ಬೆಂಗಳೂರು: ಬೆಂಗಳೂರು (Bengaluru) ಮಹಾನಗರ ಅತಿವೇಗವಾಗಿ ಬೆಳೆಯುತ್ತಿದೆ. ಜನರಿಗಿಂತ ವಾಹನಗಳ (Vehicles) ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಇದಕ್ಕಾಗಿ ಸರ್ಕಾರ ವಿಶೇಷ ಯೊಜನೆ ತರಲಿದ್ದು, ಇನ್ನು 3 ತಿಂಗಳಲ್ಲಿ ಅದನ್ನ ನಿಮ್ಮ ಚರ್ಚೆಗೆ ತರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಕೆಹೆಚ್ಬಿ ವತಿಯಿಂದ ಬೃಹತ್ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಬಳಿಕ ಅವರು ಮಾತನಾಡಿದರು. 4 ಅಂತಸ್ತಿನ ಮನೆ ಇದ್ದರೆ ವಿದ್ಯುತ್ಚ್ಛಕ್ತಿ ಕೊಡುತ್ತಿರಲಿಲ್ಲ. ಜೊತೆಗೆ ಡಬಲ್ ಬಿಲ್ ಕಟ್ಟಬೇಕಿತ್ತು. ಅದನ್ನ ನಮ್ಮ ಸರ್ಕಾರ ಬಂದ ಮೇಲೆ ತೆಗೆದುಹಾಕಿದ್ದೇವೆ ಎಂದರು. ನಮ್ಮ ಸರ್ಕಾರ 18 ಲಕ್ಷ ಮನೆಗಳನ್ನು ನೋಂದಣಿ ಮಾಡಿದೆ. ಬರುವ ವರ್ಷದಲ್ಲಿ ಎಲ್ಲಾ ಮನೆಗಳಿಗೂ ಹಣ ಬರಲಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ 5 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಯೋಜನೆ: ಸಿಎಂ ಬೊಮ್ಮಾಯಿ
ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಯೋಜನೆಯಿದ್ದು, ಈಗಾಗಲೇ 20 ಸಾವಿರ ಮನೆಗಳ ನಿರ್ಮಾಣ ಪೂರ್ಣವಾಗಿದೆ. ಶೀಘ್ರವೇ ನೂತನ ಮನೆಗಳನ್ನು ಉದ್ಘಾಟನೆ ಮಾಡಲಿದ್ದೇವೆ. ಅತಿ ಹೆಚ್ಚಿನ ಅನುದಾನ ಯಶವಂತಪುರ ಕ್ಷೇತ್ರ ಪಡೆದಿದೆ. ಸೋಮಶೇಖರ್ ನನ್ನಿಂದ ಹೆಚ್ಚಿನ ಅನುದಾನ ಪಡೆದಿದ್ದಾರೆ. ಅದನ್ನ ಹೇಗೆ ಬಳಸಿಕೊಳ್ಳುತ್ತಾರೆ ನನಗೆ ಗೊತ್ತಿಲ್ಲ. ನಗರೋತ್ಥಾನ 6000 ಕೋಟಿ ಅನುದಾನ ನೀಡಿದ್ದೇವೆ. ಮಳೆಗಾಲ ಮುಗಿದ ಕೂಡಲೇ ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಸಿಎಂ ಬೊಮ್ಮಾಯಿಗೆ ಸನ್ಮಾನ
ಇನ್ನು ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 354 ಕೋಟಿ ಅನುದಾನ ಘೋಷಣೆ ಹಿನ್ನೆಲೆ ಆರ್.ಟಿ.ನಗರದ ನಿವಾಸದಲ್ಲಿ ಸಿಎಂ ಬೊಮ್ಮಾಯಿಗೆ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಲದಿಂದ ಸನ್ಮಾನ ಮಾಡಲಾಯಿತು. ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಮಹಾಮಂಡಳ ಅಧ್ಯಕ್ಷ ಶರಣು.ಬಿ ತಳ್ಳಿಕೇರಿ ಸೇರಿ ಹಲವರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:51 pm, Sun, 13 November 22