ಕಾವೇರಿ ಕಿಚ್ಚು; ಅಕ್ಟೋಬರ್ 10 ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬಂದ್; ವಾಟಾಳ್​ ನಾಗರಾಜ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 03, 2023 | 9:01 PM

ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಹಾಕಿದ್ದು, ಅರ್ಜಿ ಏನಾಯ್ತು? ಅಲ್ಲಿಯವರೆಗೆ ನೀರು ಏನಾಗ್ತಿದೆ ಎಂಬುದರ ಕುರಿತು ಸತ್ಯ ಬೇಕು. ಈ ಹಿನ್ನಲೆ ಅಕ್ಟೋಬರ್ 10ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಧರಣಿ ಮಾಡುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಹೇಳಿದ್ದಾರೆ.

ಕಾವೇರಿ ಕಿಚ್ಚು; ಅಕ್ಟೋಬರ್ 10 ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬಂದ್; ವಾಟಾಳ್​ ನಾಗರಾಜ್​
ವಾಟಾಳ್​ ನಾಗರಾಜ್​
Follow us on

ಬೆಂಗಳೂರು, ಅ.03:  ಕಾವೇರಿ ನೀರು ವಿವಾದ ‘ತಮಿಳುನಾಡಿನವರು ಬಹಳ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇದು ಬಹಳ ನೋವಾಗುತ್ತೆ, ಕೆಆರ್​ಎಸ್​(KRS)ನಲ್ಲಿ ಪ್ರಾಮಾಣಿಕವಾಗಿ ನೀರಿಲ್ಲ. ಜಲಸಂಪನ್ಮೂಲ ಸಚಿವರು ಅಷ್ಟು ಬಂತು, ಇಷ್ಟು ಬಂತು ಎಂದು ಅದೇನೋ ಹೇಳ್ತಾರೆ ಪಾಪ, ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು, ಯಾವುದೋ ದೇಶದ ಮೇಲೆ ಯುದ್ದ ಮಾಡಿದಂತೆ ಆಡುತ್ತಾರೆ. ಬೇಕಾದರೆ, ತಮಿಳುನಾಡಿನ ಜನರು ಮಾರುವೇಶದಲ್ಲಿ ಬಂದು ಕೆಆರ್​ಎಸ್​ ರೌಂಡ್ ಹಾಕಿಕೊಂಡು ಹೋಗಲಿ ಎಂದು ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್(Vatal Nagaraj) ಹೇಳಿದರು.

ಅಕ್ಟೋಬರ್  10 ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬಂದ್

ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಹಾಕಿದ್ದು, ಅರ್ಜಿ ಏನಾಯ್ತು? ಅಲ್ಲಿಯವರೆಗೆ ನೀರು ಏನಾಗ್ತಿದೆ ಎಂಬುದರ ಕುರಿತು ಸತ್ಯ ಬೇಕು. ಈ ಹಿನ್ನಲೆ ಅಕ್ಟೋಬರ್ 10ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಧರಣಿ ಮಾಡುತ್ತೇವೆ. ನಾನು ತಮಿಳುನಾಡಿಗೆ ಗಂಭೀರವಾಗಿ ಹೇಳ್ತಿನಿ, ರಾಜಕೀಯ ಮಾಡ್ತಿದ್ದೀರ, ಅದು ಬೇಡ. ನಿಮ್ಮನ್ನ ನಾವು ಕೆಟ್ಟದಾಗಿ ನೋಡಬೇಕಾಗುತ್ತೆ. ಪಳನಿಸ್ವಾಮಿ ಕೂಡ ಬೀದಿಗೆ ಇಳಿದಿದ್ದಾರೆ. ಇದನ್ನ ಕರ್ನಾಟಕದ ಜನತೆ ಗಂಭೀರವಾಗಿ ಚಿಂತನೆ ಮಾಡಬೇಕು ಎಂದರು.

ಇದನ್ನೂ ಓದಿ:12 ವರ್ಷಗಳಲ್ಲಿ 2ನೇ ಬಾರಿಗೆ ಕೆಆರ್​ಎಸ್ ನೀರಿನ ಮಟ್ಟದಲ್ಲಿ ಭಾರಿ ಕುಸಿತ

ಅಕ್ಟೋಬರ್​ 5 ರಂದು ಬೆಂಗಳೂರಿನಿಂದ ಕೆಆರ್‌ಎಸ್‌ವರೆಗೆ ದೊಡ್ಡ ಮೆರವಣಿಗೆ

ಯಾರಿಗೂ ಗಂಭೀರತೆ ಇಲ್ಲ, ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ನಾವು ತಮಿಳುನಾಡಿನ ತಪ್ಪು, ಬ್ಲಾಕ್ ಮೇಲ್, ಸ್ಟಾಲಿನ್ ಸರ್ಕಾರದ ವಿರುದ್ದ ಅಕ್ಟೋಬರ್​ 5 ರಂದು ಬೆಂಗಳೂರಿನಿಂದ ಕೆಆರ್‌ಎಸ್‌ವರೆಗೆ ಬಾರಿ ದೊಡ್ಡ ಮೆರವಣಿಗೆ ಹಮ್ಮಿಕೊಂಡಿದ್ದೇವೆ. ನಮ್ಮಲ್ಲಿ ನೀರಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇವೆ. ಕೆಆರ್‌ಎಸ್​ನಲ್ಲಿ ಕನ್ನಡ ಒಕ್ಕೂಟದ ಮೇಳ ಮಾಡಲಿದ್ದು, ನೂರಾರು ವಾಹನಗಳಲ್ಲಿ ತೆರಳಿ ಕನ್ನಡ ಒಕ್ಕೂಟದ ಮೇಳ, ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ ಕರಾಳ ದಿನ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಸಂಸದರು ಈಗಲಾದರೂ ಧೈರ್ಯ ಮಾಡಿ ರಾಜೀನಾಮೆ ಕೊಡಿ

ಇನ್ನು ಆರು ತಿಂಗಳಲ್ಲಿ ಎಲೆಕ್ಷನ್ ಬರುತ್ತೆ, ಸಂಸದರು ಧೈರ್ಯ ಮಾಡಿ ರಾಜೀನಾಮೆ ಕೊಡಿ. ಇದರಿಂದ ಶಕ್ತಿ, ಗೌರವ ಬರುತ್ತೆ. ಪ್ರಧಾನಿಯವರು ಎರಡೂ ರಾಜ್ಯದವರನ್ನ‌ಕರೆಸಿ ಮಾತನಾಡಿ, ಅದಕ್ಕೂ ಮುನ್ನ ನಿಮ್ಮದೇ ಆದ ಒಂದು ತಂಡ ಕಳಿಸಿ ವರದಿ ಪಡೆಯಿರಿ. ಕಾವೇರಿ ವಿಚಾರದಲ್ಲಿ ರಾಜಕೀಯ ಆಟ ಬೇಡ. ಪ್ರಧಾನಿಯವರು ಇಬ್ಬರೂ ಸಿಎಂ ಅವರನ್ನು ಕರೆಸಿ ಮಾತನಾಡಿ. ನಗೇನು ಗೊತ್ತಿಲ್ಲ ಅನ್ನೋದು ಬೇಡ. ಹಿಂದೆಲ್ಲಾ ಪ್ರಧಾನಿಗಳು ಸಮಸ್ಯೆ ಬಗೆ ಹರಿಸಿದ್ದಾರೆ. ಈಗ ಸಂಕಷ್ಟ , ನೀರಿಲ್ಲ  ಹೀಗಿರುವಾಗ ಏನ್ ಮಾಡಬೇಕು.
ಸಂಕಷ್ಟ ಸೂತ್ರದ ಬಗ್ಗೆ ತೀರ್ಮಾನ ಆಗಬೇಕು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ