ಬೆಂಗಳೂರು: ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ(Voters Data Theft Case) ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ವೋಟ್ ಕಳ್ಳತನ ನೋಟ್ ಪ್ರಿಂಟ್ ಮಾಡಿದ್ದಷ್ಟೇ ಅಪರಾಧ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಆಕ್ರೋಶ ಹೊರ ಹಾಕಿದ್ದಾರೆ.
ಬಿಎಲ್ಒಗಳನ್ನು ನೇಮಕ ಮಾಡುವ ಅಧಿಕಾರ ಯಾರಿಗೂ ಇಲ್ಲ. ಪಕ್ಷದಿಂದ ನೇಮಕ ಮಾಡಿದರೂ ತಹಶೀಲ್ದಾರ್ ಸಹಿ ಹಾಕಬೇಕು. ನಮ್ಮ ಅವಧಿಯಲ್ಲಿ ಅಕ್ರಮ ಆಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ. ರಾಜರಾಜೇಶ್ವರಿನಗರದಲ್ಲಿ ಗೌಡ ಎಂಬ ಹೆಸರು ಡಿಲೀಟ್ ಮಾಡಿದ್ದಾರೆ. ಗೌಡ ಅಂತ ಇದ್ರೆ ಡಿಲಿಟ್ ಮಾಡಿದ್ದಾರೆ ಎಂದು ಶಾಸಕ ಮುನಿರತ್ನ ಹೆಸರು ಪ್ರಸ್ತಾಪಿಸದೇ ಡಿಕೆ ಶಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಸಚಿವ ಡಾ.ಅಶ್ವತ್ಥ್ ನಾರಾಯಣಗೆ ಡಿಕೆ ಶಿವಕುಮಾರ್ ಟಾಂಗ್
ದಲಿತರು, ಹಿಂದುಳಿದ, ಮುಸ್ಲಿಮರ ಮತಗಳನ್ನ ಡಿಲೀಟ್ ಮಾಡಿದ್ದಾರೆ. ಈ ಅಕ್ರಮದಲ್ಲಿ ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದಾರೆ. ನನ್ನ ಮೇಲೂ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆ ದಾಖಲಿಸಲಿ ನನಗೇನು ಭಯವಿಲ್ಲ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಹಿರಿಯ ಅಧಿಕಾರಿಗಳು ನಮಗೆ ಮೇಲಿನಿಂದ ಆದೇಶ ಇತ್ತು ಮಾಡಿದ್ದೇವೆಂದು ಹೇಳಿದ್ದಾರೆ. ಇದು ನ್ಯಾಯಾಂಗ ತನಿಖೆ ಆಗಬೇಕು. ಡಿಲಿಟ್ ಮಾಡಲು ಅರ್ಜಿ ಕೊಡಬೇಕು. ಮನೆ ಅಕ್ಕಪಕ್ಕ ಮಹಜರ್ ಮಾಡಬೇಕು. ಬಿಎಲ್ಓಗಳನ್ನ ನೇಮಕ ಮಾಡಿದವರ ವಿರುದ್ಧ ಕ್ರಮ ಆಗಬೇಕು. 28 ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ನಡೆದಿದೆ. ಇಡೀ 28 ಕ್ಷೇತ್ರಗಳಲ್ಲಿ ಮತ್ತೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಶಾಸಕರ ಕಚೇರಿಯಲ್ಲಿ ನಡೆದ ಪರಿಷ್ಕರಣೆ ಬೇಡ. ದುಡ್ಡು ಎಲ್ಲಿಂದ ಹೋಯಿತು? ಯಾರು ಕೊಟ್ರು ಅನ್ನೋದು ತನಿಖೆ ಆಗಲಿ. ಚಿಲುಮೆ ನನಗೆ ಪರಿಚಯ ಇಲ್ಲ ಎಂದು ಮಂತ್ರಿ ಹೇಳಿದ್ರು . ಈಗ ದುರುಪಯೋಗ ಇಲ್ಲ ಎಂದಿದ್ದಾರೆ. ಸಿಎಂ ಗಮನಕ್ಕೆ ತರದೇ ಈ ಕೆಲಸ ಸಾಧ್ಯವಿಲ್ಲ. ಮಹಾದೇವಪುರದಲ್ಲಿ ಶಾಸಕರ ಸೂಚನೆಯಂತೆ ಕೆಲಸ ಮಾಡಿದ್ದೇವೆಂದು ಹೇಳಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ. ವೋಟರ್ ಐಡಿ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ರು.
ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು. ಉಪ ಚುನಾವಣಾ ಆಯುಕ್ತರು ನಮ್ಮ ದೂರನ್ನು ಗಮನಿಸಿದ್ದಾರೆ. ಚುನಾವಣಾ ಆಯೋಗ ಕೈಗೊಂಡ ಕ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಸಿಎಂ, ಸಚಿವರು, ಶಾಸಕರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಇಲ್ಲದ ಪರಮಾಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ