
ಬೆಂಗಳೂರು, ನವೆಂಬರ್ 09: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಬಿಂದಾಸ್ ಲೈಫ್ ಬಗ್ಗೆ ಮೇಲಿಂದ ಮೇಲೆ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ನಿನ್ನೆಯಷ್ಟೇ ರೇಪಿಸ್ಟ್ ಉಮೇಶ್ ರೆಡ್ಡಿ, ತರುಣ್ ಕೊಂಡೂರು, ಶಂಕಿತ ಉಗ್ರ ಶಕೀಲ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್ ಆಗಿದ್ದವು. ಈ ನಡುವೆ ಕರ್ನಾಟಕದ ಜೈಲಿನ ಮತ್ತೊಂದು ವಿಡಿಯೋ ಹೊರ ಬಂದಿದ್ದು, ಮದ್ಯಸೇವಿಸಿ ಕೈದಿಗಳು ಡ್ಯಾನ್ಸ್ ಮಾಡೋ ವಿಡಿಯೋ ಭಾರಿ ಚರ್ಚೆ ಹುಟ್ಟುಹಾಕಿದೆ. ಈ ವಿಡಿಯೋಗಳು ಪರಪ್ಪನ ಅಗ್ರಹಾರ ಜೈಲಿನದ್ದಾ ಅಥವಾ ಬೇರೆ ಜೈಲಿನದ್ದಾ ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ.
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್ ಆಗಿರುವ ಬೆನ್ನಲ್ಲೇ ಹೊರಬಂದ ವಿಡಿಯೋಗಳು 2023ರದ್ದು ಎಂದು ಜೈಲಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಆ ಎಲ್ಲಾ ವಿಡಿಯೋಗಳು ಇದೇ ವರ್ಷದ್ದು ಎನ್ನಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಬಂಧನ ಆಗಿರುವ ರನ್ಯಾ ಪ್ರಿಯಕರ ತರುಣ್ ಅರೆಸ್ಟ್ ಆಗಿರೋದು ಕಳೆದ ಮಾರ್ಚ್ನಲ್ಲಿ. ವೈರಲ್ ಆಗಿರುವ ವಿಡಿಯೋಗಳಲ್ಲಿ ತರುಣ್ ಕೂಡ ಇದ್ದು, ಆರೋಪದಿಂದ ತಪ್ಪಿಸಿಕೊಳ್ಳಲು ಜೈಲಧಿಕಾರಿಗಳು ಇದು ಹಳೆಯ ವಿಡಿಯೋ ಎಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವರದಿ: ವಿಕಾಸ್ ಟಿವಿ9, ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:18 pm, Sun, 9 November 25