆಗೆ ಯತ್ನಿಸಿದ್ದ ಪತ್ನಿ ಸಾವಿನ ಸುದ್ದಿ ತಿಳಿದು ಪತಿ ನೇಣಿಗೆ ಶರಣು
ಅತ್ಯಾಚಾರ ಸಂತ್ರಸ್ತೆ ಬಲವಂತದ ಗರ್ಭ ಹೊರಬೇಕಿಲ್ಲ: ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ
Published On - 9:25 am, Sat, 18 December 21