ಆಕಾಶದಲ್ಲಿ ಕಾಣಿಸಿಕೊಂಡ ಸ್ವರ್ಗದ ಬಾಗಿಲು! ನಿಗೂಢ ನೆರಳಿನ ಬಗ್ಗೆ ತಲೆ ಕೆಡಿಸಿಕೊಂಡ ಬೆಂಗಳೂರಿಗರು

Mysterious Shadow In Bengaluru: ಟ್ವಿಟರ್​ ಬಳಕೆದಾರರೊಬ್ಬರು ಆಕಾಶದಲ್ಲಿ ಬಾಗಿಲಿನಂತೆ ಕಾಣುವ ನಿಗೂಢ ಹೊಳೆಯುವ ಚಿತ್ರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆನೇಕರು ಇದು ಸ್ವರ್ಗದ ಬಾಗಿಲು ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಅಚ್ಚರಿ ಹೊರ ಹಾಕಿದ್ದಾರೆ.

ಆಕಾಶದಲ್ಲಿ ಕಾಣಿಸಿಕೊಂಡ ಸ್ವರ್ಗದ ಬಾಗಿಲು! ನಿಗೂಢ ನೆರಳಿನ ಬಗ್ಗೆ ತಲೆ ಕೆಡಿಸಿಕೊಂಡ ಬೆಂಗಳೂರಿಗರು
ಟ್ವಿಟರ್​ನಲ್ಲಿ ಹರಿದಾಡುತ್ತಿರುವ ಚಿತ್ರ
Edited By: ಆಯೇಷಾ ಬಾನು

Updated on: Jul 25, 2023 | 10:00 AM

ಬೆಂಗಳೂರು, ಜುಲೈ 25: ಸಿಲಿಕಾನ್ ಸಿಟಿ ಬೆಂಗಳೂರು(Bengaluru) ಊಟಿಯಂತಾಗಿದೆ. ಜಿನಿ ಜಿನಿ ಮಳೆ, ಮೋಡ ಕವಿದ ವಾತಾವರಣವಿದ್ದು ಕೂಲ್ ಕೂಲ್ ಆಗಿದೆ. ಆದ್ರೆ ನಿನ್ನೆ(ಜುಲೈ 24) ರಾತ್ರಿ ಆಕಾಶದಲ್ಲಿ ನಿಗೂಢ ನೆರಳು ಕಾಣಿಸಿಕೊಂಡಿದ್ದು ಟ್ವಿಟರ್​ನಲ್ಲಿ ಭಾರೀ ಚರ್ಚೆಯಾಗುತ್ತಿದೆ(Mysterious Shadow In Bengaluru). ಟ್ವಿಟರ್​ ಬಳಕೆದಾರರೊಬ್ಬರು ಆಕಾಶದಲ್ಲಿ ಬಾಗಿಲಿನಂತೆ ಕಾಣುವ ನಿಗೂಢ ಹೊಳೆಯುವ ಚಿತ್ರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆನೇಕರು ಇದು ಸ್ವರ್ಗದ ಬಾಗಿಲು ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಅಚ್ಚರಿ ಹೊರ ಹಾಕಿದ್ದಾರೆ.

ವಸೀಮ್ ಎಂಬ ಟ್ವಿಟರ್​ ಬಳಕೆದಾರರೊಬ್ಬರು ವಿಡಿಯೋವನ್ನು ಟ್ವೀಟ್ ಮಾಡಿದ್ದು “ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ನಿನ್ನೆ ರಾತ್ರಿ ಆಕಾಶದಲ್ಲಿ ನಿಗೂಢ ನೆರಳು ಕಾಣಿಸಿಕೊಂಡಿದೆ. ಬೇರೆ ಯಾರಾದರೂ ನೋಡಿದ್ದೀರಾ? ಇದು ಏನಾಗಿರಬಹುದು? ಕಟ್ಟಡದ ನೆರಳಾ? ಹಾಗಿದ್ದಲ್ಲಿ, ಇದರ ಹಿಂದಿನ ವಿಜ್ಞಾನ ಏನಿರಬಹುದು? ಎಂದು ಅವರು ವೀಡಿಯೊಗೆ ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಮಳೆಗೆ ಅಪಾರ ಆಸ್ತಿ ಹಾನಿ; ನಡುಗಡ್ಡೆಯಾದ ಕೆಲ ಗ್ರಾಮಗಳು

ಈ ವಿಡಿಯೋ ಟ್ವಿಟರ್​ನಲ್ಲಿ ಚರ್ಚೆಗೆ ಕಾರಣವಾಗಿದ್ದು ಜನರು ಆಶ್ಚರ್ಯ ಪಡುವಂತೆ ಮಾಡಿದೆ. ಕೇವಲರು ಇದು ಯಾವುದೋ ಎತ್ತರದ ಕಟ್ಟಡದ ಲೈಟ್​ನ ನೆರಳಿರಬಹುದು ಎಂದು ಊಹಿಸಿದರೆ ಇನ್ನೂ ಕೆಲವರು ಇದನ್ನು ‘ಬ್ರೋಕನ್ ಸ್ಪೆಕ್ಟರ್’ ಎಂದು ಊಹಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us