AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್ ಕಚೇರಿಯಲ್ಲಿ ನಡೆದ ‘ಮ್ಯಾಂಗೋ ಫೆಸ್ಟಿವಲ್’ ವಿಡಿಯೋ ವೈರಲ್: ಉದ್ಯೋಗಿಯ ಅದೃಷ್ಟಕ್ಕೆ ನೆಟ್ಟಿಗರು ಫಿದಾ!

ಬೆಂಗಳೂರಿನ ಗೂಗಲ್ ಕಚೇರಿಯಲ್ಲಿ ನಡೆದ ವಿಶಿಷ್ಟ ‘ಮ್ಯಾಂಗೋ ಫೆಸ್ಟಿವಲ್’ (ಮಾವಿನಹಣ್ಣಿನ ಹಬ್ಬ) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಉದ್ಯೋಗಿಯೊಬ್ಬರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಿವಿಧ ತಳಿಯ ಮಾವಿನಹಣ್ಣುಗಳು, ಮ್ಯಾಂಗೋ ಕೇಕ್ ಹಾಗೂ ಶೇಕ್‌ಗಳ ಭಕ್ಷ್ಯಗಳು ಕಣ್ಣು ಸೆಳೆಯುತ್ತಿವೆ. ಗೂಗಲ್ ಕಚೇರಿಯ ಈ ಅದ್ಭುತ ವಾತಾವರಣ ಮತ್ತು ಐಷಾರಾಮಿ ಸೌಲಭ್ಯಗಳನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದು, ತಮಗೂ ಇಂತಹ ಕಚೇರಿಯಲ್ಲಿ ಕೆಲಸ ಬೇಕೆಂದು ಕಾಮೆಂಟ್ ಮಾಡುತ್ತಿದ್ದಾರೆ.

ಗೂಗಲ್ ಕಚೇರಿಯಲ್ಲಿ ನಡೆದ 'ಮ್ಯಾಂಗೋ ಫೆಸ್ಟಿವಲ್' ವಿಡಿಯೋ ವೈರಲ್: ಉದ್ಯೋಗಿಯ ಅದೃಷ್ಟಕ್ಕೆ ನೆಟ್ಟಿಗರು ಫಿದಾ!
ಗೂಗಲ್ ಕಚೇರಿಯಲ್ಲಿ ನಡೆದ 'ಮ್ಯಾಂಗೋ ಫೆಸ್ಟಿವಲ್' ವಿಡಿಯೋ ವೈರಲ್Image Credit source: unfilteredgazal instagram account
ಭಾವನಾ ಹೆಗಡೆ
|

Updated on: Jun 13, 2026 | 3:29 PM

Share

ಬೆಂಗಳೂರು, ಜೂನ್ 13: ನಗರದಲ್ಲಿರುವ ಗೂಗಲ್ (Google) ಕಚೇರಿಯಲ್ಲಿ ನಡೆದ ವಿಶಿಷ್ಟ ‘ಮ್ಯಾಂಗೋ ಫೆಸ್ಟಿವಲ್’ (ಮಾವಿನಹಣ್ಣಿನ ಹಬ್ಬ) ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇಂಟರ್ನೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಅಲ್ಲಿನ ಉದ್ಯೋಗಿಯೊಬ್ಬರು ಫೆಸ್ಟಿವಲ್​ನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾನಾ ಬಗೆಯ ಮಾವಿನ ತಿನಿಸುಗಳನ್ನು ತೋರಿಸಿ ನೆಟ್ಟಿಗರ ಬಾಯಲ್ಲಿ ನೀರೂರುವಂತೆ ಮಾಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನ ಗೂಗಲ್ ಕಚೇರಿಯಲ್ಲಿ ನಡೆದ ಮಾವಿನಹಣ್ಣಿನ ಹಬ್ಬದ ವಿಡಿಯೋ ವೈರಲ್ ಆಗಿದೆ.
  • ಮಾವಿನಹಣ್ಣಿನ ವಿಧವಿಧದ ತಿನಿಸುಗಳನ್ನು ಸವಿಯಲು ಉದ್ಯೋಗಿ ಕಚೇರಿಗೆ ಭೇಟಿ ನೀಡಿದ್ದಾರೆ.
  • ಗೂಗಲ್ ವರ್ಕ್ ಕಲ್ಚರ್ ನೋಡಿ ತಮಗೂ ಕೆಲಸ ಬೇಕೆಂದು ನೆಟ್ಟಿಗರು ಬಯಸಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಯುವತಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ಮಾವಿನ ಹಣ್ಣಿನ ಖಾದ್ಯಗಳನ್ನು ಸವಿಯಲೆಂದೇ ಸಂಜೆ 4 ಗಂಟೆಗೆ ಆಫೀಸ್ ತಲುಪಿದ ಆಕೆ, ಅಲ್ಲಿನ ಸುಂದರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಣ್ಮನ ಸೆಳೆಯುವ ಮಾವಿನ ತಿನಿಸುಗಳು

ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಾವಿನಹಣ್ಣಿನ ಪ್ರಿಯರಿಗೆ ಸ್ವರ್ಗವೇ ಸೃಷ್ಟಿಯಾದಂತಿತ್ತು. ದೊಡ್ಡ ದೊಡ್ಡ ಟ್ರೇಗಳಲ್ಲಿ ಜೋಡಿಸಿಟ್ಟ ವಿವಿಧ ತಳಿಯ ಮಾವಿನಹಣ್ಣುಗಳು, ಸುಂದರವಾದ ಮ್ಯಾಂಗೋ ಕೇಕ್, ಮ್ಯಾಂಗೋ ಟಾರ್ಟ್ಸ್ (Tarts), ಮಾವಿನಹಣ್ಣಿನ ಸ್ಲೈಸ್‌ಗಳು ಹಾಗೂ ಬಾಯಲ್ಲಿ ನೀರೂರಿಸುವ ಮ್ಯಾಂಗೋ ಶೇಕ್‌ಗಳು ಸೇರಿದಂತೆ ಮಾವಿನಹಣ್ಣಿನಿಂದ ಸಿದ್ಧಪಡಿಸಿದ ಹತ್ತಾರು ಬಗೆಯ ಭಕ್ಷ್ಯಗಳು ಈ ಹಬ್ಬದ ಆಕರ್ಷಣೆಯಾಗಿದ್ದವು.

ನೆಟ್ಟಿಗರ ಪ್ರತಿಕ್ರಿಯೆ

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಗೂಗಲ್ ಕಚೇರಿಯ ಈ ಐಷಾರಾಮಿ ವರ್ಕ್‌ ಕಲ್ಚರ್ ಮತ್ತು ಸೌಲಭ್ಯಗಳನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದಾರೆ. ನನಗೂ ಗೂಗಲ್‌ನಲ್ಲಿ ಕೆಲಸ ಬೇಕು, ಅಲ್ಲಿಗೆ ಸೇರಲು ಹೇಗೆ ತಯಾರಿ ನಡೆಸಬೇಕು? ಎಂದು ಕೆಲವರು ಕೇಳಿದ್ದರೆ, “ನಾನು ಮಾವಿನಹಣ್ಣಿನ ದೊಡ್ಡ ಅಭಿಮಾನಿ, ಗೂಗಲ್ ಕಚೇರಿಯ ಈ ಸಂಭ್ರಮ ನೋಡಿ ನನಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ. ಕಚೇರಿಗಳಲ್ಲಿ ಇಂತಹ ಹಬ್ಬಗಳು ಉದ್ಯೋಗಿಗಳ ಉತ್ಸಾಹ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತವೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಇಂಡೋನೇಷ್ಯಾದ 1,000 ವರ್ಷದ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ