Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಿದಾಗುತ್ತಿದೆ ಕಾವೇರಿ ಒಡಲು; ಬೆಂಗಳೂರಿನ ಅಪಾರ್ಟ್ಮೆಂಟ್​ಗಳಿಗೆ ಶುರುವಾಯ್ತು ನೀರಿನ ಭಯ

ರಾಜಾಧಾನಿ ಬೆಂಗಳೂರಿನ ಅಪಾರ್ಟ್ಮೆಂಟ್​ಗಳಿಗೆ ಸಧ್ಯ ವಾರಕ್ಕೊಮ್ಮೆ, ಎರಡು ದಿನಕ್ಕೆ ಒಮ್ಮೆ ನೀರು ಬಿಡುತ್ತಿದ್ದಾರೆ. ನೀರು ಬರ್ಲಿಲ್ಲ ಅಂದರೆ ಟ್ಯಾಂಕರ್ ಮೊರೆ ಹೋಗಲಾಗುತ್ತೆ. ಅದಲ್ಲದೇ ಟ್ಯಾಂಕರ್ ಗಳಿಗೆ ತುಂಬ ಹಣವನ್ನ ಕೂಡ ನಿಗದಿ ಮಾಡಲಾಗಿದೆ.‌ ಇದು ಜನರಿಗೆ ಮತ್ತೊಂದು ಹೊಡೆತ ಕೊಡುತ್ತಿದೆ. ಇನ್ನು ಎಲ್ಲಾ ಸಂಧರ್ಭದಲ್ಲಿ ಬೊರೆವೆಲ್ ನೀರನ್ನ ಬಳಸುವುದಕ್ಕೆ ಆಗೋದಿಲ್ಲ.

ಬರಿದಾಗುತ್ತಿದೆ ಕಾವೇರಿ ಒಡಲು; ಬೆಂಗಳೂರಿನ ಅಪಾರ್ಟ್ಮೆಂಟ್​ಗಳಿಗೆ ಶುರುವಾಯ್ತು ನೀರಿನ ಭಯ
ಬೆಂಗಳೂರಿನ ಅಪಾರ್ಟ್ಮೆಂಟ್​
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Oct 04, 2023 | 6:59 AM

ಬೆಂಗಳೂರು, ಅ.04: ಒಂದು ಕಾವೇರಿ ನೀರಿನ ವಿವಾದ (Cauvery Water Dispute) ಕಡ್ಗಿಚ್ಚಾಗಿ ಹೆಚ್ಚಾಗುತ್ತಿದೆ.‌ ಮತ್ತೆಂದೆಡೆ ನಗರದ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳಿಗೆ (Apartment Association) ನೀರಿನ ಕೊರತೆಯಾಗುವ ಭಯ ಶುರುವಾಗಿದೆ. ರಾಜ್ಯ ರಾಜಾಧಾನಿಯಲ್ಲಿ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನ ವಿರೋಧಿಸಿ ಒಂದು ಕಡೆ ಬಂದ್, ಪ್ರತಿಭಟನೆಗಳು ನಡೆಯುತ್ತಿವೆ.‌ ಮತ್ತೊಂದೆಡೆ ನಗರದ ಬಹುತೇಕ ಜನರು ವಾಸಿಸುವ ಹೈಫೈ ಅಪಾರ್ಟ್ಮೆಂಟ್ ಮಾಲೀಕರಿಗೆ ನೀರಿನ ಕೊರತೆಯಾಗುವ (Water Crisis) ಭಯ ಶುರುವಾಗಿದ್ದು, ಕೊರತೆಯಾಗದಂತೆ ಮುಂದೆ ಏನೆಲ್ಲ ಅಲ್ಟಾರ್ ನೇಟ್ ಪ್ರಯೋಗಗಳನ್ನ ಮಾಡ್ಬಹುದು ಅಂತ ಚಿಂತನೆ ನಡೆಸಿವೆ.

ಹೌದು, ರಾಜಾಧಾನಿ ಬೆಂಗಳೂರಿನ ಅಪಾರ್ಟ್ಮೆಂಟ್​ಗಳಿಗೆ ಸಧ್ಯ ವಾರಕ್ಕೊಮ್ಮೆ, ಎರಡು ದಿನಕ್ಕೆ ಒಮ್ಮೆ ನೀರು ಬಿಡುತ್ತಿದ್ದಾರೆ. ನೀರು ಬರ್ಲಿಲ್ಲ ಅಂದರೆ ಟ್ಯಾಂಕರ್ ಮೊರೆ ಹೋಗಲಾಗುತ್ತೆ. ಅದಲ್ಲದೇ ಟ್ಯಾಂಕರ್ ಗಳಿಗೆ ತುಂಬ ಹಣವನ್ನ ಕೂಡ ನಿಗದಿ ಮಾಡಲಾಗಿದೆ.‌ ಇದು ಜನರಿಗೆ ಮತ್ತೊಂದು ಹೊಡೆತ ಕೊಡುತ್ತಿದೆ. ಇನ್ನು ಎಲ್ಲಾ ಸಂಧರ್ಭದಲ್ಲಿ ಬೊರೆವೆಲ್ ನೀರನ್ನ ಬಳಸುವುದಕ್ಕೆ ಆಗೋದಿಲ್ಲ. ಬೋರ್ ವೆಲ್ ಬತ್ತು ಹೋದ್ರೆ ಅದು ಕೂಡ ಸಮಸ್ಯೆನೇ. ಹೀಗಾಗಿ ಅಪಾರ್ಟ್ಮೆಂಟ್ ಗಳಿಗೆ ಎಸ್​ಟಿಪಿ ಅಳವಡಿಸಿ ಅಂತ 2017 ರಲ್ಲಿ ಜಲಮಂಡಳಿ ಆದೇಶ ನೀಡಿತ್ತು. ಈ ಎಸ್​ಟಿಪಿಯಿಂದ ಬೆಂಗಳೂರಿನಲ್ಲಿ ಒಟ್ಟು 700 ಮೀ ಮೀಟರ್ (MLS) ನೀರು ಸಂಸ್ಕರಣೆಯಾಗಿ ಬರಲಿದೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಕೊವಿಡ್ ನಿಯಮ ಉಲ್ಲಂಘನೆ; ಕಾಂಗ್ರೆಸ್ ನಾಯಕರ ವಿರುದ್ಧದ ಕೇಸ್ ರದ್ದು

ಈ ನೀರನ್ನ ಗಾರ್ಡಾನ್ ಗಳಿಗೆ, ಕಾರ್ ಕ್ಲಿನಿಂಗ್​ಗೆ, ಕೈಗಾರಿಕೆಗಳಿಗೆ ಬಳಸಿಕೊಳ್ಳಬಹುದು. ಆದ್ರೆ ಇತ್ತೀಚೆಗೆ ಎಲ್ಲದಕ್ಕೂ ಫ್ರೆಶ್ ನೀರನ್ನ ಬಳಕೆ ಮಾಡಲಾಗುತ್ತಿದೆ. ಈ ಸಂಸ್ಕರಣಾ ನೀರನ್ನ ಬಳಕೆ ಮಾಡಿದ್ರೆ ಫ್ರೆಶ್ ನೀರು ಉಳಿತಾಯ ಆಗಲಿದೆ. ಇದರಿಂದ ಸ್ವಲ್ಪ ನೀರಿನ ಅಭಾವವನ್ನ ತಡೆಯಬಹುದು.‌ ಸಧ್ಯ ಎಲ್ಲಾ ಅಪಾರ್ಟ್ಮೆಂಟ್ ಗಳಲ್ಲಿ ಎಸ್​ಟಿಪಿ ಒಳಚರಂಡಿ ಸಂಸ್ಕರಣಾ ಘಟಕವನ್ನ ಅಳವಡಿಕೆ ಮಾಡಿಲ್ಲ.‌ ಹೀಗಾಗಿ ಜಲಮಂಡಳಿ ಅಪಾರ್ಟ್ಮೆಂಟ್ ಗಳಿಗೆ ಒಂದು ಎಸ್​ಟಿಪಿ ಅಳವಡಿಸಿ ಕೊಟ್ರೆ ನೀರು ಸಂಗ್ರಹಣೆ ಮಾಡಬಹುದು. ಆದ್ರೆ ಸಧ್ಯಕ್ಕೆ ಇರುವ ಎಸ್​ಟಿಪಿಗಳಲ್ಲಿ ಸಂಸ್ಕರಣೆಯಾಗುವ ನೀರನ್ನ ಎಲ್ಲಿಯು ಬಳಕೆ ಮಾಡ್ತಿಲ್ಲ. ಸಧ್ಯ ಸಂಸ್ಕರಣೆಯಾಗುತ್ತಿರುವ ನೀರಿನ ಪೈಕಿ 50% ರಷ್ಟು ನೀರನ್ನ ಅಪಾರ್ಟ್ಮೆಂಟ್ ಗಾರ್ಡಾನ್​ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಉಳಿದ 50% ರಷ್ಟು ನೀರನ್ಮ ಚರಂಡಿಗೆ ಕೆರೆಗಳಿಗೆ ಹೋಗುತ್ತಿದೆ. ಈ ನೀರನ್ನ ವೇಸ್ಡ್ ಮಾಡುವುದು ಬೇಡ ಅಂತ ಬೆಂಗಳೂರು ಅಪಾರ್ಟ್ಮೆಂಟ್ ಫಡರೇಷನ್ ನಾ ಕಮಿಟಿ ಸದಸ್ಯ ಪ್ರದೀಪ್ ಪೈ ಹೇಳಿದರು.

ಇನ್ನು, ಈ ಕುರಿತಾಗಿ ಜಲಮಂಡಳಿ ಅಧಿಕಾರಿಗಳನ್ನ ಪ್ರಶ್ನಿಸಿದ್ದಕ್ಕೆ ಸದ್ಯ ಅಪಾರ್ಟ್ಮೆಂಟ್​ಗಳೇ ಎಸ್​ಟಿಪಿಯನ್ನ ಅಳವಡಿಕೆ ಮಾಡಿಕೊಲ್ಳಲು ತಿಳಿಸಿದ್ದೇವೆ. ಸಂಸ್ಕರಣಾ ನೀರನ್ನ ಬಳಕೆ ಬಗ್ಗೆ ಚಿಂತನೆ ಮಾಡ್ತಿವಿ ಅಂತ ಜಲಮಂಡಳಿಯ ಚೀಫ್ ಎಂಜಿಯ ಸುರೇಶ್ ಮಾಹಿತಿ ನೀಡಿದ್ರು.

ಒಟ್ನಲ್ಲಿ, ಬೆಂಗಳೂರಿನಲ್ಲಿ ನೀರಿನ ಅಭಾವ ಜಾಸ್ತಿಯಾಗುತ್ತಿದ್ದು, ಜಲಮಂಡಳಿ ಈ ಎಸ್​ಟಿಪಿ ಕುರಿತಾಗಿ ಚಿಂತೆನ ನಡೆಸಿ ಈ ಯೋಜನೆಯನ್ನ ರೂಪಿಸಿಕೊಂಡು ನೀರನ್ನ ಉಳಿಸಬೇಕಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ