ವರ್ತೂರಿನಲ್ಲಿ ಲೇನ್ ಉಲ್ಲಂಘಿಸಿ ಟ್ರಾಫಿಕ್ ಜಾಮ್​ಗೆ ಕಾರಣವಾದ ಕಾರಿನ ವಿಡಿಯೋ ವೈರಲ್; ಪತ್ತೆಹೆಚ್ಚಿ ದಂಡ ವಿಧಿಸಿದ ಪೊಲೀಸರು

| Updated By: Ganapathi Sharma

Updated on: Aug 01, 2023 | 4:37 PM

ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರ ಅಧಿಕೃತ ಟ್ವಿಟರ್ ಖಾತೆಯು ಪೋಸ್ಟ್‌ಗೆ ಉತ್ತರಿಸಿದ್ದು, ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಸಂಚಾರ ಪೊಲೀಸರು ಕಾರನ್ನು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ.

ವರ್ತೂರಿನಲ್ಲಿ ಲೇನ್ ಉಲ್ಲಂಘಿಸಿ ಟ್ರಾಫಿಕ್ ಜಾಮ್​ಗೆ ಕಾರಣವಾದ ಕಾರಿನ ವಿಡಿಯೋ ವೈರಲ್; ಪತ್ತೆಹೆಚ್ಚಿ ದಂಡ ವಿಧಿಸಿದ ಪೊಲೀಸರು
ಟ್ರಾಫಿಕ್​ ಜಾಮ್​ಗೆ ಕಾರಣವಾದ ಕಾರು (ಟ್ವಿಟರ್ ವಿಡಿಯೋದಿಂದ ಸ್ಕ್ರೀನ್​​ಗ್ರ್ಯಾಬ್ ತೆಗೆದ ಚಿತ್ರ)
Follow us on

ಬೆಂಗಳೂರು: ವರ್ತೂರು ಬಳಿ ಟ್ರಾಫಿಕ್ ಜಾಮ್‌ಗೆ (Traffic Jam) ಕಾರಣವಾಗುವ ಕಿರಿದಾದ ರಸ್ತೆಯಲ್ಲಿ ಕಾರೊಂದು ಲೇನ್ ಶಿಸ್ತು ಉಲ್ಲಂಘಿಸಿ ಸಂಚಾರ ದಟ್ಟಣೆಗೆ ಕಾರಣವಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈಟ್‌ಫೀಲ್ಡ್ ಸಂಚಾರ ಪೊಲೀಸರು ಕಾರು ಮಾಲೀಕನನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ. ಅದೇ ರಸ್ತೆಯಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಹರಿಯಾಣದ ನಂಬರ್ ಪ್ಲೇಟ್ ಹೊಂದಿದ್ದ ಕಾರು ರಸ್ತೆಯ ರಾಂಗ್ ಸೈಡ್‌ನಲ್ಲಿ ಹೋಗಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿರುವುದು ವಿಡಿಯೋದಲ್ಲಿ ಕಾಣಿಸುತ್ತಿತ್ತು. ಸಂಚಾರಿ ನಿಯಮ ಪಾಲಿಸದ ಕಾರು ಚಾಲಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರ ಅಧಿಕೃತ ಟ್ವಿಟರ್ ಖಾತೆಯು ಪೋಸ್ಟ್‌ಗೆ ಉತ್ತರಿಸಿದ್ದು, ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಸಂಚಾರ ಪೊಲೀಸರು ಕಾರನ್ನು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್ ಪಡೆಯಲು ನೀವೂ ಅರ್ಹರೇ? ತಿಳಿಯುವ ವಿಧಾನ ಇಲ್ಲಿದೆ

ಲೇನ್ ಶಿಸ್ತು, ರಾಂಗ್ ಸೈಡ್​​ನಲ್ಲಿ ಚಾಲನೆ ಮಾಡುವುದು, ಎಡದಿಂದ ಓವರ್‌ಟೇಕ್ ಮಾಡುವುದು, ವಾಹನಗಳ ನಡುವಿನ ಅಂತರದಂತಹ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಟ್ರಾಫಿಕ್ ಪೊಲೀಸರಿಗೆ ವ್ಯಕ್ತಿಯೊಬ್ಬರು ವಿನಂತಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ