ಬೆಂಗಳೂರು, (ಆಗಸ್ಟ್ 02): ಅಪಘಾತಗಳನ್ನು ನಿಯಂತ್ರಿಸಲು ಬೆಂಗಳೂರಿನ ನೈಸ್ ರಸ್ತೆಯಲ್ಲಿ ವಾಹನಗಳ ವೇಗದ ಮಿತಿ ಅಳವಡಿಕೆ ಮಾಡಲಾಗಿದೆ. ಇದರ ಜೊತೆಗೆ ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆಯವರಗೆ ನೈಸ್ ರಸ್ತೆಯಲ್ಲಿ ದ್ವಿಚಕ್ರ(ಬೈಕ್) ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ನೈಸ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಈ ಕ್ರಮಕೈಗೊಂಡಿದೆ.
ನಿಯಮ ಪಾಲನೆ ಜೊತೆಗೆ ಮಾರ್ಗ ಸೂಚಿಗಳಿದರೂ ಸಹ ಅವುಗಳನ್ನು ವಾಹನ ಚಾಲಕರು ಪಾಲನೆ ಮಾಡುತ್ತಿಲ್ಲ. ಅಜಾಗರೂಕತೆ ಚಾಲನೆ, ನಿರ್ಲಕ್ಷ್ಯತೆಯಿಂದ ರಸ್ತೆ ಅಪಘಾತ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ನೈಸ್ ರಸ್ತೆಯ ಸುತ್ತುಮುತ್ತಲಿನರು ಒಟ್ಟು ಎಂಟು ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವರದಿ ಆಧರಿಸಿ ಆಯುಕ್ತ ದಯಾನಂದ ಅವರು ಈ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಪೀಣ್ಯ ಫ್ಲೈಓವರ್ನಲ್ಲಿ ಘನ ವಾಹನ ಸಂಚಾರಕ್ಕೆ ಮತ್ತೆ ನಿರ್ಬಂಧ ಸಾಧ್ಯತೆ
ನೈಸ್ ರಸ್ತೆಯಲ್ಲಿ ಸಂಭವಿಸುತ್ತಿರುವ ವಾಹನಗಳ ಅಪಘಾತಗಳ ಬಗ್ಗೆ ಕಾಮಾಕ್ಷಿ ಪಾಳ್ಯ, ಬ್ಯಾಟರಾಯನಪುರ, ಕೆಂಗೇರಿ, ಹುಳಿಮಾವು, ತಲಘಟ್ಟಪುರ, ಎಲೆಕ್ಟ್ರಾನಿಕ್ ಸಿಟಿ,ಜ್ನಾನಭಾರತಿ, ಕೆ.ಎಸ್ ಠಾಣೆಯ ಠಾಣಾಧಿಕಾರಿಗಳು ವರದಿ ನೀಡಿದ್ದರು. ಇವರ ವರದಿ ಆಧಾರದ ಮೇಲೆ ಈ ಕ್ರಮಕೈಗೊಳ್ಳಲಾಗಿದೆ. ಇನ್ನು ಈ ಆದೇಶದ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಮೂರು ವರ್ಷಗಳಲ್ಲಿ ಅಂದರೆ 2022, 23 ಮತ್ತು 2024ರಲ್ಲಿ (ಜೂನ್) ಈ ನೈಸ್ ರಸ್ತೆಯಲ್ಲಿ ಸಂಭಿಸಿದ ಅಪಘಾತಗಳ ಅಂಕಿಸಂಖ್ಯೆ ಈ ಕೆಳಗಿನಂತಿದೆ.
ಹೀಗೆ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆ ಹಾಗೂ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲೂ ಸಹ ವಾಹನಗಳಿಗೆ ವೇಗ ಮಿತಿ ಅಳವಡಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:40 pm, Fri, 2 August 24