ಬಸ್‌ನಲ್ಲಿ ನಿಲ್ದಾಣಗಳ ವಿವರ ಘೋಷಣೆ ಮಾಡುವ ವ್ಯವಸ್ಥೆ ಮರುಜಾರಿ ಕೋರಿ ಹೈಕೋರ್ಟ್‌ಗೆ ಅರ್ಜಿ
bus stop announcement system: ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಈ ಹಿಂದೆ ನಿಲ್ದಾಣದ ಪ್ರಕಟಣೆ ಹೊರಡಿಸುತ್ತಿದ್ದರು. ಇದರಿಂದ ದೃಷ್ಟಿ ದೋಷ ಹೊಂದಿದವರಿಗೆ, ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು. ಆದರೆ ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಈಗ ಇಂತಹ ಸೌಲಭ್ಯವಿಲ್ಲ. ನೆರೆ ರಾಜ್ಯಗಳ ಸಾರಿಗೆ ಬಸ್‌ಗಳಲ್ಲಿ ಈ ಸೌಲಭ್ಯವಿದೆ. ಸೌಲಭ್ಯ ಮರು ಜಾರಿ ಕೋರಿ ಶ್ರೇಯಸ್ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 3 : ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಬಸ್ ನಿಲ್ದಾಣಗಳ (Bus stop) ವಿವರವನ್ನು ಘೋಷಿಸುವ ವ್ಯವಸ್ಥೆಯನ್ನು ಮರುಜಾರಿ ಮಾಡುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ. ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ನಿಲ್ದಾಣದ ವಿವರ ಘೋಷಣೆ (bus stop announcement system) ಕೋರಿ ದೃಷ್ಟಿ ದೋಷ ಹೊಂದಿರುವವರಿಂದ (Visual impairment) ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿದೆ. ಈ ಸಂಬಂಧ ನವೆಂಬರ್ 9ರೊಳಗೆ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸಲು ಹೈಕೋರ್ಟ್ (High Court) ಸೂಚನೆ ನೀಡಿದೆ.
ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಈ ಹಿಂದೆ ನಿಲ್ದಾಣದ ಪ್ರಕಟಣೆ ಹೊರಡಿಸುತ್ತಿದ್ದರು. ಇದರಿಂದ ದೃಷ್ಟಿ ದೋಷ ಹೊಂದಿದವರಿಗೆ, ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು. ಆದರೆ ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಈಗ ಇಂತಹ ಸೌಲಭ್ಯವಿಲ್ಲ. ನೆರೆ ರಾಜ್ಯಗಳ ಸಾರಿಗೆ ಬಸ್‌ಗಳಲ್ಲಿ ಈ ಸೌಲಭ್ಯವಿದೆ. ಸೌಲಭ್ಯ ಮರು ಜಾರಿ ಕೋರಿ ಶ್ರೇಯಸ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.
Also Read: ದೆಹಲಿ ಮೆಟ್ರೋ ಉದ್ಘೋಷಣೆಯನ್ನು ಅನುಕರಿಸಿದ ಯುವಕನ ವಿಡಿಯೋ ವೈರಲ್
ಸರ್ಕಾರ ಜನರಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳಬೇಕು. ಇತರೆ ರಾಜ್ಯಗಳಿಗೆ ಮಾದರಿಯಾಗುವಂತಹ ಯೋಜನೆ ರೂಪಿಸಬೇಕು ಎಂದು ಅಭಿಪ್ರಾಯಪಟ್ಟ ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ.ಕೃಷ್ಣ ಎಸ್ ದೀಕ್ಷಿತ್‌ರಿದ್ದ ಪೀಠ ನವೆಂಬರ್ 9ರೊಳಗೆ ಸಕಾರಾತ್ಮಕ ಪ್ರತಿಕ್ರಿಯೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ